Thursday, August 21, 2025

Latest Posts

ರಾಕಿಂಗ್ ಕಪಲ್ ಯಶ್-ರಾಧಿಕಾ ಆಸ್ತಿ ಎಷ್ಟು ಗೊತ್ತಾ..?

- Advertisement -

ಸ್ಯಾಂಡಲ್‌ವುಡ್‌ನ ಕ್ಯೂಟ್ ಆ್ಯಂಡ್ ಸ್ಟಾರ್ ಕಪಲ್ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್. ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡುತ್ತ ಪರಿಚಯವಾದ ರಾಧಿಕಾ ಮತ್ತು ಯಶ್, ಪ್ರೀತಿಸಿ ಮದುವೆಯಾದರು. ಸ್ಯಾಂಡಲ್‌ವುಡ್‌ನಲ್ಲಿ ರಾಧಿಕಾ ಸ್ಟಾರ್ ನಟಿಯೆನ್ನಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಗಾದ್ರೆ ಈ ಸ್ಟಾರ್ ದಂಪತಿಯ ಒಟ್ಟು ಆಸ್ತಿ ಎಷ್ಟು ಅಂತಾ ನಿಮಗೆ ಗೊತ್ತಾ..? ಆ ಬಗ್ಗೆ ನಾವು ಹೇಳ್ತೀವಿ ಕೇಳಿ..

ಮಕ್ಕಳಾದ ಬಳಿಕ ರಾಧಿಕಾ ಸಿನಿದುನಿಯಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆದ್ರೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿಕ್ವೇನ್ಸ್‌ ಶೂಟಿಂಗ್‌ನಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡ ಕೆಜಿಎಫ್ ದೇಶದೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿತ್ತು, ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿತ್ತು. ಕೋಟಿ ಕೋಟಿ ಗಳಿಕೆಯೂ ಮಾಡಿತ್ತು. ಈ ಚಿತ್ರಕ್ಕಾಗಿ ಯಶ್ ಉತ್ತಮ ಸಂಭಾವನೆಯನ್ನೇ ಪಡೆದಿದ್ದರು. ಕೆಜಿಎಫ್ ಸೀಕ್ವೆನ್ಸ್‌ಗೂ ಕೂಡ ಯಶ್ ಕೋಟಿ ಕೋಟಿ ಸಂಭಾವನೆಯನ್ನೇ ಪಡೆದಿದ್ದಾರೆ. ಅಲ್ಲದೇ ವಿಲನ್ ಪರ್ಫ್ಯೂಮ್ ಆ್ಯಡ್‌ನಲ್ಲಿ ಯಶ್ ಮಿಂಚಿದ್ದು, ಇದಕ್ಕೂ ಉತ್ತಮ ಸಂಭಾವನೆ ಸಿಕ್ಕಿದೆ.

ಹೀಗೆ ಸಿನಿಮಾ, ಆ್ಯಡ್ ಶೂಟಿಂಗ್ ಮೂಲಕ ಯಶ್ ಉತ್ತಮ ಗಳಿಕೆಯನ್ನೇ ಮಾಡಿದ್ದಾರೆ. ಇನ್ನು ರಾಧಿಕಾ ಮತ್ತು ಯಶ್ ಒಟ್ಟು ಆಸ್ತಿ ಎಷ್ಟು ಅಂತಾ ನೋಡುವುದಾದರೆ, 51. 9 ಕೋಟಿಯಾಗಿದೆ. ಐರಾ ಹುಟ್ಟಿದ ನಂತರ ಯಶ್ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತ ಮನೆಗೆ ಕಾಲಿರಿಸಿದ್ದಾರೆ. ಯಶ್ ಬಳಿ 90 ಲಕ್ಷ ಮೌಲ್ಯದ ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್ 350D, 80 ಲಕ್ಷ ರೂಪಾಯಿಯ ಮರ್ಸಿಡೀಸ್ ಬೆಂಜ್ ಜಿಎಲ್‌ಇ 400 ಇದೆ.

- Advertisement -

Latest Posts

Don't Miss