Friday, November 22, 2024

Latest Posts

ದರ್ಶನ್ ಕೇಸ್ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದ್ರಜೀತ್‌ ಲಂಕೇಶ್ ಮಾತು

- Advertisement -

Hubli News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಮಗನ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದ ನಿರ್ಮಾಪಕ, ನಟ ಇಂದ್ರಜೀತ್ ಲಂಕೇಶ್, ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯದಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ಮಾತನಾಡಿ, ಬೇಸರ ಹೊರಹಾಕಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ್ಯಟ್ದ್ ಸೇಮ್ ಟೈಂ ದರ್ಶನ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗನಿಗೆ ದೇವರು ಧೈರ್ಯ ನೀಡಲಿ. ಕೆಲವೇ ದಿನಗಳಲ್ಲಿ‌ ನಾನು ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ ಮಾಡಲಿದ್ದೇನೆ. ಅವರಿಗೆ ಅನ್ಯಾಯವಾಗಬಾರದು. ದರ್ಶನ ಜತೆಗೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಈಗ ಅವರನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಈಗಲೇ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿ ಹೋಗಲ್ಲ.

ತನಿಖೆಯ ನಂತರ ಈ ಘಟನೆಯಲ್ಲಿ ದರ್ಶನ ಅವರ ಪಾತ್ರ ಏನೂ ಎಂಬುವುದು ತಿಳಿಯುತ್ತದೆ. ಈಗ ತನಿಖೆಯ ಪೂರ್ವದಲ್ಲಿ ನಾವು ಮಾತಾಡುವುದು ತಪ್ಪು ಆಗುತ್ತೆ. ಈ ಘಟನೆ ನಡೆಯಬಾರದಿತ್ತು, ಆದರೆ ನಡೆದಿದೆ. ಇಲ್ಲಿ ಅಮಾಯಕ ಹುಡುಗನ ಜೀವನ ಹೋಗಿದೆ. ರೇಣುಕಾಸ್ವಾಮಿ ಕಳೆದುಕೊಂಡ ಕುಟುಂಬ ಬಿದಿಗೆ ಬಂದಿದೆ. ರೇಣುಕಾಸ್ವಾಮಿ ಪತ್ನಿ ಗರ್ಭಿಣಿ ಮಹಿಳೆಯಾಗಿದ್ದಾರೆ. ಇಂತಹ ಸಮಯದಲ್ಲಿ ಗಂಡನನ್ನು ಕಳೆದುಕೊಂಡು ಮಹಿಳೆ ನೋವಿನಲ್ಲಿದ್ದಾರೆ. ಈ ಕಡೆ ದರ್ಶನ ಪತ್ನಿ ಮಗ ಕೂಡಾ ಈ ಘಟನೆಯಿಂದ ನೋವಿನಲ್ಲಿದ್ದಾರೆ. ಅವರಿಗೆ ದೇವರು ಧೈರ್ಯ ನೀಡಬೇಕು.

ಕಳೆದ ದಿನ ಶಿವಮೊಗ್ಗದಲ್ಲಿ ಈ ಘಟನೆ ಬಗ್ಗೆ ಮಾತ್ನಾಡಿದೆ. ಅಲ್ಲಿ ಕೆಲವು ಪತ್ರಿಕೆಗಳು ದರ್ಶನಗೆ ಟಾಂಗ್ ಮತ್ತು ದರ್ಶನ ಕಾಲೆಳೆದ ಇಂದ್ರಜೀತ ಅಂತಾ ಬರೆದಿದ್ದರು. ಮೂವತ್ತು ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದು ಇಂತಹ ಘಟನೆ ಬಗ್ಗೆ ಮಾತಾಡ್ಲೇಬೇಕಾಗುತ್ತೆ. ಸಿನಿಮಾದವರಾಗಿ ನಾವು ಸುಮ್ಮಿರಬಹುದು ಆದರೆ, ಪತ್ರಕರ್ತನಾಗಿ ಅಲ್ಲ. ಇಲ್ಲಿ ಟಾಂಗ್ ಕಾಲೆಳೆದರು ಅನ್ನುವುದು ಬರುವುದಿಲ್ಲ. ಪೊಲೀಸರು ಈ ಘಟನೆಯ ತನಿಖೆಯನ್ನು ಮಾಡುತ್ತಿದ್ದಾರೆ. ತನಿಖೆಯ ಬಳಿಕ ಇದರ ಬಗ್ಗೆ ಮಾತಾಡುವುದು ತುಂಬಾ ಉತ್ತಮ ಎಂದು ಹೇಳಿದೆ. ಆದರೆ ಕೆಲವು‌ ಪತ್ರಿಕೆಗಳು ವರದಿ‌ ನೋವುಂಟು ಮಾಡಿತ್ತು. ಇಲ್ಲಿ ನಾನು ದರ್ಶನಗೆ ಟಾಂಗ್ ಮತ್ತೊಂದು ಮಗದೊಂದು ಕೊಡೋ ಅವಶ್ಯವಿಲ್ಲ.

ಸೊಶಿಯಲ್ ಮೀಡಿಯಾ ಒಂದು ಉತ್ತಮ ಫ್ಲಾಟಫಾರ್ಮ ಆಗಿದೆ. ಆದರೆ ಅದನ್ನು ಇತ್ತೀಚೆಗೆ ಕೆಲವು ಕಿಡಗೇಡಿಗಳು ದುರ್ಬಳಕೆಗೆ ಬಳಸಿಕೊಳ್ಳುತ್ತಿದ್ದಾರೆ. ಸೊಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಸೇರಿ ಬಳೆಕೆಯ ರೀತಿ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸರ್ಕಾರ ಸೊಶಿಯಲ್ ಮೀಡಿಯಾದ ಮೇಲೆ ನಿಗಾ ಇಡಬೇಕು.. ಸೈಬರ್ ಠಾಣೆ ಅಂತಾ ಇದೇ, ಆದ್ರೇ ಅದರ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಸೊಶಿಯಲ್ ಮೀಡಿಯಾ ದುರ್ಬಳಕೆಗೆ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಇದರ ಬಗ್ಗೆಯ ನಾನೇ ಹೋರಾಟಕ್ಕೆ ಇಳಿಯುತ್ತೇನೆ ಎಂದು ಇಂದ್ರಜೀತ್‌ ಲಂಕೇಶ್ ಹೇಳಿದ್ದಾರೆ.

Sandalwood News: ದರ್ಶನ್ ಬಿಡುಗಡೆಗಾಗಿ ಸಚಿವರಿಂದ 128 ಬಾರಿ ಕರೆ!

ಯಡಿಯೂರಪ್ಪ ಬಂಧನ? ಪೋಕೋ ಕೇಸ್​ನಲ್ಲಿ ಬಿಎಸ್​ವೈ ಬಂಧನಕ್ಕೆ ಸಿದ್ಧತೆ..!

National News: ಐಸ್​ಕ್ರೀಮ್​ನಲ್ಲಿ ಮಾನವನ ಬೆರಳು!

- Advertisement -

Latest Posts

Don't Miss