Saturday, July 5, 2025

Latest Posts

ಕಾಮನ್ ವೆಲ್ತ್ : ಸೆಮಿಗೆ ಲಗ್ಗೆ ಹಾಕಿದ ಭಾರತೀಯ ವನಿತೆಯರು 

- Advertisement -

ಬರ್ಮಿಂಗ್‍ಹ್ಯಾಮ್: ಕೆನಡಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಸೆಮಿಗೆ ಲಗ್ಗೆ ಹಾಕಿದರೆ, ಪುರುಷರ ತಂಡ ಸೆಮಿ ಸನಿಹಕ್ಕೆ ಸಾಗಿದೆ.

ಎ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕೆನಡಾ ವಿರುದ್ಧ 3-2 ಗೋಲುಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಭಾರತ ಪರ ಸಾಲಿಮಾ ಟೆಟೆ (3ನೇ ನಿಮಿಷ), ನವನೀತ್ ಕೌರ್ (22ನಿಮಿಷ) ಗೋಲುಗಳನ್ನು ಹೊಡೆದರು.

ನಂತರ ಕೆನಡಾ ಪರ ಬ್ರೀನಿ ಸ್ಟೇರಸ್ (23ನೇ ನಿಮಿಷ), ಮತ್ತು ಹಾನ್ನಾಹ ಹಾನ್ (39ನೇ ನಿಮಿಷ) ಗೋಲುಗಳನ್ನು ಹೊಡೆದರು. ನಂತರ ಲಾಲ್ರೆಂಸಿಯಾಮಿ ಗೋಲು ಬಾರಿಸಿದರು. ಈ ಗೆಲುವಿನೊಂದಿಗೆ ಭಾರತ ಎ ಗುಂಪಿನಲ್ಲಿ  2ನೇ ಸ್ಥಾನ ಪಡಯಿತು.

ಇನ್ನು  ಪುರುಷರ ವಿಭಾಗದಲ್ಲಿ  ಭಾರತ ಕೆನಡಾ ವಿರುದ್ಧ ಭರ್ಜರಿಯಾಗಿ ಸವಾರಿ ಮಾಡಿ 8-0 ಗೋಲುಗಳಿಂದ ಗೆದ್ದುಕೊಂಡಿತು.

ಭಾರತ ಪರ ಹರ್ಮನ್‍ಪ್ರೀತ್ (7, 54ನೇ ನಿಮಿಷ), ಆಕಾಶ್‍ದೀಪ್ (38, 60), ಅಮಿತ್ ರೊಹಿದಾಸ್ (10ನೇ), ಲಾಲಿತ್ ಉಪಾಧ್ಯಾಯ (20ನೇ ನಿಮಿ), ಗುರಜಾಂತ್ ಸಿಂಗ್ (27ನೇ ನಿಮಿ), ಮನದೀಪ್ ಸಿಂಗ್ (58ನೇ ನಿಮಿಷ) ಗೋಲು ಹೊಡೆದರು.

ಈ ಗೆಲುವಿನೊಂದಿಗೆ ಭಾರತ ಪುರುಷರ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು ಇಂದು ವೇಲ್ಸ್ ವಿರುದ್ಧ ಕಾದಾಟ ನಡೆಸಲಿದೆ.

 

 

 

- Advertisement -

Latest Posts

Don't Miss