- Advertisement -
ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
- ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು ಬಣ್ಣದ ಪಟ್ಟಿಗಳನ್ನು ಒಳಗೊಂಡಿರುತ್ತದೆ. ಇದು ಶಾಂತ ಸ್ವಭಾವದ ಹಾವಾಗಿದ್ದು, ಜನ ಇದನ್ನು ಸಾಕಲು ಇಷ್ಟಪಡುತ್ತಾರೆ.
- ರಿಂಗ್ ನೆಕ್ ಸ್ನೇಕ್: ಹೆಸರಿಗೆ ತಕ್ಕಂತೆ ಈ ಹಾವಿನ ಕುತ್ತಿಗೆ ಮೇಲೆ ಹಳದಿ ಬಣ್ಣದ ಒಂದೇ ಒಂದು ಪಟ್ಟಿ ಕಾಣಸಿಗುತ್ತದೆ. ಇದೇ ಕಾರಣಕ್ಕೆ ಇದನ್ನು ರಿಂಗ್ ನೆಕ್ ಸ್ನೇಕ್ ಎಂದು ಕರೆಯಲಾಗುತ್ತದೆ. ಮೆಕ್ಸಿಕೋ, ಅಮೆರಿಕಾ ಮತ್ತು ಕೆನಡಾದಲ್ಲಿ ಕಂಡುಬರುವ ಈ ಹಾವಿನ ದೇಹದಲ್ಲಿ ಒಂದಿಷ್ಟು ವಿಷವಿರುವುದಿಲ್ಲ. ಈ ಹಾವು ಸೈಜಿನಲ್ಲಿ ಪುಟ್ಟದಾಗಿರುತ್ತದೆ. ಮತ್ತು ಕಚ್ಚದೇ ಇರುವ ಕಾರಣಕ್ಕೆ, ಇದನ್ನು ಜನ ಇಷ್ಟಪಟ್ಟು ಸಾಕುತ್ತಾರೆ. ದಿನದಲ್ಲಿ ಆರಾಮವಾಗಿದ್ದು, ರಾತ್ರಿ ಸಮಯದಲ್ಲಿ ಆ್ಯಕ್ಟಿವ್ ಆಗಿರುತ್ತದೆ.
- ಸ್ಮೂತ್ ಗ್ರೀನ್ ಸ್ನೇಕ್: ಹೆಸರಿಗೆ ತಕ್ಕಂತೆ ಹಸಿರು ಬಣ್ಣದಿಂದ ಕೂಡಿದ್ದು, ಹಸಿರು ಗಿಡದಲ್ಲಿ ಈ ಹಾವು ಅಡಗಿದ್ದರೆ, ಇದನ್ನು ಕಂಡು ಹಿಡಿಯೋದು ತುಂಬಾ ಕಷ್ಟವಾಗುತ್ತದೆ. ಆದ್ರೆ ಇದು ಯಾರ ಮೇಲೂ ಅಟ್ಯಾಕ್ ಮಾಡುವುದಿಲ್ಲ. ಮತ್ತು ಕಚ್ಚುವುದಿಲ್ಲ. ಇದೇ ಕಾರಣಕ್ಕೆ ಕೆಲವರು ಇದನ್ನ ಮನೆಯಲ್ಲಿ ಸಾಕುತ್ತಾರೆ. ಆದ್ರೆ ಇದನ್ನ ಕೈಯಲ್ಲಿ ಹಿಡಿದುಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಇದು ಏಕಾಂತದಲ್ಲಿರಲು ಇಷ್ಟಪಡುವ ಕಾರಣಕ್ಕೆ, ಇದರ ಜೊತೆ ಯಾರನ್ನೂ ಸೇರಿಸಿಕೊಳ್ಳಲು ಇದಕ್ಕೆ ಇಷ್ಟವಾಗುವುದಿಲ್ಲ.
- ಗಾಫರ್ ಸ್ನೇಕ್: ಅಮೆರಿಕದಲ್ಲಿ ಕಂಡುಬರುವ ಈ ಹಾವು, ರೈತರಿಗೆ ಅನುಕೂಲವಾಗಿರುತ್ತದೆ. ಮತ್ತು ಇದರಲ್ಲಿ ವಿಷ ಇರುವುದಿಲ್ಲ. ಹಾಗಾಗಿ ಜನ ಇದನ್ನು ಸಾಕಲು ಇಷ್ಟಪಡುತ್ತಾರೆ. 20 ವರ್ಷದ ತನಕ ಬದುಕಬಹುದಾದ ಈ ಜೀವಿಗೆ ಬಿಸಿಲೆಂದರೆ ತುಂಬ ಪ್ರೀತಿ.
- Advertisement -