Tuesday, February 4, 2025

Latest Posts

International News: ಗಾಜಾದಲ್ಲಿ ಬಂಧಿತರಾಗಿದ್ದ ನಾಲ್ವರು ಮಹಿಳಾ ಸೈನಿಕರ ಬಿಡುಗಡೆ

- Advertisement -

International News: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವಿನ ಕದನ ವಿರಾಮದ ಒಪ್ಪಂದದ ಎರಡನೇಯ ದಿನದಂದು ಕೈದಿಗಳಿಗೆ ಬಿಡುಗಡೆ ಮಾಡುವ ಒಪ್ಪಂದವಾಗಿತ್ತು. ಹೀಗಾಗಿ ಇಂದು ಹಮಾಸ್ ಯುದ್ಧ ಶುರುವಾದಾಗಿನಿಂದ ತಮ್ಮ ಬಳಿ ಇರಿಸಿಕೊಂಡಿದ್ದ ನಾಾಲ್ವರು ಇಸ್ರೇಲ್ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದೆ.

ನಿನ್ನೆ ಇಸ್ರೇಲಿನಲ್ಲಿ ಬಂಧಿಸಿಟ್ಟಿದ್ದ ಹಲವು ಪ್ಯಾಲೇಸ್ತೇನಿಯನ್ನರನ್ನು ರಿಲೀಸ್ ಮಾಡಲಾಗಿತ್ತು. ಸತತ ಒಂದು ವರ್ಷಗಳ 2 ತಿಂಗಳುಗಳ ಕಾಲ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆದಿತ್ತು. ಇಸ್ರೇಲ್‌ನ ಪ್ರಜೆಗಳನ್ನು ಬಾಂಬ್ ಹಾಕಿ ಕೊಲ್ಲುವ ಮೂಲಕ, ಹಮಾಸ್ ಇಸ್ರೇಲ್ ಜೊತೆ ಕಾಲು ಕೆರೆದು ಜಗಳಕ್ಕೆ ಬಂದಿತ್ತು. ಈ ಭೂಮಿಯ ಮೇಲೆ ಒಬ್ಬೇ ಒಬ್ಬ ಹಮಾಸ್ ಉಗ್ರರು ಇರದಿರುವ ಹಾಗೆ ಮಾಡುತ್ತೇವೆ ಎಂದು ಇಸ್ರೇಲ್ ಸೇನೆ ಅಂದೇ ಪಣ ತೊಟ್ಟಿತ್ತು.

ಈ ಯುದ್ಧದಲ್ಲಿ ಸಾವಿರಾರು ಪ್ಯಾಲೇಸ್ತಿನ್ ಪ್ರಜೆಗಳು ಸಾವನ್ನಪ್ಪಿದ್ದರೆ, ಇನ್ನು ಕೆಲವರನ್ನು ಇಸ್ರೇಲ್ ಬಂಧಿಸಿಟ್ಟುಕೊಂಡಿತ್ತು. ಇಸ್ರೇಲ್‌ನ ಕೆಲ ಪ್ರಜೆಗಳು, ಸೈನಿಕರನ್ನು ಕೂಡ ಹಮಾಸ್ ಪಡೆ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿತ್ತು.

ಹಮಾಸ್‌ನ ಹಲವು ಉಗ್ರರನ್ನು ಇಸ್ರೇಲ್ ಹೊಡೆದುರುಳಿಸಿತ್ತು. ಈ ಯುದ್ಧದಲ್ಲಿ ಇಸ್ರೇಲ್ ಅಧ್ಯಕ್ಷರಾದ ನೇತನ್ಯಾಹು ಅವರ ಮನೆ ಮೇಲೆ ಬಾಂಬ್ ಇಟ್ಟಿರುವ ಡ್ರೋನ್‌ನಿಂದ ದಾಳಿ ನಡೆಸಿದ್ದ ಹಮಾಸ್ ಉಗ್ರರು, ನೆತನ್ಯಾಹು ಕೊಲೆ ಮಾಡಲು ಸಂಂಚು ರೂಪಿಸಿದ್ದರು. ಆದರೆ ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ, ನೆತನ್ಯಾಹು ಬದುಕುಳಿದಿದ್ದರು.

ಈ ವರ್ಷ ಜನವರಿಯಲ್ಲಿ ಎರಡೂ ದೇಶಗಳ ನಡುವೆ ಕದನ ವಿರಾಮದ ಒಪ್ಪಂದವಾಗಿದ್ದು, ಈ ವೇಳೆ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಮಾತುಕತೆಯಾಗಿತ್ತು. ಹೀಗಾಗಿ ಇಸ್ರೇಲ್ ಸೇನೆ ಪ್ಯಾಲೆಸ್ತಿನ್ ಪ್ರಜೆಗಳನ್ನು ಬಿಡುಗಡೆ ಗೊಳಿಸಿದ್ದು, ಹಮಾಸ್ ಪಡೆ ಇಸ್ರೇಲ್ ಸೈನಿಕರನ್ನು ರಿಲೀಸ್ ಮಾಡಿದೆ.

- Advertisement -

Latest Posts

Don't Miss