ಬರ್ಮಿಂಗ್‍ಹ್ಯಾಮ್: ಸುದೀರ್ಘ 15 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಪಣ ತೊಟ್ಟಿರುವ ಭಾರತ ಕ್ರಿಕೆಟ್ ತಂಡ ಇಂದಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೆಣಸಲಿದೆ.
ಇಲ್ಲಿನ ಬರ್ಮಿಂಗ್‍ಹ್ಯಾಮ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಹೈವೋಲ್ಟೇಜ್‍ನಿಂದ ಕೂಡಿದ್ದು ಭಾರತೀಯ ಆಟಗಾರರು ಕೆಲವು ದಿನಗಳಿಂದ ಕಠಿಣ ಅಭ್ಯಾಸ ನಡೆಸಿ ಐತಿಹಾಸಿಕ ಸಾಧನೆ ಮಾಡಲು ಸಜ್ಜಾಗುತ್ತಿದ್ದಾರೆ.ಎರಡೂ ತಂಡಗಳು ಅಂತಿಮ ಕದನವನ್ನು ಗೆಲ್ಲಲು ಮಹಾ ಹೋರಾಟವನ್ನೆ ಮಾಡಲಿದೆ.
ಭಾರತ ತಂಡ ಇದುವರೆಗೂ ಮೂರು ಬಾರಿ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ. 1971ರಲ್ಲಿ ಮೊದಲ ಬಾರಿ, 1986ರಲ್ಲಿ ಎರಡನೆ ಬಾರಿ ಮತ್ತು 2007ರಲ್ಲಿ ಪಟೌಡಿ ಟ್ರೋಫಿಯನ್ನು ಗೆದ್ದು ಮೂರನೆ ಬಾರಿಗೆ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು. ನಂತರ 2011,2014 ಹಾಗೂ 2018ರಲ್ಲಿ ಭಾರತ ಪ್ರವಾಸ ಕೈಗೊಂಡಾಗ ಕಳಪೆ ಪ್ರದರ್ಶನ ನೀಡಿದ್ದರಿಂದ ಸರಣಿ ಗೆದ್ದಿಲ್ಲ.
2021ರಲ್ಲಿ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಟೆಸ್ಟ್ ಸರಣಿಯಾಗಿತ್ತು. ಸರಣಿಯಲ್ಲಿ 4 ಪಂದ್ಯಗಳನ್ನಾಡಿದ್ದ ಭಾರತ 2-1 ಅಂತರದಿಂದ ಮುನ್ನಡೆ ಪಡೆದಿತ್ತುಘಿ. ಐದನೆ ಟೆಸ್ಟ್ ಪಂದ್ಯದ ವೇಳೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ಶ್ರೀಧರ್, ಸೇರಿ ಹಲವರಿಗೆ ಕೊರೋನಾ ಸಂಕು ತಗುಲಿದ್ದಿರಿಂದ ಕೊನೆಯ ಪಂದ್ಯವನ್ನು ಮುಂದೂಡಲಾಗಿತ್ತು.
ಮತ್ತೆ ಮರು ನಿಗದಿಯಾದ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ನಾಯಕತ್ವ ಕಳೆದುಕೊಂಡಿದ್ದಾರೆ.
ನಾಯಕ ರೋಹಿತ್ ಶರ್ಮಾ ಸೋಂಕಿಗೆ ಗುರಿಯಾಗಿ ಆಡುವುದು ಅನುಮಾನದಿಂದ ಕೂಡಿದೆ. ಕನ್ನಡಿಗ ಕೆ.ಎಲ್.ರಾಹುಲ್ ಆಡುತ್ತಿಲ್ಲ.ಮೊನ್ನೆ ಲಿಸಿಸ್ಟರ್‍ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‍ಗಳು ಮಿಂಚಿದ್ದಾರೆ.
ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಅಥವಾ ವೇಗಿ ಶಾರ್ದೂಲ್ ಠಾಕೂರ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದಾಗಿದೆ.
ಎಡ್ಜ್‍ಬಾಸ್ಟನ್ ಅಂಗಳ ಭಾರತದ ಪಾಲಿಗೆ ಅದೃಷ್ಟದ ಪಿಚ್ ಅಲ್ಲ. ಆಡಿದ 7 ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿಲ್ಲ. ಇತ್ತ ಆಲ್ರೌಂಡರ್ ಬೆನ್‍ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಮೊನ್ನೆ ನ್ಯೂಜಿಲೆಂಡ್ ವಿರುದ್ದ 3-0 ಅಂತರದಿಂದ ಟೆಸ್ಟ್ ಸರಣಿ ಗೆದ್ದು ತಾಕತ್ತು ಪ್ರದರ್ಶಿಸಿದೆ. ಹೊಸ ಕೋಚ್ ಬ್ರೆಂಡನ್ ಮೆಕಲಮ್ ಹಾಗೂ ಹೊಸ ನಾಯಕ ಬೆನ್‍ಸ್ಟೋಕ್ಸ್ ಅದ್ಭುತ ಪ್ರದಶ್ನ ನೀಡಿದ್ದಾರೆ. ಮೊನ್ನೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾಜಿ ನಾಯಕ ಜೋ ರೂಟ್ 2 ಶತಕ 1 ಅರ್ಧ ಶತಕ, ಜಾನಿ ಭೈರ್‍ಸ್ಟೊ 2 ಶತಕ 1 ಅರ್ಧ ಶತಕ, ಒಲಿ ಪೋಪ್ 1 ಶತಕ 1 ಅರ್ಧ ಶತಕ ಸಿಡಿಸಿ ಭರ್ಜರಿ ಫಾರ್ಮನಲ್ಲಿದ್ದಾರೆ. ವೇಗಿ ಸ್ಟುವರ್ಟ್ ಬ್ರಾಡ್ ಮತ್ತು ಗಾಯದಿಂದ ಹೊರಬಂದಿರುವ ಜೇಮ್ಸ್ ಆ್ಯಂಡರ್ಸನ್ ಕೊನೆಯ ಟೆಸ್ಟೆಗೆ ಸಜ್ಜಾಗಿದ್ದಾರೆ.
ಸಂಭಾವ್ಯ ತಂಡಗಳು
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್, ಉಪನಾಯಕ), ರವೀಂದ್ರ ಜಡೇಜಾ, ಮೊಹ್ಮದ್ ಸೀರಾಜ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಪ್ರಸಿದ್ಧ ಕೃಷ್ಣ, ಕೆ.ಎಸ್.ಭರತ್, ಮಯಾಂಕ್ ಅಗರ್‍ವಾಲ್, ಉಮೇಶ್ ಯಾದವ್.
ಇಂಗ್ಲೆಂಡ್ : ಅಲೆಕ್ಸ್ ಲೀಸ್, ಜಾಕ್ ಕ್ರಾವ್ಲೆ, ಒಲಿ ಫೋಪ್, ಜೋ ರೂಟ್, ಜಾನಿ ಭೈರ್ ಸ್ಟೋ, ಜಾನಿ `ಭೈರ್‍ಸ್ಟೋಘಿ, ಬೆನ್‍ಸ್ಟೋಕ್ಸ್ (ನಾಯಕ), ಸಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್),ಮ್ಯಾಥೀವ್ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್.