Friday, February 7, 2025

Latest Posts

ಹಾಕಿ: ಭಾರತ ವನಿತೆಯರಿಗೆ ಕಂಚು :16 ವರ್ಷಗಳ ಬಳಿಕ ಪದಕ ಗೆಲುವಿನ ಸಂಭ್ರಮ

- Advertisement -

ಬರ್ಮಿಂಗ್‍ಹ್ಯಾಮ್: ಸುದೀರ್ಘ 16 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ  ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪದಕ ಗೆದ್ದು ಬೀಗಿದೆ.

ಭಾನುವಾರ ಬರ್ಮಿಂಗ್‍ಹ್ಯಾಮ್‍ನಲ್ಲಿ  ನಡೆದ ಜಿದ್ದಜಿದ್ದಿನ ಪಂದ್ಯದಲ್ಲಿ  ಭಾರತ ವನಿತೆಯರು ಹಾಲಿಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಶೂಟೌಟ್‍ನಲ್ಲಿ 2-1 ಗೋಲುಗಳಿಂದ ರೋಚಕವಾಗಿ ಗೆದ್ದು ಕಂಚಿಗೆ ತೃಪ್ತಿಪಟ್ಟಿತ್ತು.

ಇದಕ್ಕೂ ಮುನ್ನ ನಡೆದ ನಿಗದಿತ ಸಮಯದಲ್ಲಿ  ಭಾರತ 1-0 ಗೋಲಿನಿಂದ ಮುನ್ನಡೆ ಪಡೆದಿತ್ತು.ಎರಡನೆ ಕ್ವಾರ್ಟರ್‍ನಲ್ಲಿ ಭಾರತ ಪರ ಸಲೀಮಾ ಟೆಟೆ ಗೋಲು ಹೊಡೆದರು.  ನಂತರ ಕೊನೆಯ ಕ್ವಾರ್ಟರ್‍ನಲ್ಲಿ ಒಲಿವಿಯಾ ಮೆರ್ರಿ ನ್ಯೂಜಿಲೆಂಡ್ ಪರ ಗೋಲು ಹೊಡೆದು ಸಮಗೊಳಿಸಿದರು. ನಂತರವೂ ಕಿವೀಸ್ ದಾಳಿ ಮಾಡಿದರೂ ಗೋಲ್ ಕೀಪರ್ ಸವೀತಾ ಸಮರ್ಥವಾಗಿ ತಡೆಯುವಲ್ಲಿ  ಯಶಸ್ವಿಯಾದರು.

ನಿರ್ಣಾಯಕ ಶೂಟೌಟ್‍ನಲ್ಲಿ ಭಾರತ ತಂಡದ ನಾಯಕಿ ಸವೀತಾ ಪುಣಿಯ ಎರಡು ಗೋಲುಗಳನ್ನು ತಡೆದು ಪದಕವನ್ನು ಖಚಿತಪಡಿಸಿದರು. ನಂತರ ಉಳಿದ 8 ಸೆಕೆಂಡುಗಳಲ್ಲಿ ಎದುರಾಳಿ ಆಟಗಾರ್ತಿ ಗೋಲು ಹೊಡೆಯುವಲ್ಲಿ ವಿಫಲರಾದರು.

2006ರಲ್ಲಿ  ಮೆಲ್ಬೋರ್ನ್‍ನಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಬೆಳ್ಳಿ ಪದಕ ಗೆದ್ದಿತ್ತು.

- Advertisement -

Latest Posts

Don't Miss