Kashmir News: ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಒಳನುಸುಳಲು ಯತ್ನಿಸಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೈನಿಕರು ಗುಂಡಿಕ್ಕಿ ಕೊಂದಿದ್ದಾರೆ.
ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು, ಸತತ1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ, ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಈ ವೇಳೆ ದೊಡ್ಡ ಶಸ್ತ್ರಾಸ್ತ್ರಗಳು, ಮದ್ದು ಗುಂಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.
ಪಹಲ್ಗಾಮ್ ನಲ್‌ಲಿ ದಾಳಿ ನಡೆದ ಬಳಿಕ ಈ ದಾಳಿ ನಡೆದಿದೆ. ನಿನ್ನೆ ಮಧ್ಯಾಹ್ನ 3 ಗಂಂಟೆ ಸುಮಾರಿಗೆ ಕಾಶ್ಮೀರದ ಪಹಲ್ಗಮ್‌ನ ಬೈಸರ್‌ನಲ್ಲಿ ಪ್ರವಾಸಿ ತಾಣವನ್ನು ಎಂಜಾಾಯ್ ಮಾಡುತ್ತಿದ್ದ ವೇಳೆ, ಅಲ್ಲಿಗೆ ನುಸುಳಿರುವ ಉಗ್ರರು, ಪ್ರವಾಸಿಗರಲ್ಲಿ ಪುರುಷರನ್ನು ಬೇರೆ ಮಾಡಿ, ಸ್ತ್ರೀಯರು ಮತ್ತು ಮಕ್ಕಳನ್ನು ಒಂದೆಡೆ ನಿಲ್ಲಿಸಿ, ಧರ್ಮದ ಬಗ್ಗೆ ವಿಚಾರಿಸಿದ್ದಾರೆ. ಪುರುಷರಿಗೆ ಧರ್ಮ ಕೇಳಿ, ಪ್ಯಾಂಟ್ ಬಿಚ್ಚಿಸಿ, ಕಲ್ಮಾ ಹೇಳಲು ಹೇಳಿದ್ದಾರೆ. ಯಾರ್ಯಾರು ಮುಸ್ಲಿಂರಲ್ಲವೋ ಅವರಿಗೆಲ್ಲ ಗುಂಡು ಹೊಡೆದು, ಜೀವ ತೆಗೆದಿದ್ದಾರೆ. ಮುಸ್ಲಿಂ ಪುರುಷರನ್ನು ಮಾತ್ರ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಈ ದಾಳಿಗೆ ದೇಶದೆಲ್ಲೆಡೆ ಆಕ್ರೋಷ ವ್ಯಕ್ತವಾಗುತ್ತಿದೆ. ಭಯೋತ್ಪಾದಕರ ಮೇಲೆ ದಾಳಿ ಮಾಡಲೇಬೇಕು. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲೇಬೇಕು ಎಂದು ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ.