ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ವೈಖರಿ ವಿಶಿಷ್ಟತೆಯ ಆಗರ. ಈ ಕೌಶಲ್ಯಗಳನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಆನ್ ಲೈನ್ ತರಬೇತಿ ಆರಂಭಿಸಿದೆ.
ಚುನಾವಣೆ ಸನಿಹವಾಗುತ್ತಿರುವ ಇಂದಿನ ದಿನಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಹಾಗೂ ಕಾರ್ಯತಂತ್ರದ ರೂಪಿಸುವಿಕೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಪ್ರಧಾನ ಪಾತ್ರ ವಹಿಸಲಿದೆ. 2023 ರ ವಿಧಾನಸಭಾ
ಚುನಾವಣೆ ಬಹುತೇಕ ಆನ್ ಲೈನ್ ಮುಖಾಂತರವೇ ಪ್ರಚಾರಕ್ಕೆ ಬರಲಿದೆ ಎನ್ನುವುದು ಅನೇಕ ಸಂಶೋಧನೆಗಳ ತಾತ್ಪರ್ಯ. ಹಾಗಾಗಿ ಈ ದಿಸೆಯ ಪ್ರಯತ್ನವನ್ನು ಕೆಐಪಿಎಲ್ ಆರಂಭಿಸಿದ್ದು, ಚುನಾವಣೆಗೆ ಅಗತ್ಯವಾಗುವ ಟೂಲ್ಸ್ ಗಳ ಜತೆಗೆ ಡಿಜಿಟಲ್ ಮಾರ್ಕೆಟಿಂಗ್ ಸ್ಕಿಲ್ ಗಳನ್ನು ಹೇಳಿಕೊಡಲಿದೆ.
ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?
ಇದಕ್ಕೆ ಪೂರಕವಾಗುವಂತೆ ಸರಣಿ ಉಚಿತ ವೆಬಿನಾರ್ ಗಳನ್ನು ಕೂಡಾ ಹಮ್ಮಿಕೊಂಡಿರುವ ಸಂಸ್ಥೆ, ಡಿಜಿಟಲ್ ಮಾರ್ಕೆಟಿಂಗ್ ನ ಅಗತ್ಯತೆ ಹಾಗೂ ಆದಾಯ ಮೂಲಗಳ ಬಗ್ಗೆ ಬೆಳಕು ಚೆಲ್ಲಲು ಚಿಂತನೆ ನಡೆಸಿದೆ. ಈಗಾಗಲೇ ಡಿ.1ರಂದು ಹಾಗೂ ಡಿ.2ರಂದು ಎರಡು ವೆಬಿನಾರ್ ಗಳು ನಡೆದಿದ್ದು ಅತ್ಯಂತ ಯಶಸ್ವಿಯಾಗಿದೆ. ಈಗ ಇನ್ನೊಂದು ಕೊನೆಯ ಅವಕಾಶವನ್ನು ನೀಡಿರುವ ಸಂಸ್ಥೆ ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿಸಿ ಉದ್ಯೋಗಾವಕಾಶಗಳ ಮಾಹಿತಿ ನೀಡುವ ಸಲುವಾಗಿ ಇನ್ನೊಂದು ವೆಬಿನಾರ್ ಆಯೋಜಿಸಿದೆ.
ವೆಬಿನಾರ್ ನಲ್ಲಿ ಟಿರ್ವಿ ಡಿಜಿಟಲ್ ವಿಭಾಗದ ಎಸ್ ಇ ಒ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಪೂರ್ವ ಕುಮಾರ್ ಭಾಗವಹಿಸಲಿದ್ದು, ಉದ್ಯೋಗಾವಕಾಶಗಳ ಕುರಿತು ಮಾತಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ತರಬೇತಿಯ ಇತರ ಮಾಹಿತಿಗಳು ಹಾಗೂ ದೊರಕಲಿರುವ 5 ಕ್ಕೂ ಹೆಚ್ಚು ಸರ್ಟಿಫಿಕೇಟ್ ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಚಂದನ್ ಕಲಾಹಂಸ ಅವರೇ ನಡೆಸಿಕೊಡಲಿರುವ 21 ದಿನಗಳ ತರಬೇತಿ ಇದೇ ಡಿ.15 ರಿಂದ ಆರಂಭಗೊಳ್ಳಲಿದ್ದು, ಆಯ್ದ ಮೂವರಿಗೆ ಬೆಂಗಳೂರಿನ ಸಂಸ್ಥೆಯಲ್ಲಿ 1 ತಿಂಗಳು ಮನೆಯಿಂದಲೇ ಮಾಡುವ ಇಂಟರ್ನ್ಶಿಪ್ ಸಹ ದೊರಕಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಕಾಂತಾರ ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿ ಮೇಲೆ ಹಲ್ಲೆ..
ಡಿಜಿಟಲ್ ಮೆಂಟರ್ ಚಂದನ್ ಕಲಾಹಂಸ ಕುರಿತು…
6 ವರ್ಷಗಳಿಂದ ಡಿಜಿಟಲ್ ಮಾರ್ಕೆಟಿಂಗ್ ನ ವಿವಿಧ ಮಜಲುಗಳಲ್ಲಿ ಸತತ ತೊಡಗಿಸಿಕೊಂಡಿರುವ ಇವರು, ಅನೇಕ ವ್ಯವಹಾರಾಭಿವೃದ್ಧಿ ತಂತ್ರಗಳ ಮೂಲಕ ಡಿಜಿಟಲೈಸೇಶನ್ ಗೆ ಕೊಡುಗೆ ನೀಡಿದ್ದಾರೆ. ಮಾಧ್ಯಮ ಕ್ಷೇತ್ರ, ಇ ಕಾಮರ್ಸ್, ಕಾಲೇಜುಗಳ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ವೆಬ್ ಡಿಸೈನ್ ಮಾಡಿರುವುದಲ್ಲದೇ, ಹೆಚ್ಚು ಜನರು ಆಯಾ ವೆಬ್ ಸೈಟ್ ಗಳನ್ನು ನೋಡುವಂತೆ ಮಾಡಿರುವುದು ಎಸ್ ಇ ಒ ಸ್ಕಿಲ್ ಗೆ ಹಿಡಿದ ಕೈಗನ್ನಡಿ. ಅನೇಕ ಚುನಾವಣಾ ಅಭ್ಯರ್ಥಿಗಳ ಸೋಷಿಯಲ್ ಮೀಡಿಯಾ ಪರ್ಸನಲ್ ಪ್ರೊಫೈಲ್ ಗಳನ್ನು ಹ್ಯಾಂಡಲ್ ಮಾಡಿರುವುದು, ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದಿಂದ ಡಿಜಿಟಲ್ ಮೀಡಿಯಾ ಇನ್ವಿಜಿಲೇಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಇವರ ಅನುಭವ. ಮುಖ್ಯವಾಗಿ ಕಲಿತದ್ದನ್ನು ಇತರರಿಗೆ ಕಲಿಸಬೇಕೆಂಬ ಹಂಬಲದಿಂದ ಇವರೇ ಈ ಕೋರ್ಸನ್ನು ಸ್ವತಃ ಸಿದ್ಧಪಡಿಸಿದ್ದು, ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನಡೆಸಲು ಸಜ್ಜಾಗಿದ್ದಾರೆ.
ಇಂದೇ ಉಚಿತ ವೆಬಿನಾರ್ ಗೆ ನೊಂದಾಯಿಸಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://chat.whatsapp.com/BJsMoD1SGhp7LDeyrNxvDy