Sunday, September 8, 2024

Latest Posts

ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು..? ಮೈಸೂರು ಕರ್ನಾಟಕ..

- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಟಿವಿ ಡಿಸೆಂಬರ್ ತಿಗಂಳ ಸರ್ವೆ ನಡೆಸಿದೆ. ಎಲೆಕ್ಷನ್‌ಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು, ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಎಷ್ಟರ ಮಟ್ಟಿಗೆ ಮೇಲುಗೈ ಸಾಧಿಸುತ್ತದೆ ಅನ್ನೋ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಮೈಸೂರು ಕರ್ನಾಟಕ ಭಾಗದಲ್ಲಿ ಜನ ಯಾರ ಬಗ್ಗೆ ಒಲವು ತೋರಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್ ಹೀಗಿದೆ ನೋಡಿ

ಮೈಸೂರು ವಿಧಾನಸಭಾ ಕ್ಷೇತ್ರದಲ್ಲಿ 61 ವಿಧಾನ ಸಭಾ ಕ್ಷೇತ್ರವಿದ್ದು, ತುಮಕೂರಿನಲ್ಲಿ 11 ಕ್ಷೇತ್ರವಿದ್ದು, 4 ಕ್ಷೇತ್ರ ಬಿಜೆಪಿ ಪಾಲು, 2 ಕಾಂಗ್ರೆಸ್, 5ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 5 ವಿಧಾನಸಭಾ ಕ್ಷೇತ್ರವಿದ್ದು,1 ಕ್ಷೇತ್ರ ಬಿಜೆಪಿ ಪಾಲು, 3 ಜೆಡಿಎಸ್ ಮತ್ತು 1 ಇತರೆ ಮುನ್ನಡೆಯನ್ನ ಕಾಯ್ದುಕೊಂಡಿದೆ.

ಕೋಲಾರದಲ್ಲಿ 6 ವಿಧಾನಸಭಾ ಕ್ಷೇತ್ರವಿದ್ದು, ಬಿಜೆಪಿ ಸೊನ್ನೆ, ಕಾಂಗ್ರೆಸ್ 2, ಜೆಡಿಎಸ್ 4 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೊನ್ನೆ, ಕಾಂಗ್ರೆಸ್ 1 ಕ್ಷೇತ್ರದಲ್ಲಿ, ಮತ್ತು ಜೆಡಿಎಸ್ 3ರಲ್ಲಿ ಮುನ್ನಡೆಯನ್ನ ಕಾಯ್ದುಕೊಂಡಿದೆ.

ಬೆಂಗಳೂರು ಗ್ರಾಮಾಂತರ 4 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 1, ಕಾಂಗ್ರೆಸ್ 1 ಮತ್ತು ಜೆಡಿಎಸ್ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಂಡ್ಯ ವಿಧಾನಸಭಾದ 7 ಕ್ಷೇತ್ರಗಳಲ್ಲಿ ಬಿಜೆಪಿ ಸೊನ್ನೆ, ಕಾಂಗ್ರೆಸ್ 3, ಜೆಡಿಎಸ್ 4ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಹಾಸನದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 1 ಮತ್ತು ಜೆಡಿಎಸ್ 3 ಸ್ಥಾನವನ್ನು ಕಾಯ್ದುಕೊಂಡಿದೆ..

ಕೊಡಗಿನ 2 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 2 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ..

ಮೈಸೂರು 11 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 2, ಕಾಂಗ್ರೆಸ್ 5, ಜೆಡಿಎಸ್ 4 ಸ್ಥಾನಗಳನ್ನು ಕಾಯ್ದುಕೊಂಡಿದೆ..

ಒಟ್ಟಾರೆಯಾಗಿ ಬಿಜೆಪಿ 15, ಕಾಂಗ್ರೆಸ್ 16, ಜೆಡಿಎಸ್ 29 ಮತ್ತು ಇತರೆ 1 ಸ್ಥನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ..

ಸಿದ್ದರಾಮಯ್ಯ ವಿರುದ್ಧ ವರ್ತೂರು ಪ್ರಕಾಶ್ ವಾಗ್ದಾಳಿ

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

- Advertisement -

Latest Posts

Don't Miss