Friday, December 27, 2024

Latest Posts

ಆಸಕ್ತರು ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಗಂಗೂಲಿ ಸ್ಪಷ್ಟನೆ..!

- Advertisement -

www.karnatakatv.net: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ರವಿಶಾಸ್ತ್ರಿ ಅವರ ಅಧಿಕಾರ ಮುಕ್ತಾಯಗೊಳ್ಳಲಿದ್ದು, ಅವರ ನಂತರ ದ್ರಾವಿಡ್ ಈ ಹುದ್ದೆಯನ್ನು ಸ್ವೀಕರಿಸಲಿದ್ದಾರೆ ಎನ್ನುವ ಮಾತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ನಾವು ಕೋಚ್ ಹುದ್ದೆಗೆ ಜಾಹೀರಾತು ನೀಡಿದ್ದೇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು, ದ್ರಾವಿಡ್ ಕೂಡ ಅರ್ಜಿಯನ್ನು ಸಲ್ಲಿಸಲು ತಿಳಿಸಿದ್ದಾರೆ. `ದ್ರಾವಿಡ್ ನಮ್ಮ ಜೊತೆ ಮಾತನಾಡಲು ದುಬೈಗೆ ಬಂದಿದ್ದು ನಿಜ. ಆದರೆ, ಅವರು ಎನ್ ಸಿಎ ಬಗ್ಗೆ ಮಾತನಾಡಲು ಬಂದಿದ್ದರು. ಎನ್ ಸಿಎ ಒಂದು ದೊಡ್ಡ ಸಂಸ್ಥೆ ಆಗುತ್ತಿದೆ. ಮುಂದಿನ ಪೀಳಿಗೆಯ ಭಾರತೀಯ ಕ್ರಿಕೆಟರ್ ಗಳನ್ನು ಹುಟ್ಟಿಸುತ್ತಿದೆ. ಹೀಗಾಗಿ ಎನ್ ಸಿಎ ಅನ್ನು ಮುಂದಿನ ದಿನಗಳಲ್ಲಿ ಯಾವರೀತಿ ಮುಂದಕ್ಕೆ ತೆಗೆದುಕೊಂಡ ಹೋಗಬಹುದು ಎಂಬ ಬಗ್ಗೆ ಚರ್ಚಿಸಲು ಬಂದಿದ್ದರು’ ಎಂದು ಗಂಗೂಲಿ ಹೇಳಿದರು.

ನಾಯಕತ್ವ ತೊರೆಯುವಂತೆ ನಮ್ಮಿಂದ ಒತ್ತಡ ಇರಲಿಲ್ಲ. ಅವರು ನಾಯಕತ್ವ ತೊರೆಯುವ ನಿರ್ಧಾರ ತಿಳಿಸಿದಾಗ ಆಘಾತವಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ. ನಾಯಕತ್ವ ತೊರೆಯುವಂತೆ ಕೊಹ್ಲಿ ಮೇಲೆ ಬಿಸಿಸಿಐ ಒತ್ತಡ ಹೇರಿರಲಿಲ್ಲ. ವಿರಾಟ್ ಕೊಹ್ಲಿ ಅವರೇ ಸ್ವಂತ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಪಾಕಿಸ್ತಾನ ಪಂದ್ಯ ಬಗ್ಗೆ ಮಾತನಾಡಿರು ಗಂಗೂಲಿ, ಇಂಡೋ-ಪಾಕ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ತುಂಬಾ ಕಷ್ಟದ ಕೆಲಸ ಎಂದಿದ್ದಾರೆ. ಯಾಕೆ ಕಷ್ಟ ಅನ್ನುವುದಕ್ಕೆ ಉತ್ತರ ನೀಡಿರುವುದ ಗಂಗೂಲಿ, ಭಾರತದಲ್ಲಿ ಟಿಕೆಟ್ ಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಇಲ್ಲಿ ಎಲ್ಲವನ್ನು ನಿರ್ವಹಿಸುವುದು ಕಷ್ಟ. ಭಾರತ-ಪಾಕಿಸ್ತಾನ ಪಂದ್ಯದೊoದಿಗೆ ವಿಶ್ವಕಪ್ ಅನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ನಾವು ಪಾಕಿಸ್ತಾನದ ವಿರುದ್ಧದ ಪಂದ್ಯದೊoದಿಗೆ ಪ್ರಾರಂಭಿಸಿದ್ದೇವೆ. ಬಹುಶಃ 2019ರಲ್ಲಿ ಅದು ನಡೆದಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿಯು ಕೂಡ ಪಾಕಿಸ್ತಾನದ ವಿರುದ್ಧದ ಪಂದ್ಯದೊoದಿಗೆ ಪ್ರಾರಂಭವಾಯಿತು ಮತ್ತು ಫೈನಲ್ ನಲ್ಲೂ ಪಾಕಿಸ್ತಾನವೇ ಎದುರಾಳಿಯಾಯಿತು ಎಂದು ಗಂಗೂಲಿ ಹೇಳಿದರು.

- Advertisement -

Latest Posts

Don't Miss