Friday, March 14, 2025

Latest Posts

2023ರಲ್ಲಿ ಭಾರತದ ಹೆಮ್ಮೆಯ ಮತ್ತು ಸಂತಸದ ಕ್ಷಣಗಳಿವು..

- Advertisement -

2023 Special: 2023 ಭಾರತಕ್ಕೆ ಉತ್ತಮ ವರ್ಷ ಅಂದರೂ ತಪ್ಪಾಗಲಾರದು. ಏಕೆಂದರೆ, ಭಾರತ ಚಂದ್ರಲೋಕಕ್ಕೆ ಪ್ರಯಾಣಿಸಿದ್ದು ಇದೇ ವರ್ಷದಲ್ಲಿ. ಭಾರದಲ್ಲಿ ಜಿ20 ಶೃಂಗಸಭೆ ನಡೆದಿದ್ದು ಇದೇ ವರ್ಷದಲ್ಲಿ.  ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಭಾರತೀಯ ಆಟಗಾರರು 100ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದು ಇದೇ ವರ್ಷದಲ್ಲಿ. ಅಯೋಧ್ಯೆಯ ಅಯೋಧ್ಯಾ ಧಾಮ್ ಮತ್ತು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣದ ಉದ್ಘಾಟನೆಯಾದದ್ದು ಇದೇ ವರ್ಷದಲ್ಲಿ. ಮತ್ತು ಹೊಸ ಸಂಸತ್ ಭವನ ಉದ್ಘಾಟನೆಯಾಗಿದ್ದು ಕೂಡ ಇದೇ ವರ್ಷದಲ್ಲಿ. ಈ ಬಗ್ಗೆ ವಿಸ್ತ್ರತವಾಗಿ ತಿಳಿಯೋಣ ಬನ್ನಿ..

ಚಂದ್ರಯಾನ 3: 23 ಅನ್ನೋದು ನಮ್ಮ ವಿಜ್ಞಾನಿಗಳ ಪಾಲಿಗೆ ಲಕ್ಕಿ ಆಗಿ ಪರಿಣಮಿಸಿದೆ. ಹಾಗಾಗಿ ಆಗಸ್ಟ್ 23, 2023ರಂದು ಚಂದ್ರಯಾನ ಸಕ್ಸಸ್ ಆಗಿದ್ದು, ಚಂದ್ರನಲ್ಲಿಗೆ ತಲುಪಿದ ನಾಲ್ಕನೇ ದೇಶವಾಗಿದ್ದು, ಚಂದ್ರನ ದಕ್ಷಿಣಕಕ್ಷೆ ತಲುಪಿದ ಮೊದಲ ದೇಶ ಭಾರತವಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿಗೆ ಇಳಿದು, ಚಂದ್ರಯಾನ ಸಕ್ಸಸ್ ಆದಾಗ, ಇಸ್ರೋ ಮುಖ್ಯಸ್ಥ ಸೋಮನಾಥ್ ಸಂತಸದಿಂದ, ಭಾರತ ಚಂದ್ರನ ಮೇಲೆ ಇಳಿದಿದೆ ಎಂದಿದ್ದರು. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಸೋಮನಾಥ್ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದರು. ಈ ಕ್ಷಣ ಭಾರತೀಯ ಪಾಲಿಗೆ ಸಂಭ್ರಮದ ಕ್ಷಣವಾಗಿತ್ತು.

ಜಿ 20 ಶೃಂಗಸಭೆ: ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ, ದೆಹಲಿಯಲ್ಲಿ ಜಿ20 ಶೃಂಗ ಸಭೆ ನಡೆದಿತ್ತು. ಈ ಶೃಂಗ ಸಭೆಗೆ ಹಲವು ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಆಗಮಿಸಿದ್ದು, ಈ ಸಭೆ ಯಶಸ್ವಿ ಸಭೆ ಎಂದು ವಿಶ್ವದ ದೊಡ್ಡಣ್ಣ ಅಮೆರಿಕ ಹೇಳಿತ್ತು. ಇದೇ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆದಿದ್ದು, ಬಂದ ಗಣ್ಯರಿಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಪರಿಚಯ ಮಾಡಿಕೊಡಲಾಯಿತು. ಅಲ್ಲದೇ ಬಂದ ಗಣ್ಯರಲ್ಲಿ ಹಲವರು ಭಾರತೀಯ ಖಾದ್ಯ ಸವಿದು, ಸಂತಸ ವ್ಯಕ್ತಪಡಿಸಿದ್ದರು. ಬ್ರಿಟನ್ ಪ್ರಧಾನಿ ಭಾರತದ ಅಳಿಯ ರಿಷಿ ಸುನಕ್ ಮತ್ತು ಭಾರತದ ಮಗಳು, ಸುಧಾಮೂರ್ತಿಯವರ ಮಗಳು ಅಕ್ಷತಾ ಕೂಡ ಈ ಸಭೆಯಲ್ಲಿ ಭಾಗವಹಿಸಿ, ಖುಷಿಪಟ್ಟಿದ್ದರು.

