ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ವಿಷ್ಣುವಿನ ಪೂಜೆ ಮಾಡಲಾಗತ್ತೆ ಅನ್ನೋ ಬಗ್ಗೆ ಮತ್ತು ವಿಷ್ಣುವಿಗೆ ಯಾವ ರೀತಿಯ ಪ್ರಸಾದ ನೈವೇದ್ಯ ಮಾಡಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಧನುರ್ಮಾಸವನ್ನು ಶೂನ್ಯ ಮಾಸವೆಂದು ಯಾಕೆ ಕರೀತಾರೆ..? ಈ ತಿಂಗಳಲ್ಲಿ ಯಾಕೆ ಶುಭ ಕಾರ್ಯಗಳನ್ನು ಮಾಡುವುದಿಲ್ಲವೆನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಧನುರ್ಮಾಸದಲ್ಲಿ ಯಾವುದೇ ಹೊಸ ಕೆಲಸವನ್ನು ಶುರು ಮಾಡಿದರೂ ಅದು ಫಲ ನೀಡುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾಗಿ ಧನುರ್ಮಾಸವನ್ನ ಶೂನ್ಯ ಮಾಸ ಅಂತಾ ಕರೆಯಲಾಗುತ್ತದೆ. ಧನುರ್ಮಾಸದಲ್ಲಿ ವಿಷ್ಣುವಿನ ಪೂಜೆಗೆ ಹೆಚ್ಚಿನ ಮನ್ನಣೆ ಇದೆ. ಈ ಮಾಸದಲ್ಲಿ ಮದುವೆ, ಮುಂಜಿ, ಗೃಹ ಪ್ರವೇಶ, ಮನೆ ಕಟ್ಟುವ ಕೆಲಸ, ಹೊಸ ಕೆಲಸಕ್ಕೆ ಸೇರುವುದೆಲ್ಲ ಮಾಡಲಾಗುವುದಿಲ್ಲ.
ಯಾಕಂದ್ರೆ ಈ ಮಾಸದಲ್ಲಿ ಇಂಥದ್ದೆಲ್ಲ ಶುಭ ಕಾರ್ಯಗಳನ್ನು ಮಾಡಿದರೆ ಉತ್ತಮವಲ್ಲ ಅನ್ನೋದು ಹಿರಿಯರ ಮಾತು. ಕೆಲವರು ಈ ಮಾಸದಲ್ಲಿ ಯಾವ ಹೊಸ ವಸ್ತುವನ್ನೂ ಖರೀದಿ ಮಾಡುವುದಿಲ್ಲ. ಕಾರ್, ಬೈಕ್, ಫ್ರಿಜ್‌ನಂತಹ ಹೆಚ್ಚಿನ ಬೆಲೆಯ ವಸ್ತುವನ್ನು ಕೂಡ ಖರೀದಿಸುವುದಿಲ್ಲ. ಇನ್ನು ಯಾಕೆ ಶೂನ್ಯ ಮಾಸದಲ್ಲಿ ಶುಭಕಾರ್ಯ ಮಾಡುವುದಿಲ್ಲ ಅಂತಾ ನೋಡೋದಾದ್ರೆ, ಇದು ವಿಷ್ಣುವಿಗಾಗಿ ಮೀಸಲಿರುವ ಮಾಸವಾಗಿದ್ದು, ಜನ ಸಂಪೂರ್ಣವಾಗಿ ಶ್ರೀವಿಷ್ಣುವನ್ನು ಜಪಿಸಲಿ ಎಂಬುದು ಹಿರಿಯರ ಮಾತು.