Tuesday, April 15, 2025

Latest Posts

ಪಂತ್ ಪರಾಕ್ರಮ: ಭಾರತಕ್ಕೆ ಸರಣಿ ಜಯ

- Advertisement -

ಮ್ಯಾಂಚೆಸ್ಟರ್: ರಿಷಬ್ ಪಂತ್ ಅವರ ಆಕರ್ಷಕ ಶತಕ  ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರೆವಿನಿಂದ  ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರನೆ ಪಂದ್ಯದಲ್ಲಿ  5 ವಿಕೆಟ್‍ಗಳ ಅಂತರದಿಂದ ಗೆದ್ದು  2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಇಲ್ಲಿನ ಟ್ರಾಫಾರ್ಡ್ ಮೈದಾನದಲ್ಲಿ  ನಡೆದ ಜಿದ್ದಾ ಜಿದ್ದಿನ ಕದನದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 45.5 ಓವರ್‍ಗಳಲ್ಲಿ 259 ರನ್ ಗಳಿಸಿತು.  ಭಾರತ 42.1 ಓವರ್‍ಗಳಲ್ಲಿ  5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು.

260 ರನ್ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ  ವೇಗಿ ಟಾಪ್ಲಿ ಮತ್ತೆ ಕಂಟಕವಾದರು. ಮಾರಕ ದಾಳಿ ನಡೆಸಿದ ವೇಗಿ ಟಾಪ್ಲಿ , ಶಿಖರ್ ಧವನ್ (1ರನ್), ರೋಹಿತ್ ಶರ್ಮಾ (17ರನ್), ವಿರಾಟ್ ಕೊಹ್ಲಿ  (17 ರನ್) ಪೆವಿಲಿಯನ್ ಸೇರಿದರು.  ಸೂರ್ಯ ಕುಮಾರ್ (16 ರನ್) ಒವರ್‍ಟನ್‍ಗೆ ವಿಕೆಟ್ ಒಪ್ಪಿಸಿದರು.

72 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು  ಸಮರ್ಥವಾಗಿ ಎದುರಿಸಿದರು. ಇಂಗ್ಲೆಂಡ್ ಬೌಲರ್‍ಗಳನ್ನು ಪುಡಿಗಟ್ಟಿದ ಈ ಜೋಡಿ  ಐದನೆ ವಿಕೆಟ್‍ಗೆ 133 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಡೊಯ್ದರು.

43 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ ಹಾರ್ದಿಕ್ 71 ರನಗಳಿಗೆ ಕಾರ್ಸ್‍ಗೆ ವಿಕೆಟ್ ಒಪ್ಪಿಸಿದರು.ರಿಷಬ್ ಪಂತ್ 106 ಎಸತೆದಲ್ಲಿ  ಶತಕ ಸಿಡಿಸಿ ಮಿಂಚಿದರು.  ರಿಷಬ್ ಪಂತ್ ಅಜೇಯ 125 ರನ್ ಗಳಿಸಿದರು. ರವೀಂದ್ರ ಜಡೇಜಾ  ಜೇಯ 7 ರನ್ ಗಳಿಸಿದರು.   

 ಸ್ಪರ್ಧಾತ್ಮಕ  ಮೊತ್ತ ಪೇರಿಸಿದ ಆಂಗ್ಲರು

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡಕ್ಕೆ ವೇಗಿ ಮೊಹ್ಮದ್ ಸಿರಾಜ್ ಆಘಾತ ನೀಡಿದರು. ಆರಂಭಿಕ ಬ್ಯಾಟರ್‍ಗಳಾದ ಜಾಸನ್ ರಾಯ್ (41 ರನ್), ಜಾನು ಬೈರ್ ಸ್ಟೊ (0) ಉತ್ತಮ ಆರಂಭ ಕೊಡುವಲ್ಲಿ ಎಡವಿದರು.  ಮೂರನೆ ಕ್ರಮಾಂಕದಲ್ಲಿ ಬಂದ ಜೋ ರೂಟ್, ಮೊಹ್ಮದ್ ಸಿರಾಜ್‍ಗೆ ವಿಕೆಟ್ ಒಪ್ಪಿಸಿದರು.  ಮೂರನೆ ವಿಕೆಟ್‍ಗೆ ಜೊತೆಗೂಡಿದ ಜಾಸನ್ ರಾಯ್ ಮತ್ತು ಬೆನ್‍ಸ್ಟೋಕ್ಸ್ 54 ರನ್ ಸೇರಿಸಿ ತಂಡದ ಕುಸಿತ ತಡೆದರು.

