Sunday, September 8, 2024

Latest Posts

ಈ ಸಮಯದಲ್ಲಿ ಸರಸ್ವತಿ ನಿಮ್ಮ ಮನೋಕಾಮನೆಗಳನ್ನ ಪೂರ್ತಿ ಮಾಡುತ್ತಾಳೆ..

- Advertisement -

 ಸರಸ್ವತಿ ಅಂದ್ರೆ ವಿದ್ಯಾ ದೇವಿಯನ್ನ ಆರಾಧಿಸಿದರೆ, ಜೀವನದಲ್ಲಿ ಯಶಸ್ಸು ಗಳಿಸಬಹುದು ಅನ್ನೋದು ಹಿಂದೂಗಳ ನಂಬಿಕೆ. ಹಾಗಾಗಿ ನವರಾತ್ರಿಯಲ್ಲಿ ಒಂದು ದಿನ ಸರಸ್ವತಿ ಪೂಜೆಯನ್ನು ಮಾಡಲಾಗತ್ತೆ. ಇಂಥ ಸರಸ್ವತಿ ದೇವಿ ಒಲಿಯಬೇಕಂದ್ರೆ, ನಾವು ಯಾವ ಸಮಯದಲ್ಲಿ ಆಕೆಯ ಸ್ಮರಣೆ ಮಾಡಬೇಕು..? ಮಕ್ಕಳಿಗೆ ಯಾವ ಸಮಯದಲ್ಲಿ ಪಾಠ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

 ನಾವು ಈಗಾಗಲೇ ನಿಮಗೆ ಅಸ್ತು ದೇವತೆಗಳ ಬಗ್ಗೆ ಹೇಳಿದ್ದೇವೆ. ಸಂಜೆ ವೇಳೆಗೆ ಅಸ್ತು ದೇವತೆಗಳು ಸಂಚರಿಸುತ್ತಿರುತ್ತಾರೆ.  ಹಾಗಾಗಿ ಆ ವೇಳೆ ಬರೀ ಧ್ಯಾನ ಮಾಡುವುದು. ಪ್ರಾರ್ಥನೆ ಮಾಡುವುದು, ದೇವರ ಹಾಡು ಹೇಳುವುದು, ಶುಭ ಶುಭ ಮಾತನಾಡುವುದಷ್ಟೇ ಮಾಡಬೇಕು. ಕೆಟ್ಟ ಪದಗಳ ಬಳಕೆ ಮಾಡುವುದು, ಜಗಳವಾಡುವುದು, ಕಣ್ಣೀರು ಹಾಕುವುದೆಲ್ಲ ಮಾಡಬಾರದು. ಹಾಗೆ ಮಾಡಿದರೆ, ಅಸ್ತು ದೇವತೆಗಳು, ಅಸ್ತು ಅಸ್ತು ಎನ್ನುತ್ತಾರೆ. ನಂತರ ನುಡಿದದ್ದೇ, ನಡೆಯುತ್ತದೆ ಅಂತಾ ಹೇಳಿದ್ದೆವು.

ಅದೇ ರೀತಿ ಮುಸ್ಸಂಜೆ ಹೊತ್ತಿನಲ್ಲಿ ಸರಸ್ವತಿ ದೇವಿ, ಲಕ್ಷ್ಮೀ ದೇವಿಯರು ಕೂಡ ಸಂಚರಿಸುತ್ತಾರೆ ಅಂತಾ ಹೇಳಲಾಗತ್ತೆ. ಲಕ್ಷ್ಮೀ ದೇವಿಯ ಬರುವಿಕೆಗಾಗಿಯೇ, ಹಿಂದೂಗಳು ಮನೆಯಲ್ಲಿ ಸಂಧ್ಯಾ ದೀಪವನ್ನು ಹಚ್ಚುತ್ತಾರೆ. ಅದೇ ರೀತಿ, ಸರಸ್ವತಿಯ ಆಗಮನ ಕೂಡ ಅದೇ ಹೊತ್ತಿಗೆ ಆಗುತ್ತದೆ. ಹಾಗಾಗಿ ಸಂಜೆ ದೀಪ ಹಚ್ಚಿದ ಬಳಿಕ, ಕೈ ಕಾಲು ತೊಳೆದು, ದೇವರಿಗೆ ಕೈ ಮುಗಿದು, ಸರಸ್ವತಿಯ ಶ್ಲೋಕ ಹೇಳಿ, ಚಿಕ್ಕ ಮಕ್ಕಳಿಗೆ ಪಾಠ ಹೇಳಲು ಶುರು ಮಾಡಲಾಗುತ್ತದೆ. ದೊಡ್ಡವರೂ ಅಷ್ಟೇ ಮುಸ್ಸಂಜೆ ವೇಳೆಗೆ, ಸರಸ್ವತಿಯ ಶ್ಲೋಕ, ಪ್ರಾರ್ಥನೆಗಳನ್ನು ಹೇಳಬೇಕು. ಪಠ್ಯ ಪುಸ್ತಕದ ಕೆಲಸವಿದ್ದರೆ ಆ ಸಮಯದಲ್ಲಿ ಮಾಡಬೇಕು. ಯಾಕಂದ್ರೆ ಮುಸ್ಸಂಜೆ ಹೊತ್ತಿನಲ್ಲೇ ವಾಗ್ದೇವಿ, ನಮ್ಮೆಲ್ಲ ಮನೋಕಾಮನೆಗಳನ್ನು ಪೂರೈಸುವಳು.

ಕೆಲಸ ಸಿಗದೇ ಒದ್ದಾಡುತ್ತಿರುವವರು, ಸರಿಯಾಗಿ ವಿದ್ಯೆ ಕಲಿಯಲು ಸಾಧ್ಯವಾಗದಿದ್ದವರು, ಕಠಿಣ ಶಬ್ಧವನ್ನು ಸರಿಯಾಗಿ ಉಚ್ಛಾರ ಮಾಡಲು ಬರಬದವರು, ಮುಸ್ಸಂಜೆ ವೇಳೆ ದೇವರಿಗೆ ದೀಪ ಹಚ್ಚಿ, ಸರಸ್ವತಿಗೆ ಕೈ ಮುಗಿದು, ನಿಮ್ಮ ಪ್ರಯತ್ನವನ್ನು ಮಾಡಿ, ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ.

- Advertisement -

Latest Posts

Don't Miss