ಹಿಂದು ದೇವರ ದೇವಸ್ಥಾನ ಬರೀ ಭಾರತದಲ್ಲಷ್ಟೇ ಅಲ್ಲ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿದೆ. ಇಂಡೋನೇಷಿಯಾದಲ್ಲೂ ಹಿಂದೂ ಮಂದಿರವಿದೆ. ಆ ಮಂದಿರದ ವಿಶೇಷತೆ ಏನು..? ಆ ಮಂದಿರದಲ್ಲಿ ಯಾವ ದೇವರನ್ನು ಪೂಜಿಸಲಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಇಂಡೋನೆಷಿಯಾದ ಬಾಲಿಯಲ್ಲಿ ಬೆಹಸಾಕಿ ಎನ್ನುವ ಮಂದಿರವಿದೆ. ಇದು ವಿಶ್ವದಲ್ಲಿರುವ ಸುಂದರ ಹಿಂದೂ ದೇವರ ದೇವಸ್ಥಾನಗಳಲ್ಲೊಂದು. ಬೆಹಸಾಕಿ ಅಂದ್ರೆ ವಾಸುಕಿ. ಹಾಗಾಗಿ ಇಲ್ಲಿ ನಾಗನ ಪೂಜೆ ಮಾಡಲಾಗತ್ತೆ. ಅಂದ್ರೆ ಡ್ರ್ಯಾಗನ್ ಪೂಜೆ. ಇಷ್ಟೇ ಅಲ್ಲದೇ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕೂಡಾ ಇಲ್ಲಿ ಪೂಜಿಸಲಾಗತ್ತೆ. ಈ ಒಂದೇ ದೇವಸ್ಥಾನದಲ್ಲಿ 86 ಚಿಕ್ಕ ಚಿಕ್ಕ ದೇವಸ್ಥಾನಗಳಿದ್ದು, 86 ದೇವರುಗಳನ್ನು ಪೂಜಿಸಲಾಗುತ್ತದೆ.
ಬಾಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ಪ್ರವಾಸಕ್ಕೆ ಬರುವ ಪ್ರತಿಯೊಬ್ಬರು, ಈ ದೇವಸ್ಥಾನಕ್ಕೆ ಭೇಟಿ ಕೊಟ್ಟೇ ಕೊಡ್ತಾರೆ. ಇನ್ನೊಂದು ವಿಶೇಷತೆ ಅಂದ್ರೆ ಇದು ಸಾವಿರ ವರ್ಷಗಳ ಇತಿಹಾಸ ಹೊಂದಿದ ದೇವಸ್ಥಾನವಾಗಿದ್ದು, ಇಲ್ಲಿನ ಜನ ಪ್ರತಿಯೊಂದು ಹಿಂದೂ ಹಬ್ಬವನ್ನ ವಿಜೃಂಭಣಯಿಂದ ಆಚರಿಸುತ್ತಾರೆ. 65ಕ್ಕೂ ಹೆಚ್ಚು ಪೂಜೆ, ಜಾತ್ರೆ ಸೇರಿ ಹಲವು ಸಮಾರಂಭಗಳನ್ನು ನಡೆಸಲಾಗುತ್ತದೆ.