Friday, October 18, 2024

Latest Posts

ಸೆಮಿಫೈನಲ್‍ಗೆ ಹರ್ಮನ್ ಪ್ರೀತ್ ಪಡೆ 

- Advertisement -

ಬರ್ಮಿಂಗ್‍ಹ್ಯಾಮ್: ಜೆಮ್ಮಿಮಾ ರಾಡ್ರಿಗಸ್ ಅವರ ಅರ್ಧ ಶತಕ ಹಾಗೂ ರೇಣುಕಾ ಸಿಂಗ್ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಬಾರ್ಬೊಡೊಸ್ ವಿರುದ್ಧ 100 ರನ್‍ಗಳಿಂದ ಗೆದ್ದು  ಸೆಮಿಫೈನಲ್ ತಲುಪಿದೆ.

ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ಟಿ20 ಪಂದ್ಯದಲ್ಲಿ  ಟಾಸ್ ಗೆದ್ದ  ಬಾರ್ಬೊಡೊಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸ್ಮತಿ ಮಂಧಾನ 5, ಶಾಲಿ ವರ್ಮಾ 43, ಜೆಮಿಮ್ಮಾ ರಾಡ್ರಿಗಸ್ 56, ದೀಪ್ತಿ ಶರ್ಮಾ ಅಜೇಯ 34 ರನ್ ಗಳಿಸಿದರು. ಭಾರತ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.

163 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಬಾರ್ಬೊಡೊಸ್ ವೇಗಿ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೈಶೊನಾ ನೈಟ್ 16, ಶಾಕೆರಾ ಸೆಲ್ಮಾನ್ ಅಜೇಯ 12 ರನ್ ಗಳಿಸಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿ ಬ್ಯಾಟರ್ ಆದರು.

ಬಾರ್ಬೊಡೊಸ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು. ಭಾರತ ಪರ ರೇಣುಕಾ ಸಿಂಗ್ 10ರನ್‍ಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

- Advertisement -

Latest Posts

Don't Miss