Tuesday, April 15, 2025

Latest Posts

20 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಟೀಮ್ ಇಂಡಿಯಾ

- Advertisement -

ದುಬೈ:ಮುಂಬರುವ ಭವಿಷ್ಯದ ಪ್ರವಾಸಗಳಲ್ಲಿ ಟೀಮ್ ಇಂಡಿಯಾ 20 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2022ರ ಡಿಸೆಂಬರ್ ನಲ್ಲಿ ಭಾರತ ತಂಡ ಬಾಂಗ್ಲದೇಶ ವಿರುದ್ಧ 2 ಟೆಸ್ಟ್ ಸರಣಿ ಮೂಲಕ ಆರಂಭವಾಗಲಿದೆ.

ಮುಂದಿನ ವರ್ಷ ಬಹುನಿರೀಕ್ಷಿತಾ ಬಾರ್ಡರ್- ಗಾವಸ್ಕರ್ ಟ್ರೋಫಿ ನಡೆಯಲಿದೆ. 2025ರಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಟೆಲಿದೆ. ನಂತರ ವೆಸ್ಟ್ ಇಂಡೀಸ್ ಮತ್ತು ದ.ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

2026ರಲ್ಲಿ ಭಾರತ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ನಂತರ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರವಾಸಕೈಗೊಳ್ಳಲಿದೆ. ನಂತರ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸಕೈಗೊಳ್ಳಲಿದೆ. 2023ರಿಂದ 27ರವರೆಗೆ ಅಂತಿಮ ಟೆಸ್ಟ್ ಸರಣಿಗಳು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧವಾಗಿರುತ್ತದೆ.

2023ರಿಮದ 27ರವರೆಗಿನ ವೇಳಾಪಟ್ಟಿಯಲ್ಲಿ ಐಸಿಸಿಯ 12 ಸದ್ಯಸತ್ವ ಹೊಂದಿರುವ ತಂಡಗಳು ಒಟ್ಟು 777 ಪಂದ್ಯಗಳು ಆಡಲಿವೆ. ಇದರಲ್ಲಿ 173 ಟೆಸ್ಟ್, 281 ಏಕದಿನ ಮತ್ತು 323 ಟಿ20 ಪಂದ್ಯಗಳಾಗಿರುತ್ತವೆ. ಈಗಿನ ವೇಳಾಪಟ್ಟಿಯಲ್ಲಿ 694 ಪಂದ್ಯಗಳಿವೆ. ಇದರಲ್ಲಿ ಐಸಿಸಿ ಪುರುಷರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಹಲವಾರು ಐಸಿಸಿ ಟೂರ್ನಿಗಳು ಮತ್ತು ತ್ರಿಕೋನ ಸರಣಿಗಳು ಒಳಗೊಂಡಿವೆ.

- Advertisement -

Latest Posts

Don't Miss