Thursday, June 19, 2025

Latest Posts

ಡಾರ್ಲಿಂಗ್ ಪ್ರಭಾಸ್ ಆಸ್ತಿ ಎಷ್ಟು..? ಅವರ ಬಳಿ ಎಷ್ಟು ಕಾರ್ ಇದೆ ಗೊತ್ತಾ..?

- Advertisement -

ಪ್ರಭಾಸ್.. ಈ ಹೆಸರನ್ನ ಕೇಳದ ಸಿನಿಪ್ರೇಮಿಗಳಿಲ್ಲ. 4 ವರ್ಷಗಳ ಹಿಂದೆ ಬರೀ ತೆಲಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಫೇಮಸ್ ಇದ್ದ ಪ್ರಭಾಸ್, ಬಾಹುಬಲಿ ತೆರೆಕಂಡ ಬಳಿಕ ನ್ಯಾಷನಲ್ ಸ್ಟಾರ್ ಆದ್ರು. ನಂತರ ಸಾಹೋ ಚಿತ್ರದ ಮೂಲಕ ಬಾಲಿವುಡ್‌ಗೂ ಲಗ್ಗೆ ಇಟ್ಟರು. ಇದೀಗ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಚಿತ್ರವಾದ ಸಲಾರ್ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

2002ರಲ್ಲಿ ಈಶ್ವರಿ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಪ್ರಭಾಸ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ರು. ಡಾರ್ಲಿಂಗ್ ಚಿತ್ರ ರಿಲೀಸ್ ಆಗುವ ತನಕ ಪ್ರಭಾಸ್ ಸಿನಿಜರ್ನಿ ಸಪ್ಪೆಯಾಗಿಯೇ ಇತ್ತು. ನಂತರ ಪ್ರಭಾಸ್ ತೆಲುಗು ಜನರ ಡಾರ್ಲಿಂಗ್ ಆಗಿಬಿಟ್ರು. ಬಾಹುಬಲಿ ರಿಲೀಸ್ ಬಳಿಕ ಪ್ರಭಾಸ್ ನ್ಯಾಶನಲ್ ಸ್ಟಾರ್‌ ಆದ್ರು. ಕೋಟಿ ಕೋಟಿ ಸಂಭಾವನೆ ಗಿಟ್ಟಿಸಿಕೊಂಡ್ರು. ಹಾಗಾದ್ರೆ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡಿಯೋ ಪ್ರಭಾಸ್ ಆಸ್ತಿ ಎಷ್ಟು ಅಂತಾ ಗೊತ್ತಾ..?

ಪ್ರಭಾಸ್‌ಗೆ ಸಿನಿ ಇಂಡಸ್ಟ್ರಿಯಲ್ಲಿ ಬೇಡಿಕೆ ಹೆಚ್ಚಾದ ಬಳಿಕ ಸಾಹೋ ಚಿತ್ರಕ್ಕೆ ಅವರು 70 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇನ್ನು 2005ರಲ್ಲಿ ರಿಲೀಸ್ ಆಗಿದ್ದ ಛತ್ರಪತಿ ಸಿನಿಮಾ 222 ಮಿಲಿಯನ್, 2010ರಲ್ಲಿ ರಿಲೀಸ್ ಆದ ಡಾರ್ಲಿಂಗ್ ಸಿನಿಮಾ 220 ಮಿಲಿಯನ್, 2015ರಲ್ಲಿ ರಿಲೀಸ್ ಆದ ಬಾಹುಬಲಿ ಪಾರ್ಟ್ ಒನ್ 650 ಕೋಟಿ, 2017ರಲ್ಲಿ ರಿಲೀಸ್ ಆದ ಬಾಹುಬಲಿ ಪಾರ್ಟ್‌ 2 ಸಿನಿಮಾ 1,810 ಕೋಟಿ, ಮತ್ತು 2019ರಲ್ಲಿ ರಿಲೀಸ್ ಆದ ಸಾಹೋ 433 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಬಾಹುಬಲಿ ರಿಲೀಸ್ ಬಳಿಕ ಕೋಟಿ ಕೋಟಿ ಸಂಭಾವನೆ ಗಳಿಸಿದ ಪ್ರಭಾಸ್, ಹೈದರಾಬಾದ್‌ನಲ್ಲಿ ಮನೆ ಕಟ್ಟಿಸಿದ್ರು. ಈ ಮನೆ ಬೆಲೆ 60 ಕೋಟಿ. ಇದರಲ್ಲಿರುವ ಜಿಮ್‌ ಇಕ್ಯೂಪ್‌ಮೆಂಟ್‌ಗಳ ಬೆಲೆಯೇ 1ಕೋಟಿಗೂ ಹೆಚ್ಚಿದೆ. ಇನ್ನು ಸೂಪರ್ ಕಾರ್ ಮತ್ತು ಕ್ಲಾಸಿಕ್ ವೆಹಿಕಲ್ಸ್ ಕ್ರೇಜ್ ಹೊಂದಿರುವ ಡಾರ್ಲಿಂಗ್ ಪ್ರಭಾಸ್ ಬಳಿ ವೆರೈಟಿ ವೆರೈಟಿ ಕಾರ್‌ಗಳಿದೆ.

68 ಲಕ್ಷದ ಬಿಎಂಡಬ್ಲ್ಯೂ ಎಕ್ಸ್‌3, 2ವರೆ ಕೋಟಿಯ ಜಾಗ್ವಾರ್ ಎಕ್ಸ್‌ಜೆಆರ್, 8ಕೋಟಿಯ ರಾಲ್ಸ್ ರಾಯ್ಸ್, 3ಲಕ್ಷ ಬೆಲೆ ಬಾಳುವ ರಾಯಲ್ ಎನ್‌ಫೀಲ್ಡ್ ಬುಲೆಟ್ ಫೈವ್‌ಹಂಡ್ರೆಡ್, 15 ಲಕ್ಷದ ಸುಜುಕಿ ಹಯಾಬುಸಾ, 10 ಲಕ್ಷದ ಇಂಟ್ರಡರ್, 30 ಲಕ್ಷದ ಕಾವಸಾಕಿ ನಿಂಜಾ ಹೆಚ್‌ಟೂಆರ್ ವಾಹನಗಳನ್ನ ಪ್ರಭಾಸ್ ಹೊಂದಿದ್ದಾರೆ. ಇನ್ನು ಅವರ ಒಟ್ಟು ಆಸ್ತಿ ಮೊತ್ತ 128 ಕೋಟಿ ರೂಪಾಯಿ.

- Advertisement -

Latest Posts

Don't Miss