ಏಷ್ಯನ್ ಗೇಮ್ಸ್: ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆಯ ಪದಕಗಳನ್ನು ಗೆದ್ದು, ಭಾರತದ ಹೆಮ್ಮೆ ಹೆಚ್ಚಿಸಿತ್ತು. ಈ ಕ್ರೀಡೆಗೆ ಹೊರಡುವಾಗ ಪ್ರಧಾನಿ ಮೋದಿ, ಈ ಬಾರಿ ನೀವೆಲ್ಲರೂ ನೂರಕ್ಕೂ ಹೆಚ್ಚು ಪದಕವನ್ನು ಗೆದ್ದು ತರಬೇಕು ಎಂದಿದ್ದರು. ಆ ಮಾತನ್ನು ಈಡೇರಿಸಿದ ಭಾರತೀಯ ಕ್ರೀಡಾಪಟುಗಳು, ಏಷ್ಯನ್ ಗೇಮ್ಸ್‌ನಲ್ಲಿ 100ಕ್ಕೂ ಹೆಚ್ಚು ಪದಕ ಪಡೆದಿದ್ದರು. ತಮ್ಮ ಮಾತನ್ನು ಈಡೇರಿಸಿದ್ದಕ್ಕೆ, ಪ್ರಧಾನಿ ಮೋದಿ ಪದಕ ವಿಜೇತರನ್ನು ಭೇಟಿಯಾಗಿ, ಅವರೊಂದಿಗೆ ಭೋಜನ ಸ್ವೀಕರಿಸಿ, ಕ್ರೀಡಾಪಟುಗಳ ಶ್ಲಾಘನೆ ಮಾಡಿದ್ದರು.

ಹೊಸ ಸಂಸತ್ ಭವನ ಉದ್ಘಾಟನೆ: ಪ್ರಧಾನಿ ನರೇಂದ್ರ ಮೋದಿಯವರು ಇದೇ ವರ್ಷ ಹೊಸ ಸಂಸತ್ ಭವನವನ್ನು ಉದ್ಘಾಟನೆ ಮಾಡಿದರು. ಸೆಂಗೋಲ್ ಸ್ಥಾಪಿಸುವ ಮೂಲಕ ಪ್ರಧಾನಿ, ಹೊಸ ಸಂಸತ್ ಭವನವನ್ನು ಉದ್ಘಾಟನೆ ಮಾಡಿದ್ದು, ಹಲವು ರಾಜ್ಯಗಳಿಂದ ಉದ್ಘಾಟನಾ ಕಾರ್ಯಕ್ರಮಕ್ಕೆ ಪುರೋಹಿತರನ್ನು ಕರೆಸಲಾಗಿತ್ತು. ಪದ್ದತಿ ಪ್ರಕಾರವಾಗಿ ಪೂಜೆ ನೆರವೇರಿಸುವ ಮೂಲಕ ಪ್ರಧಾನಿ ಮೋದಿ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಅಯೋಧ್ಯಾ ಧಾಮ್ ಉದ್ಘಾಟನೆ: ಇಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣ ಮತ್ತು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಹಾಗಾಗಿ 2023ನೇ ವರ್ಷದ ಎಂಡಿಂಗ್ ಕೂಡ ಭಾರತೀಯರ ಪಾಲಿಗೆ ಸಖತ್ ಸ್ಪೆಶಲ್ ಆಗಿದೆ. ಇನ್ನು ಮುಂದಿನ ವರ್ಷ ಅಂದ್ರೆ 2024ಕ್ಕೆ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಹಾಗಾಗಿ ಮುಂದಿನ ವರ್ಷವಿಡೀ ಭಾರತೀಯರ ಪಾಲಿಗೆ ಲಕ್ಕಿಯಾಗಿರಲಿ ಅನ್ನೋದೇ ನಮ್ಮ ಆಶಯ.

ಪ್ರಧಾನಿ ಮೋದಿ ಭದ್ರತಾ ವೈಫಲ್ಯ, ಪಂಜಾಬ್‌ ಎಸ್‌ಪಿ ಸಸ್ಪೆಂಡ್

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss