ಬರ್ಮಿಂಗ್‍ಹ್ಯಾಮ್: ಭಾರತ ಬ್ಯಾಡ್ಮಿಂಟನ್ ತಂಡ ಕಾಮನ್‍ವೆಲ್ತ್ ಕ್ರೀಡಾಕುಟದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಮಿಶ್ರ ಡಬಲ್ಸ್ ಫೈನಲ್‍ನಲ್ಲಿ ಸಾತ್ವಿಕ್ ಸೈರಾಜ್ ಹಾಗೂ ಮಾಚಿಮಂಡ ಪೊನ್ನಪ್ಪ ಜೋಡಿ ಬಲಿಷ್ಠ ಮಲೇಷ್ಯಾ ವಿರುದ್ಧ 1-3 ಅಂತರದಿಂದ ಸೋತಿತು.
ಇದರೊಂದಿಗೆ ನಾಲ್ಕು ವರ್ಷದ ಹಿಂದೆ ಗೋಲ್ಡ್‍ಕೋಸ್ಟ್ ಕ್ರೀಡಾಕೂಟದಲ್ಲಿ ಸೋಲಿನ ಸೇಡನ್ನು ಮಲೇಷ್ಯಾ ತೀರಿಸಿಕೊಂಡಿತು. ಅಂದು ಮಲೇಷ್ಯಾ ತಂಡವನ್ನು ಸೋಲಿಸಿ ಭಾರತ ಚಿನ್ನ ಗೆದ್ದಿತ್ತು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆ.ಶ್ರೀಕಾಂತ್ ವಿಶ್ವ ರಾಂಕಿಂಗ್‍ನಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ ತ್ಸೆ ಯೊಂಗ್ ಎಂಗ್ ವಿರುದ್ಧ 1-2 ಸೆಟ್‍ಗಳಿಂದ ಸೋಲು ಕಂಡರು.
ಮೊದಲ ಪಂದ್ಯ ಕೈಚೆಲ್ಲಿದ್ದ ಶ್ರೀಕಾಂತ್ ಎರಡನೆ ಪಂದ್ಯವನ್ನು ನಿರಾಯಾಸವಾಗಿ ಗೆದ್ದರು. ಮೂರನೆ ಪಂದ್ಯದಲ್ಲಿ ಎಚ್ಚೆತ್ತು ಆಡಿದ ಎಂಗ್ ಗೆದ್ದು ಮಲೇಷ್ಯಾ ತಂಡಕ್ಕೆ 2-1 ಮುನ್ನಡೆ ನೀಡಿದರು.
ಪುರುಷರ ಡಬಲ್ಸ್‍ನಲ್ಲಿ ಮಲೇಷ್ಯಾದ ತೆಂಗ್ ಗ್‍ಆ್ಯರನ್ ಚಿಯಾ -ವೂ ಯಿಕ್ ಸೋ ವಿರುದ್ಧ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಚಿರಾಗ್ ಶೆಟ್ಟಿ 18-21, 15-21 ಅಂಕಗಳಿಂದ ಸೋಲು ಕಂಡರು.
ನಂತರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತಾರಾ ಆಟಗಾರ್ತಿ ಪಿ.ವಿ ಸಿಂಧು ಮಲೇಷ್ಯಾದ ಗೊ ಜಿನ್ ವೀ ಅವರಿಂದ ಕಠಿಣ ಸವಾಲು ಎದುರಿಸಿ 22-20, 21-17 ಅಂಕಗಳ ಕಠಿಣ ಗೆಲುವನ್ನು ಪಡೆದರು. ನಿರ್ಣಾಯಕ ಎರಡನೆ ಪಂದ್ಯದಲ್ಲಿ ಮೇಲುಗೈ ಸಾಸಿ ಪಂದ್ಯ ಗೆದ್ದರು.
ಪುರುಷರ ಸಿಂಗಲ್ಸ್‍ನಲ್ಲಿ ತನಗಿಂತ ಕಡಿಮೆ ಶ್ರೇಯಾಂಕಿತ ಆಟಗಾರನ ವಿರುದ್ಧ ಸೋತ ಬಳಿಕ ಕೆ. ಶ್ರೀಕಾಂತ್ ಕಣ್ಣೀರು ಹಾಕಿದರು. ತಮ್ಮ ತಪ್ಪುಗಳಿಗೆ ತಾವೇ ಕಾರಣ ಎಂದು ಶ್ರೀಕಾಂತ್ ಹೇಳಿಕೊಂಡಿದ್ದಾರೆ ಎಂದು ಸಹ ಆಟಗಾರ ಸಾತ್ವಿಕ್ ಹೇಳಿದ್ದಾರೆ.