- Advertisement -
ಚಾಂಗ್‍ವಾನ್ (ದ.ಕೊರಿಯಾ): ಕಿರಿಯ ಶೂಟರ್‍ಗಳಾದ ಅನೀಶ್ ಭಾನವಾಲಾ ಮತ್ತು ರಿತಿಂ ಸಾಂಗ್ವಾನ್ ಅವರ ತಂಡ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಕಂಚು ಗೆದ್ದಿದ್ದಾರೆ.
ಮಂಗಳವಾರ ನಡೆದ 25 ರ್ಯಾಪಿಡ್ ಪಿಸ್ತೂಲ್ ಮಿಶ್ರ ತಂಡದ ವಿಭಾಗದಲ್ಲಿ ಭಾರತ ತಂಡ ಜೆಕ್ ರಿಪಬ್ಲಿಕ್‍ನ ಅನ್ನಾ ಡೆಡೊವಾ ಮತ್ತು ಮಾರ್ಟಿನ್ ವಿರುದ್ಧ 16-12 ಅಂಕಗಳ ಅಂತರದಿಂದ ಗೆದ್ದರು.
ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಅನೀಶ್‍ಮತ್ತು ರಿತಿಂ ಜೋಡಿಗೆ ಎರಡನೆ ಪದಕವಾಗಿದೆ. ಕಳೆದ ಮಾರ್ಚ್‍ನಲ್ಲಿ ಈ ಜೋಡಿ ಕೈರೊ ವಿಶ್ವಕಪ್‍ನ 25 ಮೀ. ರ್ಯಾಪಿಡ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿತ್ತು.
ಸದ್ಯ ವಿಶ್ವಕಪ್‍ನಲ್ಲಿ ತಲಾ 5 ಚಿನ್ನ, 5 ಬೆಳ್ಳಿ ಹಾಗೂ 4 ಕಂಚುಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
- Advertisement -

