ನಮ್ಮಲ್ಲಿ ಹಲವರು ಹಲವು ಥರಹದ ಉದ್ಯಮಗಳನ್ನು ಮಾಡಬೇಕು. ಅದರಲ್ಲಿ ಯಶಸ್ಸು ಗಳಿಸಬೇಕು ಅಂತಾ ಯೋಚನೆ ಮಾಡ್ತಾರೆ. ಆದ್ರೆ ಯಾವ ಉದ್ಯಮ ಮಾಡಿದರೆ, ಎಷ್ಟು ಲಾಭ ಮಾಡಬಹುದು..? ಯಾವ ಉದ್ಯಮದಲ್ಲಿ ನಷ್ಟ ಹೊಂದುವ ಭಯವಿರುವುದಿಲ್ಲ, ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಗೊಂದಲದಲ್ಲಿರುತ್ತಾರೆ. ಹಾಗಾಗಿ ಇಂದು ನಾವು ಎಂಥ ಕಾಲಬಂದರೂ ನಷ್ಟ ಹೊಂದದ, ಸ್ಟಾಪ್ ಆಗದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೆಡಿಕಲ್ ಶಾಪ್. ಈ ಭೂಮಿ ಮೇಲೆ ಎಲ್ಲಿ ತನಕ ಮನುಷ್ಯನ ವಾಸವಿರುತ್ತದೆಯೋ, ಅಲ್ಲಿ ತನಕ ಅವನಿಗೆ ರೋಗಗಳು ಇದ್ದೇ ಇರುತ್ತದೆ. ಅಂಥ ರೋಗಗಳಿಗೆ ಔಷಧಿ ಬೇಕಾಗುವ ಕಾರಣಕ್ಕೆ, ಮೆಡಿಕಲ್ ಕೂಡ ಇರುತ್ತದೆ. ಹಾಗಾಗಿ ನೀವು ಮೆಡಿಕಲ್ ಶಾಪ್ ಹಾಕಿದ್ರೆ, ನಿಮಗೆ ಲಾಭ ಕಟ್ಟಿಟ್ಟ ಬುತ್ತಿ. ಆದ್ರೆ ಇದಕ್ಕೆ ಫಾರ್ಮಸಿ ಸರ್ಟಿಫಿಕೇಟ್ ಬೇಕಾಗುತ್ತದೆ.
ಹಣ್ಣು- ತರಕಾರಿ ಅಂಗಡಿ. ಮನುಷ್ಯ ಬದುಕಲು ಬೇಕಾಗಿರುವುದೇ ಆಹಾರ. ಆಹಾರ ತಯಾರಿಸೋಕ್ಕೆ ತರಕಾರಿ ಬೇಕೆ ಬೇಕು. ಹಾಗಾಗಿ ನೀವು ಹಣ್ಣು, ತರಕಾರಿ ಮಾರಾಟ ಮಾಡಿದ್ರೆ, ಲಾಭ ಇದ್ದೇ ಇರುತ್ತದೆ. ಆದ್ರೆ ಅದಕ್ಕೆ ಜಾಣತನ ಬೇಕು. ಬಂದ ಗ್ರಾಹಕರೊಂದಿಗೆ ಒಳ್ಳೆ ರೀತಿಯಲ್ಲಿ ಮಾತನಾಡಿ, ಗ್ರಾಹಕರನ್ನು ಸೆಳೆಯುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ನೀವು ಮಾರಾಟ ಮಾಡುವ ಹಣ್ಣು, ತರಕಾರಿ ಫ್ರೆಶ್ ಆಗಿದ್ದಷ್ಟು, ಹೆಚ್ಚು ಮಾರಾಟವಾಗುತ್ತದೆ.
