Saturday, December 7, 2024

Latest Posts

ಕಬ್ಬಿಣ ಅದಿರು ರಪ್ತು ನಿಷೇಧ ಹಿಂಪಡೆಯುವಂತೆ ಒತ್ತಾಯ: ಸಚಿವ ಮಂಕಾಳ ವೈದ್ಯರಿಗೆ ಕೆಎಂಬಿ ಸಿಇಒ ಮನವಿ

- Advertisement -

Political news: ಬೆಂಗಳೂರು: ರಾಜ್ಯದ ಕಿರು ಬಂದರುಗಳ ಮೂಲಕ ಕಬ್ಬಿಣ ಅದಿರು ರಪ್ತು ನಿಷೇಧಿಸುವ ಆದೇಶವನ್ನು ಹಿಂಪಡೆಯುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರಿಗೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್‌ ರಾಯ್‌ ಪುರ ಅವರು ಮನವಿ ಸಲ್ಲಿಸಿದರು.

ನಗರದ ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಸಚಿವರ ಕಚೇರಿಯಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಿದರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ತುರ್ತು ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳಿಗೆ ಹೆಚ್ಚುವರಿ ಒಟ್ಟು 15 ಕೋಟಿ ರೂಪಾಯಿಗಳು ಅನುದಾನ ನೀಡುವಂತೆ ಸಚಿವರಿಗೆ ಕೆಎಂಬಿ ಸಿಇಒ ಅವರು ಪ್ರಸ್ತಾವನೆ ಸಲ್ಲಿಸಿದರು.

2024-25ನೇ ಹಣಕಾಸು ವರ್ಷಕ್ಕೆ ಸಾಗರಮಾಲ ಯೋಜನೆಗೆ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸುವಂತೆ ಹಾಗೂ 5 ಸಾಗರಮಾಲಾ ಯೋಜನೆಗಳಿಗೆ ಸರ್ಕಾರದಿಂದ ಮರು ಮಂಜೂರಾತಿ ನೀಡುವಂತೆ ಸಚಿವರಿಗೆ ಜಯರಾಮ್‌ ರಾಯ್‌ ಪುರ ಅವರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮಾಲೀಕತ್ವದಲ್ಲಿರುವ ತದಡಿ ಬಂದರು ಲಿಮಿಟೆಡ್‌ ಅನ್ನು, ಕರ್ನಾಟಕ ಜಲಸಾರಿಗೆ ಮಂಡಳಿಗೆ ವರ್ಗಾಯಿಸುವ ಬಗ್ಗೆ ಸಚಿವರಿಗೆ ಒತ್ತಾಯಿಸಿದರು.

ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್‌. ಮಂಜುಳ, ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ.ಸಿ.ಸ್ವಾಮಿ, ಚೀಫ್‌ ಇಂಜಿನಿಯರ್‌ ಪ್ರಸನ್ನ ಕುಮಾರ್‌ ಶೇಟ್‌ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.

ವಾಟರ್ ಏರೋಡ್ರೋಮ್ ಯೋಜನೆ

ಸಮುದ್ರ ವಿಮಾನ ಸೇವೆಗಳ ಕಾರ್ಯಾಚರಣೆಯು ಆಕರ್ಷಕ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಒಂದಾಗಿದ್ದು, ಸಾಕಷ್ಟು ಪ್ರಾವಸಿಗರನ್ನು ಗಮನ ಸೆಳೆಯುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಪರಿಗಣಿಸಿ, ಇದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವರಿಗೆ ಕೆಎಂಬಿ ಸಿಇಒ ಅವರು ತಿಳಿಸಿದರು.

60 ನೌಕರರ ನೇಮಕಾತಿ

ಕರ್ನಾಟಕ ಜಲಸಾರಿಗೆ ಮಂಡಳಿಗೆ 60 ನೌಕರರನ್ನು ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಈ ನೇಮಕಾತಿ ಕರ್ನಾಟಕದ ಕಡಲತೀರಗಳ ಅಭಿವೃದ್ಧಿ, ನೌಕಾಯಾನ ಮತ್ತು ಬಂದರುಗಳ ನಿರ್ವಹಣೆ ಕುರಿತು ಹೆಚ್ಚು ಗಮನ ಹರಿಸಲು ಪ್ರಸ್ತುತ ಅವಶ್ಯಕವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ನೇಮಕಾತಿಯನ್ನು ಅದಷ್ಟು ಬೇಗ ಪರಿಗಣಿಸಿ, ಅನುಮೋದನೆ ನೀಡುವಂತೆ ಸಚಿವರಿಗೆ ತಿಳಿಸಿದರು.

- Advertisement -

Latest Posts

Don't Miss