Saturday, July 27, 2024

Latest Posts

Rudraksha ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..!

- Advertisement -

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರುದ್ರಾಕ್ಷಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ರುದ್ರಾಕ್ಷಿ ಮರದಲ್ಲಿ ಬೆಳೆಯುವುದಾದರೂ ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಸೃಷ್ಟಿಯಾದದ್ದು ಎಂದು ಹೇಳಲಾಗುತ್ತದೆ, ಹಾಗಾಗಿ ರುದ್ರಾಕ್ಷಿ ಮತ್ತು ಪರಶಿವನಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ, ಇನ್ನು ಪ್ರತಿಯೊಬ್ಬ ಶಿವಭಕ್ತರು ಶಿವನನ್ನು ಆರಾಧಿಸುವಾಗ ರುದ್ರಾಕ್ಷಿಯನ್ನು ಧರಿಸುತ್ತಾರೆ ರುದ್ರಾಕ್ಷಿಯನ್ನು ಶಿವನಿಗೆ ಅರ್ಪಿಸುತ್ತಾರೆ ಇದರಿಂದ ಶಿವನ ಅನುಗ್ರಹವನ್ನು ಪಡೆಯಬಹುದು ಎಂಬ ನಂಬಿಕೆ ನಮ್ಮ ಹಿಂದಿನ ಕಾಲದಿಂದಲೂ ಕೂಡ ಇದೆ. ರುದ್ರಾಕ್ಷಿಯಲ್ಲಿ ಹಲವಾರು ವಿಧಗಳಿವೆ ಒಂದೊಂದು ರುದ್ರಾಕ್ಷಿ ಅದರದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಅದನ್ನು ಧರಿಸುವುದರಿಂದ ಹಲವಾರು ಸಮಸ್ಯೆಗಳಿಂದ ಹೊರ ಬರಬಹುದು, ಅದೇ ರೀತಿಯಾಗಿ ಈ ಒಂದು ರುದ್ರಾಕ್ಷಿಯನ್ನು ಧರಿಸುವುದರಿಂದ ದಾಂಪತ್ಯದಲ್ಲಿಇರುವ ಸಮಸ್ಯೆಗಳು ನಿವಾರಣೆಯಾಗುತ್ತವೆ ಸಂತಾನದ ಸಮಸ್ಯೆಗಳು ದೂರವಾಗುತ್ತದೆ ಸುಖಮಯ ದಾಂಪತ್ಯ ಮತ್ತು ಸಂತಾನ ಪ್ರಾಪ್ತಿಗಾಗಿ ಒಂದು ರುದ್ರಾಕ್ಷಿ ನೆರವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಒಂದು ರುದ್ರಾಕ್ಷಿ ಯಾವುದು ಯಾವ ರೀತಿಯಾಗಿ ಅದನ್ನು ಧಾರಣೆ ಮಾಡಬೇಕು ಎಂದು ನೋಡೋಣ. ಗಂಡ-ಹೆಂಡತಿಯ ನಡುವೆ ಹೊಂದಾಣಿಕೆಯಿಲ್ಲ ಬಾಂಧವ್ಯ ಇಲ್ಲ ಯಾವಾಗಲೂ ಜಗಳವಾಡುತ್ತಾರೆ, ಅವರ ನಡುವೆ ಮನಸ್ತಾಪಗಳು ಇದೆ, ಇಷ್ಟೇ ಪ್ರಯತ್ನಪಟ್ಟರು ಇಬ್ಬರು ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿಲ್ಲ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮದುವೆ ಆಗಿ ಹೋಗಿದೆ ಬಿಟ್ಟು ಕೊಡಲು ಇಷ್ಟವಿಲ್ಲ ಜೀವನ ಇನ್ನು ಮುಂದೆಯಾದರೂ ಚೆನ್ನಾಗಿರಲಿ ಎಂದು ಬಯಸುವವರು, ಹಾಗೂ ಸುಖ ಸಂತಾನ ಪ್ರಾಪ್ತಿಗಾಗಿ ಅಂದರೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಇನ್ನೂ ಸಂತಾನಪ್ರಾಪ್ತಿ ಆಗಿಲ್ಲ ಎನ್ನುವವರು ಈ ಒಂದು ದ್ವಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಈ ಒಂದು ದ್ವಿಮುಖ ರುದ್ರಾಕ್ಷಿ ಶಿವ-ಪಾರ್ವತಿಯ ಸ್ವರೂಪ ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ದ್ವಿಮುಖ ಎಂದು ಕರೆಯಲಾಗುತ್ತದೆ ಒಂದು ಮುಖ ರುದ್ರಾಕ್ಷಿ ಧರಿಸುವುದರಿಂದ ಗಂಡ-ಹೆಂಡತಿಯ ನಡುವೆ ಇರುವ ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳು ಮನಸ್ತಾಪಗಳು ಸಮಸ್ಯೆಗಳು ದೂರವಾಗಿ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಅದೇ ರೀತಿಯಾಗಿ ಸಂತಾನಕ್ಕೆ ಎದುರಾಗಿರುವ ಸಮಸ್ಯೆಗಳು ನಿವಾರಣೆಯಾಗಿ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಅವುಗಳನ್ನು ಕಡಿಮೆ ಮಾಡಿ ಉತ್ತಮವಾದ ಸಂತಾನ ಪ್ರಾಪ್ತಿಗೆ  ದ್ವಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಈ ರೀತಿಯಾಗಿ ಸುಖಮಯ ದಾಂಪತ್ಯ ಜೀವನಕ್ಕಾಗಿ ಹಾಗೂ ಉತ್ತಮ ಸಂತಾನ ಪ್ರಾಪ್ತಿಗಾಗಿ ಪರಶಿವನ ಕಣ್ಣೀರಿನಿಂದ ಸೃಷ್ಟಿಯಾದ ರುದ್ರಾಕ್ಷಿಗಳಲ್ಲಿ ಒಂದಾದ ದ್ವಿಮುಖ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವ ಮತ್ತು ಪಾರ್ವತಿಯ ಅನುಗ್ರಹದಿಂದ ಉತ್ತಮವಾದ ದಾಂಪತ್ಯ ಜೀವನ ಏರ್ಪಡುತ್ತದೆ, ಅದೇ ರೀತಿಯಾಗಿ ಸಂತಾನಕ್ಕೆ ಇರುವ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಈ ಒಂದು ರುದ್ರಾಕ್ಷಿಯನ್ನು ಧರಿಸಿ ಶಿವ ಪಾರ್ವತಿ ಯನ್ನು ಆರಾಧಿಸುವುದರಿಂದ ಉತ್ತಮ ದಾಂಪತ್ಯ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ.

- Advertisement -

Latest Posts

Don't Miss