Thursday, December 26, 2024

Latest Posts

ಇಂಡೋನೇಷ್ಯಾ ಓಪನ್: ಕ್ವಾರ್ಟರ್ಗೆ ಲಕ್ಷ್ಯ ಸೇನ್

- Advertisement -

ಜಕರ್ತಾ:ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ನಂ.9ನೇ ಆಟಗಾರ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಲಕ್ಷ್ಯ ಸೇನ್ ಡೆನ್ಮಾರ್ಕ್ ನ ರಾಸ್ಮಸ್ ಗೆಮ್ಕೆ ವಿರುದ್ಧ 54 ನಿಮಿಷಗಳ ಕಾಲ ಹೋರಾಡಿ 21-18, 21-15 ಅಂಕಗಳಿಂದ ಗೆದ್ದರು.

ಲಕ್ಷ್ಯ ಸೇನ್ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

ಮೊದಲ ಸೆಟ್ನಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದರು. ಆದರೆ ಲಕ್ಷ್ಯ ಸೇನ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಗೆದ್ದುಕೊಂಡರು. ನಿರ್ಣಾಯಕ 2ನೇ ಸೆಟ್ ನಲ್ಲಿ  ಗೆಮ್ಕೆ 11-10 ಅಂಕಗಳಿಂದ ತಿರುಗೇಟು ಕೊಟ್ಟರು.

ಕೂಡಲೆ ಎಚ್ಚೆತ್ತ ಲಕ್ಷ್ಯ ಎದುರಾಳಿಗೆ ಮತ್ತೆ ಅವಕಾಶವೇ ಕೊಡಲಿಲ್ಲ. ಸಂಪೂರ್ಣ ಮೇಲುಗೈ ಸಾಧಿಸುತ್ತಾ ಸಾಗಿ ಗೆಲುವಿನ ದಡ ಸೇರಿದರು.

- Advertisement -

Latest Posts

Don't Miss