Wednesday, June 19, 2024

Latest Posts

ಮೊಬೈಲ್ ರೀಚಾರ್ಜ್ ಗೆ ಶುಲ್ಕ ವಿಧಿಸಿದ ಫೋನ್ ಪೇ..!

- Advertisement -

ಕರೆಂಟ್ ಬಿಲ್ ಕಟ್ಟೋಕೆ, ಅರ್ಜೆಂಟ್ ಆಗಿ ಯಾರಿಗಾದ್ರೂ ಹಣ ಕಳಿಸೋದಕ್ಕೆ, ಆನ್ ಲೈನ್ ಶಾಪಿಂಗ್,  ಮೊಬೈಲ್ ಗೆ  ರೀಚಾರ್ಜ್ ಮಾಡೋದಕ್ಕ ಫೋನ್ ಪೇ ಆಪ್ ಸಿಕ್ಕಾಪಟ್ಟೆ ಯೂಸ್ ಆಗ್ತಿದೆ. ಆದ್ರೆ ಇನ್ ಮೇಲೆ ನೀವು ಯಾರಿಗಾದ್ರೂ ಕೂತ ಜಾಗದಲ್ಲೇ ರೀಚಾರ್ಜ್ ಮಾಡಿಸ್ಬೇಕಾದ್ರೆ ಸ್ವಲ್ಪ ಯೋಚ್ನೆ ಮಾಡ್ಬೇಕಾಗುತ್ತೆ. ಯಾಕೆ ಅಂತ ಹೇಳ್ತೀವಿ ಈ ವಿಡಿಯೋ ತಪ್ಪದೇ ನೋಡಿ.

ಡಿಜಿಟಲ್ ಪೇಮೆಂಟ್ ಆಪ್ ಗಳಲ್ಲಿ ಫೋನ್ ಪೇ ಸಿಕ್ಕಾಪಟ್ಟೆ ಬಳಕೆಯಲ್ಲಿರೋ ಆ್ಯಪ್ ಸುಮಾರು  30 ಕೋಟಿ ಮಂದಿ ಬಳಕೆ ಮಾಡ್ತಿದ್ದಾರೆ. ಈ ಆ್ಯಪ್ ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಅಂದ್ರೆ,  ಸೆಪ್ಟಂಬರ್ ತಿಂಗಳೊಂದರಲ್ಲೇ 165 ಕೋಟಿಯಷ್ಟು ಯುುಪಿಐ ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದೆ.

ಇಂತಹ ಡಿಜಿಟಲ್ ಪೇಮೆಂಟ್ ದೈತ್ಯ ಫೋನ್ ಪೇ ಆ್ಯಪ್ ಸದ್ಯ ಗ್ರಾಹಕರಿಗೆ ಶುಲ್ಕ ವಿಧಿಸೋದಕ್ಕೆ ಹೊರಟಿದೆ.

ಹೌದು, 2015ರಿಂದ ಈ ವರೆಗೂ ಗ್ರಾಹಕರ ಯಾವುದೇ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸದ ಫೋನ್ ಪೇ ಮುಂದೆ ಮೊಬೈಲ್ ರೀಜಾರ್ಜ್ ಮಾಡಿಸಿದ್ರೆ ಶುಲ್ಕ ವಿಧಿಸುತ್ತೆ.

ನಿಜ, 50 ರೂಪಾಯಿಗಿಂತ ಅಧಿಕ ಮೊತ್ತದ ಮೊಬೈಲ್ ಚಾರ್ಜ್ ಗೆ ಫೋನ್ ಪೇ ಸದ್ಯ ಶುಲ್ಕವಿಧಿಸಲಿದೆ. ಇನ್ನು  ಯುಪಿಐ ಮೂಲಕ ರೀಜಾರ್ಜ್ ಮಾಡಿದ್ರೂ ಕೂಡ 1-2 ರೂ. ಶುಲ್ಕ ವಿಧಿಸಲಾಗುತ್ತೆ.  50ರಿಂದ 100 ರೂಪಾಯಿ ಮಧ್ಯೆ ರೀಚಾರ್ಜ್ ಮಾಡಿಸಿದರೆ 1 ರೂ. ಹಾಗೆಯೇ100 ರೂಪಾಯಿ ಮೇಲ್ಪಟ್ಟು ಮೊಬೈಲ್​ ರೀಚಾರ್ಜ್ ಮಾಡಿಸಿದರೆ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುತ್ತೆ ಅಂತ ಸಂಸ್ಥೆ ತಿಳಿಸಿದೆ.

ಇನ್ನು ಕ್ರೆಡಿಟ್ ಕಾರ್ಡ್ ಪೇಮೆಂಟ್ ಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕದ ಮಾದರಿಯಲ್ಲೇ ಸದ್ಯ ಫೋನ್ ಪೇ ಕೂಡ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಲು ಹೊರಟಿದೆ.

ಇನ್ನುಳಿದಂತೆ ಫೋನ್ ಪೇ ಆಪ್ ಮೂಲಕ ಮನಿ ಟ್ರಾನ್ಸಫರ್ ಮತ್ತಿತರ ವಹಿವಾಟಿಗೆ ಸಂಸ್ಥೆ ಯಾವುದೇ ಶುಲ್ಕ ವಿಧಿಸಿಲ್ಲ.

ಬ್ಯೂರೋ ರಿಪೋರ್ಟ್- ಕರ್ನಾಟಕ ಟಿವಿ

- Advertisement -

Latest Posts

Don't Miss