International News: ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಮನಿಲಾಗೆ ಹೋಗುತ್ತಿದ್ದ ಫ್ಲೈಟ್‌ನ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಓರ್ವ ವ್ಯಕ್ತಿ ನಿದ್ದೆಗಣ್ಣಿನಲ್ಲಿ ವಿಮಾನದಲ್ಲೇ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ರಾತ್ರಿ ಪ್ಲೇನ್ ಹೊರಡುವ ಸಮವಾಗಿದ್ದ ಕಾರಣ, ಪ್ಲೇನ್‌ನಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದರು. ಈ ವೇಳೆ ಓರ್ವ ವ್ಯಕ್ತಿಯ ಮೈ ಮೇಲೆ ನೀರು ಬೀಳುವಂತಾಗಿ, ಆತ ಎಚ್ಚರವಾದಾಗ, ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ, ಎದ್ದು ಬಂದು, ಈತನ ಮೈಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಈ ವೇಳೆ ವ್ಯಕ್ತಿಯ ಬಟ್ಟೆಯೆಲ್ಲ ಒದ್ದೆಯಾಗಿದೆ.
ಬಳಿಕ ಸಂತ್ರಸ್ತ ವ್ಯಕ್ತಿ ವಿಮಾನದಲ್ಲಿರುವ ಸಿಬ್ಬಂದಿಗೆ ಈ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದು, ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಮುನ್ನ, ಸಂತ್ರಸ್ತ ವ್ಯಕ್ತಿಯನ್ನು ಸಮಾಧಾನಪಡಿಸಿ, ನಿದ್ದೆಗಣ್ಣಿನಲ್ಲಿ ಹೀಗೆ ಆಗಿದೆ ಎಂದಿದ್ದಾರೆ. ಬಳಿಕ ಮೂತ್ರ ವಿಸರ್ಜಿಸಿದ ವ್ಯಕ್ತಿಗೆ ಇನ್ನು ಮುಂದೆ ತಮ್ಮ ಪ್ಲೇನ್‌ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲವೆಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂತ್ರಸ್ತನ ಮಗಳು, ವಿಮಾನಯಾನ ಸಂಸ್ಥೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಓರ್ವ ವ್ಯಕ್ತಿಯ ಮೇಲೆ ಇನ್ನೋರ್ವ ವ್ಯಕ್ತಿ ನಮೂತ್ರ ವಿಸರ್ಜಿಸುವುದು ಸಾಮಾನ್ಯ ವಿಷಯವಲ್ಲ. ಪ್ರಯಾಣ ನಿಷೇಧಿಸಿದ ಹೊರತಾಗಿ, ಬೇರೆ ಯಾವ ಕ್ರಮವನ್ನೂ ತೆಗೆದುಕೊಳ್ಳಲದೇ, ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.