Investment News: ಶೇರು ಮಾರುಕಟ್ಟೆ ತರಬೇತುದಾರರಾದ ಡಾ. ಭರತ್ ಚಂದ್ರ ಅವರು ಈಗಾಗಲೇ ಹಣ ಹೂಡಿಕೆ ಮಾಡುವ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ನಮಗೆ 1 ಕೋಟಿ ರೂಪಾಯಿ ಗಳಿಸಬೇಕು ಎಂದರೆ, ನಾವು ಯಾವ ವಯಸ್ಸಿನಿಂದ, ಎಷ್ಟು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
ಇಂದಿನ ಕಾಲದಲ್ಲಿ ಹಣ ಹೂಡಿಕೆ ಮಾಡುವುದು, ಹಣ ಗಳಿಸುವುದು ತುಂಬಾನೇ ಮುಖ್ಯವಾದ ಸಂಗತಿ. ಓರ್ವ ವ್ಯಕ್ತಿಗೆ 25 ವರ್ಷ ವಯಸ್ಸಾಗಿದೆ ಎಂದರೆ, ಆತನಿಗೆ ದುಡಿಯುವ ವಯಸ್ಸಾಗಿದೆ ಎಂದರ್ಥ. ದುಡಿಮೆ ಶುರುವಾದಂತೆ ಸಂಬಳ ಬರಲು ಶುರುವಾಗುತ್ತದೆ. ಬಂದ ಸಂಬಳದಲ್ಲಿ 1 ಸಾವಿರ ರೂಪಾಯಿಯನ್ನು ಪ್ರತೀ ತಿಂಗಳು ಇನ್ವೆಸ್ಟ್ ಮಾಡುವುದರಿಂದ ಇನ್ನು 35 ವರ್ಷ ಬಿಟ್ಟು, ಅಂದರೆ ರಿಟೈರ್‌ಮೆಂಟ್ ವಯಸ್ಸಾಗಿರುವ 60 ವರ್ಷಕ್ಕೆ ಆತನಿಗೆ 58 ಲಕ್ಷ ರೂಪಾಯಿ ಸಿಗುತ್ತದೆ.
ಹಾಗಾದ್ರೆ ಅವರು ಇನ್ವೆಸ್ಟ್ ಮಾಡಬೇಕಾಗಿರೋದಾದ್ರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ, ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ನಲ್ಲಿ. ಪ್ರತೀ ತಿಂಗಳು 1 ಸಾವಿರ ರೂಪಾಯಿ ಎಸ್‌ಐಪಿ ಮಾಡಿದರೆ, ಆತನಿಗೆ 60 ವರ್ಷಕ್ಕೆ ಅರ್ಧ ಕೋಟಿ ಹಣವಂತೂ ಸಿಗುತ್ತದೆ.
ಇನ್ನು ಅದೇ 1 ಸಾವಿರ ರೂಪಾಯಿಯನ್ನು 35 ವರ್ಷ ಪ್ರತೀ ತಿಂಗಳು ನೀವು ಕಟ್ಟಿದಾಗ. ನಿಮಗೆ 15 ಪರ್ಸೆಂಟ್ ಬಡ್ಡಿ ಸಿಕ್ಕರೆ, 1 ಕೋಟಿಗೂ ಹೆಚ್ಚು ಹಣ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ 1 ಸಾವಿರ ರೂಪಾಯಿ ಎಲ್ಲಿ ಕಟ್ಟಬೇಕು ಎಂದು ಕೇಳಿದರೆ, ಶೇರು ಮಾರುಕಟ್ಟೆಯಲ್ಲಿ, ಸರಿಯಾದ ಮಾಹಿತಿಯೊಂದಿಗೆ ವಿನಿಯೋಗಿಸಬೇಕು. ಅಲ್ಲದೇ, ನೀವು ಶೇರು ಮಾರುಕಟ್ಟೆ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿದ್ದು, ಉತ್ತಮ ಶೇರುಗಳನ್ನು ಆಯ್ಕೆ ಮಾಡುವ ಅರ್ಹತೆ ನಿಮಗಿದ್ದಲ್ಲಿ, ನೀವು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್‌ನಲ್ಲ 18 ವರ್ಸೆಂಟ್ ವರೆಗೂ ನಿರೀಕ್ಷೆ ಇಟ್ಟುಕೊಳ್ಳಬಹುದು. ಅಂದರೆ 2 ಕೋಟಿಗೂ ಅಧಿಕ ಹಣ ಸಂಪಾದನೆ ಮಾಡಬಹುದು.
ಬರೀ 1 ಸಾವಿರವಲ್ಲದೇ ತಿಂಳಿಗೆ 5 ಸಾವಿರ ರೂಪಾಯಿ ನೀವು ಉಳಿತಾಯ ಮಾಡಿ, ಇನ್ವೆಸ್ಟ್ ಮಾಡುತ್ತಿದ್ದೀರಿ ಅಂದರೆ, 12 ಪರ್ಸೆಂಟ್ ಬಡ್ಡಿ ಬಂದರೆ, 2.9 ಕೋಟಿ, 15 ಪರ್ಸೆಂಟ್ ಎಂದರೆ 6.8 ಕೋಟಿ, 18 ಪರ್ಸೆಂಟ್ ಎಂದರೆ, 12.86 ಕೋಟಿ ರೂಪಾಯಿ ರಿಟರ್ನ್ಸ್ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.