Thursday, November 21, 2024

Latest Posts

ಇಂದು ಭಾರತ, ಪಾಕಿಸ್ಥಾನ ಸೂಪರ್ 4 ಮಹಾ ಫೈಟ್

- Advertisement -

ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ  ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಇಂದು ಸೂಪರ್ 4 ಹಂತದಲ್ಲಿ ಮುಖಾ ಮುಖಿಯಾಗ ಲಿವೆ.

ಇಲ್ಲಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ಹೋರಾಟದಲ್ಲಿ ಮತ್ತೊಂದು ರೋಚಕ ಕದನ ನಿರೀಕ್ಷಿಸಲಾಗಿದೆ.

ಲೀಗ್ ಪಂದ್ಯದಲ್ಲಿ ಭಾರತ, ಪಾಕಿಸ್ಥಾನ ವಿರುದ್ಧ 5 ವಿಕೆಟ್‍ಗಳ ರೋಚಕ ದಾಖಲಿಸಿತ್ತು. ಲೀಗ್ ಪಂದ್ಯದಲ್ಲಿ ಗೆದ್ದಿರುವುದರಿಂದ ರೋಹಿತ್ ಪಡೆ  ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇತ್ತ ಪಾಕಿಸ್ಥಾನ ತಂಡಕ್ಕೆ ಇದು ಸೇಡಿನ ಪಂದ್ಯವಾಗಿದೆ.

ಬಲಿಷ್ಠ ಪಾಕಿಸ್ಥಾನ ಎದುರು ಭಾರತದ ಅಗ್ರ ಬ್ಯಾಟಿಂಗ್ ಕ್ರಮಾಂಕ ದೊಡ್ಡ ತಲೆ ನೋವಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊನ್ನೆ ಹಾಂಗ್‍ಕಾಂಗ್ ವಿರುದ್ಧ 150 ರನ್ ಬಿಟ್ಟುಕೊಟ್ಟಿದ್ದರು.

ಈ ಪಂದ್ಯಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಇಲ್ಲದೇ ಇರುವುದು ರೋಹಿತ್ ಪಡೆಗೆ ಹಿನ್ನಡೆಯಾಗಿದೆ. ಅವರ ಸ್ಥಾನವನ್ನು ಅಕ್ಷರ್ ಪಟೇಲ್ ತುಂಬಿದರೂ ತಂಡದಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ.

ಕಳೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರನ್ನು ನಾಲ್ಕನೆ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಬಲಗೈ ಎಡಗೈ ಪ್ರಯೋಗ ಮಾಡಲಾಗಿತ್ತು.ಅಂದು ರಿಷಬ್ ಪಂತ್ ಅವರನ್ನು ಕೈಬಿಡಲಾಗಿತ್ತು.

ನಾಯಕ ರೋಹಿತ್ ಶರ್ಮಾ ಮತ್ತು ತರಬೇತುದಾರ ರಾಹುಲ್ ದ್ರಾವಿಡ್ ಇಂದು ಪ್ರಯೋಗ ಮಾಡುವ ಸಾಧ್ಯೆತೆ ಇದೆ. ಅಗ್ರ ಆರರಲ್ಲಿ ಎಡಗೈ ಬ್ಯಾಟರ್ ಬೇಕಾಗಿದ್ದಾರೆ.

ಕಳೆದ ಭಾನುವಾರ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಏಕಾಂದಿ ಹೋರಾಟ ಮಾಡಿ ಕೊನೆಯ ಓವರ್‍ನಲ್ಲಿ ಗೆಲುವು ತಂದಕೊಟ್ಟಿದ್ದರು. ಇದೇ ಲಯವನ್ನು ಇಂದಿನ ಪಂದ್ಯದಲ್ಲೂ ನಿರೀಕ್ಷಿಸಲಾಗಿದೆ.

ಭಾರತ ತಂಡದಲ್ಲಿ ಪ್ರತಿಭಾನ್ವಿತಾ ಆಟಗಾರರಿದ್ದರೂ ಪವರ್‍ಪ್ಲೇಯಲ್ಲಿ ಅಗ್ರ ಬ್ಯಾಟರ್‍ಗಳ ನಿಲುವು ಚಿಂತೆಗೀಡು ಮಾಡಿದೆ.

ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ರನ್ ಮಳೆ ಸುರಿಸುವ ಬ್ಯಾಟರ್‍ಗಳಾಗಿದ್ದಾರೆ. ಆದರೆ ನಿಧಾನಗತಿಯ ಪಿಚ್ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಸೂರ್ಯ ಕುಮಾರ್ ಯಾದವ್ ಅವರ ಚಾಣಾಕ್ಷ ಬ್ಯಾಟಿಂಗ್ ನೆರೆವಿನಿಂದ ಹಾಂಗ್‍ಕಾಂಗ್ ವಿರುದ್ಧ ದೊಡ್ಡ ಮೊತ್ತ ಕಲೆ ಹಾಕಲು ಸಹಾಯವಾಯಿತು. ಕನ್ನಡಿಗ ಕೆ.ಎಲ್. ರಾಹುಲ್ ಮೊನ್ನೆ 39 ಎಸೆತದಲ್ಲಿ 36 ರನ್ ಹೊಡೆದಿದ್ದು ಅವರು ಸುಧಾರಿಸಬೇಕಿದೆ.

