Friday, December 27, 2024

Latest Posts

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 2

- Advertisement -

ಭಾಗ ಒಂದರಲ್ಲಿ ನಾವು ಶ್ರೀ ವಿಷ್ಣುವಿನ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಎರಡನೇ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.

ಐದನೇಯ ಅವತಾರ ಕಪಿಲ ಮುನಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನಾದ ಕಪಿಲ ಮುನಿಯ ಸಿಟ್ಟಿನಿಂದಲೇ, ಮಹಾಭಾರತ ಯುದ್ಧ ಸಮಯದಲ್ಲಿ ಸಾಗರ ರಾಜನ 8 ಸಾವಿರ ಗಂಡು ಮಕ್ಕಳು ಭಸ್ಮವಾಗಿದ್ದರು. ಪ್ರಮುಖ 12 ಆಚಾರ್ಯರಲ್ಲಿ ಕಪಿಲ ಮುನಿಗಳು ಒಬ್ಬರಾಗಿದ್ದರು.

ಆರನೇಯ ಅವತಾರ ದತ್ತಾತ್ರೇಯ ಅವತಾರ. ಧರ್ಮಗ್ರಂಥದ ಅನುಸಾರ ದತ್ತಾತ್ರೇಯರು ಭಗವಾನ್ ವಿಷ್ಣುವಿನ ಅವತಾರವಾಗಿದ್ದಾರೆ. ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಗೆ ತಮ್ಮ ಪಾತಿವೃತ್ಯದ ಬಗ್ಗೆ ಗರ್ವ ಉಂಟಾಯಿತು. ಆಗ ನಾರದರು, ಅತ್ರಿ ಮುನಿಯ ಪತ್ನಿಯಾದ ಅನುಸೂಯಾಳ ಮುಂದೆ, ನಿಮ್ಮ ಪಾತಿವೃತ್ಯ ಏನೂ ಅಲ್ಲವೆಂದು ಹಂಗಿಸುತ್ತಾರೆ. ಆಗ ಮೂರು ದೇವಿಯರು ಸೇರಿ, ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಅನುಸೂಯಾಳ ಬಳಿ ಕಳುಹಿಸುತ್ತಾರೆ. ತ್ರಿಮೂರ್ತಿಗಳು ತಮಗೆ ಅನುಸೂಯಾ ದೇವಿ ಬೆತ್ತಲೆಯಾಗಿ ಊಟ  ನೀಡಬೇಕೆಂದು ಹೇಳುತ್ತಾರೆ. ಆಗ ಅನುಸೂಯಾ ತನ್ನ ಶಕ್ತಿಯಿಂದ ಮೂವರನ್ನೂ ಪುಟ್ಟ ಮಕ್ಕಳನ್ನಾಗಿ ಮಾಡಿ, ಅವರಿಗೆ ಬೆತ್ತಲೆಯಾಗಿ ಹಾಲುಣಿಸುತ್ತಾಳೆ. ಆ ಪುಟ್ಟ ಮಕ್ಕಳೇ ದತ್ತಾತ್ರೇಯರು. ಅವಳ ಶಕ್ತಿಯನ್ನು ಕಂಡ ಲಕ್ಷ್ಮೀ, ಸರಸ್ವತಿ, ಪಾರ್ವತಿ, ಕ್ಷಮೆ ಕೇಳುತ್ತಾರೆ.

ಏಳನೇಯ ಅವತಾರ ಯಜ್ಞ. ಸ್ವಯಂ ಭೂ ಮತ್ತು ಶತ್ರುಭಾರ ಮಗಳಾಗಿ ಆಕುತಿ ಜನ್ಮ ಪಡೆದಳು. ಆಕೆ ರಾಜ ಪ್ರಜಾಪತಿಯ ಪತ್ನಿಯಾದಳು. ಅವರಿಗೆ ಹುಟ್ಟಿದ ಪುತ್ರನೇ ಯಜ್ಞ. ಆತ ಮುಂದೆ ದಕ್ಷಿಣಾ ಎಂಬುವವಳನ್ನು ವಿವಾಹವಾಗಿ, ಅವರಿಗೆ 12 ತೇಜಸ್ವಿ ಪುತ್ರರು ಜನಿಸಿದರು.

ಎಂಟನೇಯ ಅವತಾರ ರಿಷಭ ದೇವ. ಮಹರಾಜ ನಾಭಿ ಎಂಬ ರಾಜ, ತನ್ನ ಮಡದಿಯ ಜೊತೆಗೂಡಿ ಯಜ್ಞ ಮಾಡಿ ಪಡೆದ ಮಗುವೇ ರಿಷಭ ದೇವ. ಈತ ವಿಷ್ಣುವಿನ ಅಂಶ. ಮತ್ತು ವಿಷ್ಣುವಿನ ಎಂಟನೇಯ ಅವತಾರ.

ಇವಿಷ್ಟು ಶ್ರೀ ವಿಷ್ಣುವಿನ 24 ಅವತಾರಗಳಲ್ಲಿ 8 ಅವತಾರಗಳ ಬಗೆಗಿನ ಮಾಹಿತಿ. ಮುಂದಿನ ಭಾಗದಲ್ಲಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ತಿಳಿಯೋಣ.

- Advertisement -

Latest Posts

Don't Miss