ಬರ್ಮಿಂಗ್‍ಹ್ಯಾಂ: ಮೊದಲ ಟಿ20ಯಲ್ಲಿ ಇಂಗ್ಲೆಂಡನ್ನು ನಿರ್ಣಾಯಕವಾಗಿ ಸೋಲಿಸಿದ ಭಾರತವು ಇಂದು ನಡೆಯುವ ಎರಡನೇ ಪಂದ್ಯವನ್ನು ಕೂಡ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಹವಣಿಕೆಯಲ್ಲಿದೆ.
ಭಾರತದ ಬಿ ತಂಡ ಎಂದು ಪರಿಗಣಿಸಲ್ಪಟ್ಟಿರುವ ಈಗಿನ ತಂಡದ ಹಲವು ಆಟಗಾರರು ಉತ್ತಮ ನಿರ್ವಹಣೆ ನೀಡುತ್ತಾ ಹಲವಾರು ಹಿರಿಯ ಆಟಗಾರರಿಗೆ ಸವಾಲೊಡ್ಡಿರುವುದು ನಿಜ. ಆದರೆ ಇಂದು ಕೆಲವು ಹಿರಿಯ ಆಟಗಾರರೂ ಮರಳುತ್ತಿರುವುದರಿಂದ ನಾಯಕ ರೋಹಿತ್‍ಗೆ ಅಂತಿಮ ತಂಡವನ್ನು ಆಯುವುದೇ ಸವಾಲಾಗಲಿದೆ.
ಮೊದಲ ಪಂದ್ಯಕ್ಕೆ ಲಯರಾಗದಿದ್ದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಬೂಮ್ರಾ, ರವೀಂದ್ರ ಜಡೇಜಾ ಮೊದಲಾದವರು ಪುನರಾಗಮಿಸಿದ್ದಾರೆ. ಯಾರನ್ನು ಬಿಡುವುದು ಯಾರನ್ನು ಸೇರಿಸುವುದು ಎಂಬ ದ್ವಂದ್ವ ರೋಹಿತ್‍ರನ್ನು ಕಾಡಲಿರುವುದು ಖಂಡಿತ.
ವಿರಾಟ್ ಕೊಹ್ಲಿಯಂತೂ ತಮ್ಮ ಸ್ಥಾನಕ್ಕೆ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ವಿಶ್ವಕಪ್‍ಗೆ ಸ್ಥಾನ ಉಳಿಸಿಕೊಳ್ಳಬೇಕಾದರೆ ಅವರು ದೊಡ್ಡ ಮಟ್ಟದ ರನ್ ಗಳಿಸುವುದು ಮುಖ್ಯವಾಗಿದೆ. ಅವರ ಸ್ಥಾನಕ್ಕೆ ದೀಪಕ್ ಹೂಡಾ ಸ್ಪರ್ಧೆ ನೀಡುತ್ತಿದ್ದಾರೆ. ಕೀಪರ್ ಆಗಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ನಡುವೆ ಆಯ್ಕೆ ನಡೆಯಬೇಕಿದೆ.
ಇಂದಿನದು ಹಗಲು ಪಂದ್ಯವಾಗಿದ್ದುಘಿ, ಭಾರತೀಯ ಕಾಲಮಾನ್ಯ ರೀತ್ಯಾ 7 ಗಂಟೆಗೆ ಶುರುವಾಗಲಿದೆ. ಇಲ್ಲಿನ ಪಿಚ್ ಮೊದಲು ಬ್ಯಾಟಿಂಗ್ ಮಾಡುವವರಿಗೆ ಹೆಚ್ಚು ಅನುಕೂಲಕರವಾಗಿದೆ ಎನ್ನಲಾಗಿದೆ. ಇಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳೇ ಗೆದ್ದಿವೆ.
ಭಾರತವು ಫೀಲ್ಡಿಂಗ್‍ನಲ್ಲಿ ಹೆಚ್ಚು ಸುಧಾರಿಸಿಕೊಳ್ಳಬೇಕಿದೆ ಎಂದು ನಾಯಕ ರೋಹಿತ್ ಶರ್ಮಾ ಅಭಿಪ್ರಾಯಿಸುತ್ತಾರೆ. ಮೊದಲ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ದೊಡ್ಡ ಮಟ್ಟದ್ದಾಗಿರಲಿಲ್ಲ. ಕೆಲವು ಕ್ಯಾಚ್‍ಗಳನ್ನೂ ಕೈಚೆಲ್ಲಲಾಗಿತ್ತು.
ಅದೇರೀತಿ ಡೆತ್‍ಓವರ್‍ಗಳಲ್ಲಿ ಹೆಚ್ಚು ರನ್ ಗಳಿಸುವ ಹಾದಿಗೆ ಭಾರತ ಮರಳಬೇಕಿದೆ. ಐರ್ಲೆಂಡ್ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧ ಅಂತಿಮ ಓವರುಗಳಲ್ಲಿ ಭಾರತವು ಕಡಿಮೆ ರನ್ ಕಲೆ ಹಾಕಿತ್ತು.