ರಾಹುಲ್, ನಾಯಕ ರೋಹಿತ್, ವಿರಾಟ್ ಕೊಹ್ಲಿ ಜೋಡಿಗಳು ಯಶಸ್ಸು ಕೊಟ್ಟಿಲ್ಲಘಿ. ಕನ್ನಡಿಗ ರಾಹುಲ್ ಅರ್ಹ ಬ್ಯಾಟರ್ ಆಗಿದ್ದಾರೆ. ಆದರೆ ಭಾನುವಾರದ ಪಂದ್ಯದಲ್ಲಿ  ನಸೀಂ ಶಾ ಅವರ ಮೊದಲ ಎಸೆತದಲ್ಲಿ ಬೌಲ್ಡ್ ಆಗಿದ್ದರು.ರಾಹುಲ್ ಈ ಪಂದ್ಯದಲ್ಲಿ ಜವಾಬ್ದಾರಿ ಹೊತ್ತು ಬ್ಯಾಟ್ ಬೀಸಬೇಕಿದೆ.

ಭಾರತದ ವೇಗಿಗಳಾದ ಆವೇಶ್ ಖಾನ್ ಮತ್ತು ಆರ್ಷದೀಪ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.  ಅಕ್ಷರ್ ಪಟೇಲ್ ಬೌಲಿಂಗ್‍ನಲ್ಲಿ ರನ್ ನಿಯಂತ್ರಿಸಲಿದ್ದಾರೆ. ದೀಪಕ್ ಹೂಡಾ ಅಥವಾ ಆರ್.ಅಶ್ವಿನ್‍ಗೆ ಅವಕಾಶ ಕೊಡಬಹುದು.     

ಚಿಂತಗೀಡು ಮಾಡಿದ ಪಾಕ್‍ಗೆ ಮೊದಲ ಬ್ಯಾಟಿಂಗ್

ಇನ್ನು ಪಾಕಿಸ್ಥಾನ ತಂಡ ಮೊದಲ 10 ಓವರ್‍ಗಳಲ್ಲಿ ರನ್ ಮಳೆ ಸುರಿಸುವ ಸಾಧ್ಯತೆ ಹೆಚ್ಚಿದೆ. ತಾರಾ ಬ್ಯಾಟರ್‍ಗಳಾದ ಮೊಹ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ ಚೇಸಿಂಗ್‍ನಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಮೊದಲ ಬ್ಯಾಟಿಂಗ್ ಮಾಡಿದರೆ ಈ ಜೋಡಿ ಬೇಗ ನಿರ್ಗಮಿಸಲಿದೆ.

ನಿಧಾನಗತಿಯ ಪಿಚ್ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಬ್ಯಾಟರ್‍ಗಳಾದ ಫಾಕರ್ ಜಮಾನ್ ಮತ್ತು ಖುಶ್‍ದಿಲ್ ಶಾ ಅಗ್ರ ಆರರಲ್ಲಿ ಸ್ಥಾನ ಆಡಲಿದ್ದು ವೇಗಿಗಾಳಾದ ಭುವನೇಶ್ವರ್ ಮತ್ತು ಹಾರ್ದಿಕ್ ಅವರನ್ನು ಸಮರ್ಥವಾಗಿ ಎದುರಿಸಬಹುದು.

ಉಭಯ ತಂಡಗಳ ಕದನ ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದೀಪಕ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಘಿ, ಅಕ್ಷರ್ ಪಟೇಲ್, ಆರ್.ಅಶ್ವಿನ್. ಯಜ್ವಿಂದರ್ ಚಾಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಆವೇಶ್ ಖಾನ್.

ಪಾಕಿಸ್ಥಾನ : ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಆಸೀಫ್ ಅಲಿ, ಫಾಕರ್‍ಜಮಾನ್, ಹೈದರ್  ಅಲಿ, ಹ್ಯಾರಿಸ್ ರೌಫ್, ಈಫ್ತಿಖಾರ್ ಅಹ್ಮದ್, ಖುಷ್‍ದೀಲ್ ಶಾ, ಮೊಹ್ಮದ್ ನವಾಜ್, ಮೊಹ್ಮದ್ ರಿಜ್ವಾನ್, ನಸೀಂ ಶಾ,  ಉಸ್ಮಾನ್ ಕಾದಿರ್, ಮೊಹ್ಮದ್ ಹಸನೈನ್, ಹಸನ್ ಅಲಿ.  

 

ಪಂದ್ಯ ಸಂಜೆ : 7.30

ಕೃಪೆ : ಸ್ಟಾರ್ ಸ್ಪೋರ್ಟ್ಸ್

 

 

 

- Advertisement -

Latest Posts

Don't Miss