ಮ್ಯಾಂಚೆಸ್ಟರ್: ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಇಂದು ನಿರ್ಣಾಯಕ ಮೂರನೆ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾನುವಾರ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕಿದೆ. ಉಭಯ ತಂಡಗಳು 1-1 ಸಮಬಲ ಸಾಧಿಸಿವೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಯಶಸ್ಸಿ ಕಂಡಿತ್ತು. ಮೊನ್ನೆ ಎರಡನೆ ಏಕದಿನ ಪಂದ್ಯದಲ್ಲಿ 247ರನ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿತ್ತು.
2019ರ ವಿಶ್ವಕಪ್ ಸೆಮಿಫೈನಲ್‍ಲ್ಲಿ ಭಾರತ ತಂಡದ ಇದೇ ಟ್ರಾಫೋರ್ಡ್ ಮೈದಾನದಲ್ಲಿ ಸೋಲು ಕಂಡಿತ್ತು. ಅನುಭಿವಿ ಬ್ಯಾಟರ್ ಶಿಖರ್ ಧವನ್, ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿದ್ದಾರೆ. ಮೂರನೆ ಪಂದ್ಯದಲ್ಲಿ ದೃಷ್ಟಿಕೋನ ಬದಲಿಸಬೇಕಿದೆ. ವೇಗಿ ಜಸ್ಪ್ರೀತ್ ಬುಮ್ರಾ ಏಕಾಂಗಿಯಾಗಿ ಹೋರಾಟ ಮಾಡಿ ಪಂದ್ಯವನ್ನು ಗೆದ್ದುಕೊಟ್ಟಿದ್ದರು.
2023ರ ವಿಶ್ವಕಪ್ ದೃಷ್ಟಿಯಿಂದ ಶಿಖರ್ ಧವನ್ ಮೊದಲ ಆಯ್ಕೆಯಾಗಿರುತ್ತಾರೆ. 37 ವರ್ಷದ ಧವನ್ ತಮ್ಮ ಸ್ಥಾನ ಉಳಿಸಿಕೊಳ್ಳಬೇಕಿದ್ದಲ್ಲಿ ರನ್ ಮಳೆ ಸುರಿಸಬೇಕಿದೆ.
ಇನ್ನು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ತಲೆ ನೋವಾಗಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್‍ಗೆ ಕೆಲ ಸಮಯ ವಿಶ್ರಾಂತಿ ಬೇಕಿದ್ದು ನಂತರ ನೆಟ್ಸ್‍ನಲ್ಲಿ ಅಭ್ಯಾಸ ಮಾಡಬೇಕಿದೆ.
ಇನ್ನು ಬೌಲಿಂಗ್ ವಿಭಾಗದ ಬಗ್ಗೆಯೂ ಗಮನ ನೀಡಬೇಕಿದೆ. ಪ್ರಮುಖ ವೇಗಿ ಬುಮ್ರಾ ತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಮತ್ತೊರ್ವ ವೇಗಿ ಮೊಹ್ಮದ್ ಶಮಿ ನಿರಾಸೆ ಮೂಡಿಸಿದ್ದಾರೆ. ಆದರೆ ಯಜ್ವಿಂದರ್ ಚಾಹಲ್ ಸ್ಪಿನ್ ಮ್ಯಾಜಿಕ್ ಮಾಡಿ ತಂಡಕ್ಕೆ ನೆರವಾಗುತ್ತಿದ್ದಾರೆ.
ಕನ್ನಡಿಗ ಪ್ರಸಿದ್ಧ ಕೃಷ್ಣಗೆ ತಮ್ಮ ಎತ್ತರದ ಸಹಾಯದಿಂದ ಬೌನ್ಸರ್ ಹಾಕುವ ತಾಕತ್ತು ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ವೇಗದಲ್ಲಿ ಸಮತೋಲನ ಕಾಪಾಡಿಕೊಂಡಿದ್ದಾರೆ. ರವೀಂದ್ರ ಜಡೇಜಾ ಬೌಲಿಂಗ್‍ನಲ್ಲೂ ಮಿಂಚಬೇಕಿದೆ.
ಇನ್ನು ಇಂಗ್ಲೆಂಡ್ ತಂಡ ಅಂತಿಮ ಕದನದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ. ತಂಡದ ಆಟಗಾರರಾದ ಹ್ಯಾರಿ ಬ್ರೂಕ್, ಫಿಲ್ ಸಾಲ್ಟ್ ಮತ್ತು ಮಾಟ್ ಪಾರ್ಕಿನಸನ್ ಅವರುಗಳನ್ನ ತಂಡದಿಂದ ಬಿಡುಗಡೆ ಮಾಡಿದೆ.
ಇಂದಿನ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಯಲಿದೆ. ಬ್ಯಾಟಿಂಗ್ ನಲ್ಲಿ ಜೋಸ್ ಬಟ್ಲರ್, ಜೋ ರೂಟ್, ಜಾನಿ ಬೈರ್‍ಸ್ಟೊ ಸಿಡಿದರೆ ಆಂಗ್ಲರು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಸಂಭಾವ್ಯ ತಂಡ :
ಭಾರತ ತಂಡ: ರೋಹಿತ್ ಶರ್ಮಾ (ನಾಯಕ),ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್, ಹಾರ್ದಿಕ್ ಪಾಂಡ್ಯಘಿ, ರವೀಂದ್ರ ಜಡೇಜಾ, ಮೊಹ್ಮದ್ ಶಮಿ, ಜಸ್ಪ್ರೀತ್ ಬುಮ್ರಾಘಿ, ಯಜ್ವಿಂದರ್ ಚಾಹಲ್, ಪ್ರಸಿದ್ಧ ಕೃಷ್ಣ.
ಇಂಗ್ಲೆಂಡ್ ತಂಡ: ಜಾಸನ್ ರಾಯ್, ಜಾನಿ ಬೈರ್‍ಸ್ಟೊಘಿ, ಜೋ ರೂಟ್, ಬೆನ್ ಸ್ಟೋಕ್ಸ್‍ಘಿ, ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಲಿಯಾಮ್ ಲಿವೀಂಗ್ ಸ್ಟೋನ್, ಮೊಯಿನ್ ಅಲಿ, ಡೇವಿಡ್ ವಿಲ್ಲಿಘಿ, ಕ್ರೇಗ್ ಒವರ್‍ಟನ್, ಬ್ರೈಡಾನ್ ಕಾರ್ಸೆ, ರೀಸ್ ಟಾಪ್ಲಿ.