ಸಲೂನ್ ಶಾಪ್ ಮತ್ತು ಬ್ಯೂಟಿ ಪಾರ್ಲರ್. ಹೆಣ್ಣು ಮಕ್ಕಳಿಗೆ ಬ್ಯೂಟಿ ಪಾರ್ಲರ್ ಎಷ್ಟು ಮುಖ್ಯವೋ, ಗಂಡು ಮಕ್ಕಳಿಗೆ ಸಲೂನ್ ಶಾಪ್ ಕೂಡ ಅಷ್ಟೇ ಮುಖ್ಯ. ಆದ್ರೆ ಈ ಸಲೂನ್ ಶಾಪ್ ಮತ್ತು ಬ್ಯೂಟ್ ಪಾರ್ಲರ್ ಮುಖ್ಯವಾದದ್ದು ಹೇಗಾಗುತ್ತದೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಯಾಕಂದ್ರೆ ಮೊದಲಿನ ಕಾಲದಲ್ಲಿ ಬ್ಯೂಟಿ ಪಾರ್ಲರ್ ಇಲ್ಲದೇ, ಹೆಣ್ಣು ಮಕ್ಕಳು ಜೀವನ ಮಾಡಿದ್ದರು. ಆದ್ರೆ ಇಂದಿನ ಕಾಲದಲ್ಲಿ ಬ್ಯೂಟಿ ಪಾರ್ಲರ್ ಮೊರೆ ಹೋಗದ ಹೆಣ್ಣು ಮಕ್ಕಳಿರುವುದು ತುಂಬಾ ಕಡಿಮೆ. ಹಾಗಾಗಿ ಬ್ಯೂಟಿ ಪಾರ್ಲರ್ ಕೂಡ ಎಂದಿಗೂ ನಷ್ಟ ಹೊಂದದ ಉದ್ಯಮವಾಗಿದೆ.
ಹಾಲಿನ ಅಂಗಡಿ. ಜನ ಜೀವನದಲ್ಲಿ ಪ್ರತಿದಿನ ಬಳಸುವ ಆಹಾರದಲ್ಲಿ ಹಾಲು ಕೂಡ ಒಂದು. ಹಾಲು, ಮೊಸರು, ತುಪ್ಪ ಹೀಗೆ ಹಾಲಿನ ಉತ್ಪನ್ನ ಸುಲಭವಾಗಿ ಮಾರಾಟವಾಗುತ್ತದೆ. ಹಾಗಾಗಿ ಜನಜಂಗುಳಿ ಇರುವ ಪ್ರದೇಶದಲ್ಲಿ ಹಾಲಿನ ಬೂತ್ ಹಾಕಿದ್ರೆ ಒಳ್ಳೆಯದು.
ದಿನಸಿ ಅಂಗಡಿ. ಇದು ಜನ ಜೀವನದಲ್ಲಿ ಪ್ರತಿದಿನ ಬಳಕೆಯಲ್ಲಿರುವ, ಅವಶ್ಯಕ ವಸ್ತು. ಹಾಗಾಗಿ ದಿನಸಿ ಅಂಗಡಿ ಇಟ್ಟರೆ, ಯಾವುದೇ ನಷ್ಟವಿಲ್ಲ. ಆದ್ರೆ ನೀವು ಉದ್ಯಮದ ಬಗ್ಗೆ ಜ್ಞಾನ ಹೊಂದಿರಬೇಕು. ಉತ್ತಮ ಕ್ವಾಲಿಟಿಯ ದಿನಸಿ ಮಾರಾಟ ಮಾಡುವುದು ಕೂಡ ತುಂಬಾ ಮುಖ್ಯ. ಒಮ್ಮೆ ಗ್ರಾಹಕರು, ನಿಮ್ಮ ಅಂಗಡಿಯಲ್ಲಿ ಸಿಗುವ ದಿನಸಿ ಕ್ವಾಲಿಟಿಯನ್ನ, ನೀವು ಅವರೊಂದಿಗೆ ವ್ಯವಹರಿಸುವ ರೀತಿಯನ್ನ ಇಷ್ಟಪಟ್ಟರೆ, ಗ್ರಾಹಕರ ಸಂಖ್ಯೆಯ ಜೊತೆಗೆ, ಲಾಭವೂ ದುಪ್ಪಟ್ಟಾಗುತ್ತದೆ.