ಇಂಡಿಯನ್ ಆರ್ಮಿ ಫಿರಂಗಿದಳ(Indian Army Artillery)ದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (Lower Division Clerk)ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಮಾಡಿದ್ದು, ಜನವರಿ 22 ಕೊನೆಯ ದಿನಾಂಕವಾಗಿದೆ. ಒಟ್ಟು 107 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ Indianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿಸಲ್ಲಿಕೆ ಕುರಿತು ಈ ಕೆಳಗಿನಂತೆ ತಿಳಿಸಲಾಗಿದೆ.
ಹುದ್ದೆ ಹೆಸರು : ಲೋವರ್ ಡಿವಿಷನ್ ಕ್ಲರ್ಕ್, ಕುಕ್, ಫೈರ್ ಮ್ಯಾನ್
ಒಟ್ಟು ಹುದ್ದೆಗಳು : 107
ವೇತನ : 19900 – 63200
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-01-22
ವರ್ಗಾನುಸಾರ ಹುದ್ದೆಯ ಮಾಹಿತಿ:
ಸಾಮಾನ್ಯ- 52 ,SC-8,ST-7, OBC-24, EWS-16, PHP-6, ESM-18, MSP-3
ವೇತನ:
ಲೋವರ್ ಡಿವಿಷನ್ ಕ್ಲರ್ಕ್- ಮಾಸಿಕ ₹ 19,900-63,200
ಮಾಡೆಲ್ ಮೇಕರ್- ಮಾಸಿಕ ₹ 19,900-63,200
ಕಾರ್ಪೆಂಟರ್- ಮಾಸಿಕ ₹ 19,900-63,200
ಕುಕ್- ಮಾಸಿಕ ₹ 19,900-63,200
ಎಕ್ವಿಪ್ಮೆಂಟ್ ರಿಪೇರರ್- ಮಾಸಿಕ ₹ 18,000-56,900
ಸೈಕ್- ಮಾಸಿಕ ₹ 18,000-56,900
ವಾಶರ್ಮ್ಯಾನ್-ಮಾಸಿಕ ₹ 18,000-56,900
MTS- ಮಾಸಿಕ ₹ 18,000-56,900
ಫೈರ್ಮ್ಯಾನ್- ಮಾಸಿಕ ₹ 19,900-63,200
ಆಯ್ಕೆ ಪ್ರಕ್ರಿಯೆ:
ಅಗತ್ಯ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಮುಂದಿನ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಪ್ರಶ್ನೆ ಪತ್ರಿಕೆಯು ಆಬ್ಜೆಕ್ಟಿವ್ ಟೈಪ್ ಆಗಿರುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. LDC(ಲೋವರ್ ಡಿವಿಷನ್ ಕ್ಲರ್ಕ್) ಗಾಗಿ ಇಂಗ್ಲಿಷ್ ಭಾಷಾ ಪರೀಕ್ಷೆಯು ಸಂಯೋಜನೆ ಮತ್ತು ಗ್ರಹಿಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆಯ ದಿನಾಂಕವನ್ನು ಅರ್ಹ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು. ಪರೀಕ್ಷೆಯನ್ನು ನಾಸಿಕ್ (ಮಹಾರಾಷ್ಟ್ರ) ನಲ್ಲಿ ಮಾತ್ರ ನಡೆಸಲಾಗುವುದು.