ದೇವಾಲಯಗಳ ಆಗರವೆನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ ದೇವಸ್ಥಾನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಿಗೂ ಗೋಪುರ ಮಂದಿರವಿರುತ್ತದೆ. ಆದ್ರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಆಕಾಶವೇ ಗೋಪುರ, ಪ್ರಪಂಚವೇ ಮಂದಿರ. ಯಾಕಂದ್ರೆ ಈ ದೇವಸ್ಥಾನಕ್ಕೆ ಯಾವುದೇ, ಮಂದಿರ, ಗೋಪುರವಿಲ್ಲ. ಇಲ್ಲಿ ಗಣಪತಿಯ ಕಲ್ಲಿನ ಮೂರ್ತಿ ಇದೆ. ಇಲ್ಲಿ ಪೂಜೆ ಮಾಡಲು ಅರ್ಚಕರನ್ನ ನೇಮಿಸಲಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ಬಂದು ಗಣಪತಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಹೋಗುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಇನ್ನು ಈ ಹೆಸರು ತುಂಬಾ ಡಿಫ್ರೆಂಟ್ ಆಗಿದೆ. ಸೌತಡ್ಕ ಎಂಬ ಹೆಸರಿನ ಅರ್ಥವೇನೆಂದರೆ, ಸೌತೆ+ ಅಡ್ಕ= ಅಂದ್ರೆ ಸೌತೆ ಬೆಳೆ ಬೆಳೆದ ಬಯಲು ಎಂದರ್ಥ. ಈ ಹೆಸರು ಬರಲು ಕಾರಣ, ಗೋಪಾಲಕರು. ಹೌದು ಒಮ್ಮೆ ಇದೇ ಸ್ಥಳದಲ್ಲಿ ಗೋಪಾಲಕರು ಬರುವಾಗ ಅವರಿಗೆ ಈ ಗಣಪತಿ ಮೂರ್ತಿ ಸಿಕ್ಕಿತು. ಅವರು ಅದನ್ನ ತಂದು, ಈ ಸ್ಥಳದಲ್ಲಿರಿಸಿ, ಪ್ರತಿ ದಿನ ತಾವು ಬೆಳೆದ ಸೌತೆ ಬೆಳೆ ನೈವೇದ್ಯಕ್ಕಿಟ್ಟು, ಪೂಜೆ, ಭಜನೆ ಮಾಡಿ ಗಣಪತಿಯನ್ನ ಪ್ರಾರ್ಥಿಸಿದರು.
ಇನ್ನು ಇಲ್ಲಿ ಹಲವು ಶ್ರೀಮಂತರು ಸೇರಿ ಗಣಪತಿಗೊಂಡು ದೇವಸ್ಥಾನ ಕಟ್ಟುವ ನಿರ್ಧಾರ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆ ಕೇಳಿದಾಗ, ಗಣಪತಿಗೆ ಗುಡಿ ಕಟ್ಟಿಸಿಕೊಳ್ಳುವುದು ಇಷ್ಟವಿಲ್ಲವೆಂಬ ಸಂಗತಿ ಗೊತ್ತಾಯಿತು. ಅಂದಿನಿಂದ ಯಾರೂ ಗಣಪತಿಗೆ ದೇವಸ್ಥಾನ ಕಟ್ಟುವ ಕೆಲಸಕ್ಕೆ ಕೈ ಹಾಕಲಿಲ್ಲ.
ಇನ್ನು ಇದು ಚಿಕ್ಕ ದೇವಸ್ಥಾನವೆಂದು ಯಾರೂ ಇದನ್ನ ಕಡೆಗಣಿಸುವಂತಿಲ್ಲ. ಹಲವರು ಇಲ್ಲಿ ಬಂದು ಗಣಪತಿಗೆ ಹಲವು ಹರಕೆಗಳನ್ನ ಸಲ್ಲಿಸಿ, ತಮ್ಮ ಕಷ್ಟಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಅಲ್ಲದೇ, ಪ್ರತಿದಿನ ಅವಲಕ್ಕಿ ಪಂಚಕಜ್ಜಾಯವನ್ನ ಗಣಪತಿಗೆ ಅರ್ಪಿಸಲಾಗುತ್ತದೆ. ಇನ್ನು ಇಲ್ಲಿ ಯಾವ ಯಾವ ಹರಕೆ, ಪೂಜೆ ನಡೆಯುತ್ತದೆ ಎಂದು ನೋಡುವುದಾದರೆ, ಮೂಡಪ್ಪ ಸೇವೆ, ಮಹಾರಂಗ ಪೂಜೆ, ರಂಗಪೂಜೆ, ಗಣ ಹೋಮ, ಸತ್ಯನಾರಾಯಣ ಪೂಜೆ, ತುಲಾಭಾರ, ಮಹಾಪೂಜೆ, ಅಷ್ಟೋತ್ತರ ಅರ್ಚನೆ, ಶಾಶ್ವತ ಪೂಜೆ, ಕಲಶ ಸ್ನಾನ, ಅಪ್ಪ ಪ್ರಸಾದ, ಅಪ್ಪ ಸೇವೆ, ವಾಹನ ಪೂಜೆ, ವಿವಾಹ, ಉಪನಯನಗಳು ಕೂಡ ನಡೆಯುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