ಈ ವೇಳೆ ದಾಳಿಗಿಳಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಜಾಸನ್ ರಾಯ್ (41), ಬೆನ್ ಸ್ಟೋಕ್ಸ್( 27), ಅವರನ್ನು ಪೆವಿಲಿಯನ್ ಅಟ್ಟಿದರು. ಐದನೆ ವಿಕೆಟ್‍ಗೆ ಜೊತೆಗೂಡಿದ ಮೊಯಿನ್ ಅಲಿ (34 ರನ್), ಲಿಯಾಮ್ ಲಿವಿಂಗ್ ಸ್ಟೋನ್ (27 ರನ್ ) ತಂಡದ ಮೊತ್ತ ಎಚ್ಚರಿಸಿದರು. ಏಕಾಂಗಿ ಹೋರಾಟ ಮಾಡಿದ ನಾಯಕ ಜೋಸ್ ಬಟ್ಲರ್ 65 ಎಸೆತದಲ್ಲಿ ಻ರ್ಧ ಶತಕ ಸಿಡಿಸಿದರು.

ಕೊನೆಯಲ್ಲಿ ಡೇವಿಡ್ ವಿಲ್ಲಿ (18 ರನ್),  ಕ್ರೇಗ್ ಒವರ್‍ಟನ್ 32 ರನ್, ಕಾರ್ಸೆ ಅಜೇಯ 3 ರನ್ ಗಳಿಸಿದರು.  ಇಂಗ್ಲೆಂಡ್ ತಂಡ 45.5  ಓವರ್‍ಗಳಲ್ಲಿ 259 ರನ್‍ಗಳಿಗೆ  ಆಲೌಟ್ ಆಯಿತು.  ಭಾರತ ಪರ ಹಾರ್ದಿಕ್ ಪಾಂಡ್ಯ 24ಕ್ಕೆ 4, ಚಾಹಲ್ 60ಕ್ಕೆ 3, ಸೀರಾಜ್ 66ಕ್ಕೆ 2 ವಿಕೆಟ್ ಪಡೆದರು.

ಬಾಕ್ಸ್ ಕೊನೆಯ ಪಂದ್ಯಕ್ಕೆ ಅಲಭ್ಯಯರಾದ ಬುಮ್ರಾ

ಇಂಗ್ಲೆಂಡ್ ವಿರುದ್ಧದ  ಮೂರನೆ ಪಂದ್ಯದಿಂದ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದರು.  ಬೆನ್ನು ನೋವಿಗೆ ಗುರಿಯಾಗಿದ್ದರಿಂದ ಬರೋಡಾ ವೇಗಿ ಆಡಲಿಲ್ಲ. ಬುಮ್ರಾ ಅವರ ಸ್ಥಾನವನ್ನು ವೇಗಿ ಮೊಹ್ಮದ್ ಸಿರಾಜ್ ತುಂಬಿದರು. ಮತ್ತೊರ್ವ ಯುವ ವೇಗಿ ಆರ್ಷದೀಪ್ ಸಿಂಗ್‍ಗೆ ಫಿಟ್ನೆಸ್ ಸಮಸ್ಯೆಯಿಂದ ಬಳಲಿದ್ದರಿಂದ  ಆಡುವ ಹನ್ನೊಂದರ ಬಳಗದಲ್ಲಿ ಅವರನ್ನು ಪರಿಗಣಿಸಲಿಲ್ಲ.

 

- Advertisement -

Latest Posts

Don't Miss