ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ. ಇಲ್ಲಿ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ಕಾಣಿಕೆ ಬರುತ್ತದೆ. ಅಲ್ಲದೇ, ಈ ದೇವಸ್ಥಾನದಲ್ಲಿ ಮೊದಲಿನಿಂದಲೂ, ರಾಶಿ ರಾಶಿ ವಜ್ರ, ಚಿನ್ನಾಭರಣಗಳ ಖಜಾನೆಯೇ ಇದೆ. ಇಲ್ಲಿ 7 ಕೋಣೆಗಳಿದ್ದು, ಇಲ್ಲಿಯವರೆಗೆ 6 ಕೊಣೆಯ ಬಾಗಿಲನ್ನು ತೆಗೆದು, ಖಜಾನೆಯನ್ನು ಲೆಕ್ಕ ಹಾಕಲಾಗಿದೆ. ಆದ್ರೆ 7ನೇ ಕೋಣೆಯ ಬಾಗಿಲನ್ನು ಸರ್ಪಗಳು ಕಾಯುತ್ತಿರುವ ಕಾರಣ, ಆ ಬಾಗಿಲನ್ನು ತೆಗಿಯಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಎರಡನೇಯ ದೇವಸ್ಥಾನ ಆಂಧ್ರದ ತಿರುಪತಿ ತಿರುಮಲ ದೇವಸ್ಥಾನ. ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರತೀ ದಿನ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿ ಪ್ರತಿದಿನ ಮದುವೆ ಮನೆಯಲ್ಲಿರುವ ಜನ ಜಂಗುಳಿಯಂತೆ, ಜನ ತುಂಬಿರುತ್ತಾರೆ. ಇಲ್ಲಿ ಕೋಟಿ ಕೋಟಿ ಕಾಣಿಗೆ ಬರುವುದಲ್ಲದೇ, ಶ್ರೀಮಂತರು ತಿರುಮಲನಿಗೆ ವಜ್ರಾಭರಣಗಳನ್ನ, ಚಿನ್ನಾಭರಣಗಳನ್ನ ಹರಕೆ ರೂಪದಲ್ಲಿ ನೀಡುತ್ತಾರೆ. ಇನ್ನು ಸಾಮಾನ್ಯ ಜನ ದಕ್ಷಿಣೆ ಮತ್ತು ಕೂದಲನ್ನ ಹರಕೆ ರೂಪದಲ್ಲಿ ನೀಡುತ್ತಾರೆ. ಇದರಿಂದಲೇ ಈ ದೇವಸ್ಥಾನ ಅರ್ಧ ಶ್ರೀಮಂತವಾಗಿದೆ. ಅಲ್ಲದೇ ಇಲ್ಲಿ ತಿರುಪತಿ ಪ್ರಸಾದವಾದ ಲಾಡುವಿನ ವ್ಯಾಪಾರವೂ ಹೆಚ್ಚಾಗಿರುವ ಕಾರಣ, ಅದರಿಂದಲೂ ಹೆಚ್ಚಿನ ಆದಾಯ ಬರುತ್ತದೆ.
ಮೂರನೇಯ ದೇವಸ್ಥಾನ ಶಿರಡಿ ಸಾಯಿಬಾಬಾ ದೇವಸ್ಥಾನ. ಜಾತಿ ಬೇಧವಿಲ್ಲದೇ ಪೂಜಿಸಲ್ಪಡುವ ದೇವರು ಅಂದ್ರೆ ಸಾಯಿಬಾಬಾ. ಹಾಗಾಗಿ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಪ್ರತಿದಿನ ಸಾವಿರಾರು ಮಂದಿ ಭಕ್ತರು ಬರುತ್ತಾರೆ. ಮತ್ತು ತಮ್ಮ ಶಕ್ತಿಗನುಸಾರವಾಗಿ ಕಾಣಿಕೆಯನ್ನ ನೀಡುತ್ತಾರೆ. ಅಲ್ಲದೇ ಇಲ್ಲಿ ಎಳ್ಳಿನ ಪ್ರಸಾದವನ್ನ ಕೂಡ ಮಾರಾಟ ಮಾಡಲಾಗುವ ಕಾರಣಕ್ಕೆ, ಇಲ್ಲಿನ ಆದಾಯ ಉತ್ತಮವಾಗಿದೆ.
ನಾಲ್ಕನೇಯ ದೇವಸ್ಥಾನ ವೈಷ್ಣೋದೇವಿ ದೇವಸ್ಥಾನ. ಪ್ರತಿ ದಿನ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದು ಪ್ರವಾಸಿ ತಾಣವಾದ ಕಾರಣ, ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚು. ಆದ ಕಾರಣ ಇಲ್ಲಿ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ.
ಐದನೇಯ ದೇವಸ್ಥಾನ ಪುರಿ ಜಗನ್ನಾಥ ಮಂದಿರ. ದೇಶದ ಮತ್ತು ಪ್ರಪಂಚದ ನಾನಾ ಭಾಗಗಳಿಂದ ಪುರಿ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಲು ಪ್ರತಿದಿನ ಹಲವಾರು ಮಂದಿ ಭಕ್ತರು ಇಲ್ಲಿ ಬರುತ್ತಾರೆ. ಬೇಸಿಗೆಯಲ್ಲಂತೂ ಇಲ್ಲಿ ಪ್ರವಾಸಿಗರ ಮತ್ತು ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.
ಆರನೇಯ ದೇವಸ್ಥಾನ ಮುಂಬೈನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ. ಸಿನಿಮಾ ಶುರುವಾಗುವ ಮುನ್ನ, ಚುನಾವಣೆಗೆ ನಿಲ್ಲುವ ಮುನ್ನ ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ನಿರ್ದೇಶಕರು ಮೊದಲು ಭೇಟಿ ನೀಡುವುದೇ, ಈ ಸಿದ್ಧಿ ವಿನಾಯಕನ ಮಂದಿರಕ್ಕೆ. ಹೀಗೆ ಬರುವ ಗಣ್ಯರು, ಸಾವಿರ ಸಾವಿರ ರೂಪಾಯಿ ದೇಣಿಗೆ ನೀಡುತ್ತಾರೆ. ಅಲ್ಲದೇ ಗೆಲುವು ತಮ್ಮದಾದರೆ, ದೊಡ್ಡದಾದ ಕಾಣಿಕೆಯನ್ನೇ ನೀಡುತ್ತಾರೆ. ಹಾಗಾಗಿ ಮುಂಬೈನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ದೇಶದ 6ನೇ ಶ್ರೀಮಂತ ದೇವಸ್ಥಾನವಾಗಿದೆ.