Wednesday, August 20, 2025

Latest Posts

ಕವಚಿ ಮಲುಗುವುದರಿಂದ ಆರೋಗ್ಯಕ್ಕೆ ಹಲವು ನಷ್ಟಗಳಾಗುವ ಸಾಧ್ಯತೆ ಇದೆ..

- Advertisement -

ಕೆಲವರು, ಕೆಲವು ಭಂಗಿಯಲ್ಲಿ ಮಲಗುತ್ತಾರೆ. ಕೆಲವರಿಗೆ ಬಲಬದಿ ತಿರುಗಿಯೇ ಮಲಗಬೇಕು. ಕೆಲವರಿಗೆ ಎಡಗಡೆ ಮುಖ ಮಾಡಿ ಮಲಗಿಯೇ ಅಭ್ಯಾಸ. ಇನ್ನು ಕೆಲವರು ನೇರವಾಗಿ ಮಲಗಿದವರು ಮಗ್ಗಲು ಬದಲಿಸುವುದೇ ಇಲ್ಲ. ಮತ್ತೆ ಕೆಲವರಿಗೆ ಕವಚಿ ಅಂದ್ರೆ ಹೊಟ್ಟೆಯ ಬದಿ ಮಲಗದಿದ್ದರೆ ನಿದ್ದೆಯೇ ಬರುವುದಿಲ್ಲ. ಆದ್ರೆ ಕವಚಿ ಮಲಗುವುದು ತುಂಬಾ ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಅನ್ನುತ್ತೆ ವಿಜ್ಞಾನ. ಹಾಗಾದ್ರೆ ಕವಚಿ ಮಲಗಿದ್ರೆ ಆರೋಗ್ಯಕ್ಕಾಗುವ ನಷ್ಟವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕವಚಿ ಮಲಗುವುದರಿಂದ ಆಗುವ ಮೊದಲ ನಷ್ಟವೆಂದರೆ ಕುತ್ತಿಗೆ ನೋವು. ಹೌದು, ಹೀಗೆ ಮಲಗುವುದರಿಂದ ನಿಮ್ಮ ತಲೆ ಸರಿಯಾಗಿ ಇಡಲಾಗುವುದಿಲ್ಲ. ಎಡಕ್ಕೆ ಅಥವಾ ಬಲಕ್ಕೆ ತಲೆ ಮಾಡಿ ಮಲಗಬೇಕಾಗುತ್ತದೆ. ಹೀಗೆ ತುಂಬಾ ಹೊತ್ತು ಮಲಗಿದಾಗ, ಕುತ್ತಿಗೆ ನೋವು ಶುರುವಾಗುತ್ತದೆ. ಇನ್ನು ಈ ಕುತ್ತಿಗೆ ನೋವು ಕೆಲ ದಿನಗಳಲ್ಲೇ ಕಡಿಮೆಯಾಗುವಂಥದ್ದಲ್ಲ. ಬದಲಾಗಿ ಇದು ಸುಮಾರು ವರ್ಷಗಳವರೆಗೂ ಮುಂದುವರೆಯಬಹುದು. ಹಾಗಾಗಿ ಸರಿಯಾದ ವಿಧಾನದಲ್ಲಿ ನಿದ್ದೆ ಮಾಡುವುದು ಒಳಿತು.

ಗರ್ಭಿಣಿಯರು ಕವಚಿ ಮಲಗಲೇ ಬಾರದು. ಇದರಿಂದ ಗರ್ಭಿಣಿಯ ಉಸಿರಾಟಕ್ಕೆ ತೊಂದರೆಯಾಗುವುದಲ್ಲದೇ, ಮಗುವಿನ ಆರೋಗ್ಯಕ್ಕೂ ಹಾನಿಯಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಗರ್ಭಿಣಿಯರು ಹೊಟ್ಟೆ ಭಾಗವಿಟ್ಟು ಮಲಗುವ ಅಭ್ಯಾಸವನ್ನ ಬಿಡಬೇಕು. ಗರ್ಭಿಣಿಯರು ಎಡಬದಿಗೆ ಮುಖ ಮಾಡಿ ಮಲಗಬೇಕು.

ಮೂರನೇಯದಾಗಿ ನೀವು ಕವಚಿ ಮಲಗುವುದರಿಂದ, ನಿಮ್ಮ ದೇಹದ ಎಲ್ಲಾ ಭಾರವೂ ಹೊಟ್ಟೆಯ ಮೇಲೆ ಬೀಳುತ್ತದೆ. ಮತ್ತು ನಿಮಗೆ ಬೆನ್ನು ಮೂಳೆ ನೋವು ಶುರುವಾಗುತ್ತದೆ. ಇಷ್ಟೇ ಅಲ್ಲದೇ, ವೈಜ್ಞಾನಿಕ ಅನ್ವೆಷಣೆಯ ಪ್ರಕಾರ, ಹೊಟ್ಟೆ ಭಾಗದ ಮೇಲೆ ಮಲಗುವವರಿಗೆ ಎಂದಿಗೂ ಸುಸ್ತು ಕಡಿಮೆಯಾಗುವುದಿಲ್ಲವೆನ್ನಲಾಗಿದೆ. ಹಾಗಾಗಿ ಕವಚಿ ಮಲಗಬಾರದು.

- Advertisement -

Latest Posts

Don't Miss