Friday, April 18, 2025

Latest Posts

ದರ್ಶನ್‌ಗೆ ಮತ್ತೊಂದು ವಿವಾದದ ಭವಿಷ್ಯ: ಖ್ಯಾತ ನಟನ ಮಗನಿಗೆ ಈ ಬಾರಿ ತೊಂದರೆ?

- Advertisement -

Horoscope: ನಟ ದರ್ಶನ್‌ಗೆ 2024ರ ವರ್ಷ ಅದೆಷ್ಟು ಕೆಟ್ಟದಾಗಿತ್ತು ಅಂತಾ ಎಲ್ಲರಿಗೂ ಗೊತ್ತು. ಆದರೆ 2024ರ ಜನವರಿಯಲ್ಲೇ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದರು. ಓರ್ವ ನಟ, ಹೆಣ್ಣಿನಿಂದ ತೊಂದರೆ ಅನುಭವಿಸಲಿದ್ದಾನೆ ಅಂತಾ ಭವಿಷ್ಯ ಹೇಳಿದ್ದರು. ಅದೇ ರೀತಿ ದರ್ಶನ್ ಪವಿತ್ರಾಳಿಂದ ತೊಂದರೆ ಅನುಭವಿಸಿದ್ದರು. ಈ ವರ್ಷದಲ್ಲಿ ನಡೆಯುವ ಅನೇಕ ಸಿನಿಮಾ ವಿಷಯಗಳ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಕಳೆದ ಬಾಾರಿ ಗುರೂಜಿ ಭವಿಷ್ಯ ಹೇಳಿದ್ದಾಗ, ದರ್ಶನ್‌ಗೆ 18 ತಿಂಗಳುಗಳ ಕಾಲ ಸಮಯ ಸರಿ ಇಲ್ಲ ಎಂದಿದ್ದರು. ಅದೇ ರೀತಿ ಯಾಗಿದ್ದು, ಇದೀಗ 12 ತಿಂಗಳು ಕಳೆದಿದೆ. ಇನ್ನೂ 7 ತಿಂಗಳ ಕಾಲ ದರ್ಶನ್‌ಗೆ ಸ್ವಲ್ಪ ಕಷ್ಟವಿದೆ ಎಂದು ಗುರೂಜಿ ಹೇಳಿದ್ದಾರೆ. ಯಾಕಂದ್ರೆ ಮತ್ತೊಂದು ವಿವಾದ ಅವರು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಈ ವರ್ಷ ಏಪ್ರಿಲ್ ಬಳಿಕ, ಕನ್ನಡ ಚಿತ್ರರಂಗಕ್ಕೆ ಎಲ್ಲವೂ ಒಳ್ಳೆಯದಾಗಲಿದೆ. ಅನೇಕ ಚಿತ್ರಗಳು ಯಶಸ್ಸು ಕಾಣಲಿದೆ. ಆದರೆ ಕನ್ನಡ ಚಲನಚಿತ್ರ ನಟನ ಮಗನಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಯುಂಟಾಗುವ ಸಾಧ್ಯತೆ ಇದೆ. ಮಾನಸಿಕವಾಗಿ ಆ ವ್ಯಕ್ತಿ ಕುಗ್ಗಲಿದ್ದಾರೆ. ಹಾಗಾಗಿ ಸುಮಾರು 20 ತಿಂಗಳುಗಳ ಕಾಲ ಅವರು ಎಚ್ಚರಿಕೆ ವಹಿಸಬೇಕು ಎಂದು ಗುರೂಜಿ ಹೇಳಿದ್ದಾರೆ.

ಇನ್ನು ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಲಾಭವಿದೆ ಎಂದು ಗುರೂಜಿ ಹೇಳಿದ್ದಾರೆ. ಬಹಳಷ್ಟು ಪ್ರಶಸ್ತಿ ಬರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss