National News: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಪುಣ್ಯ ಕುಂಭ ಮೇಳದಲ್ಲಿ, ಅಮೃತ ಸ್ನಾನ ಮಾಡಿದ್ದಾರೆಂದು ಫೋಟೋ ವೈರಲ್ ಆಗುತ್ತಿದೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಕ್ಕೊಮ್ಮೆ ಬರುವ ಮಹಾಪುಣ್ಯ ಕುಂಭಮೇಳ ನಡೆಯುತ್ತದೆ. ಈ ಕುಂಭ ಮೇಳದಲ್ಲಿ ಈ ಬಾರಿ 40ರಿಂದ 45 ಕೋಟಿ ಭಕ್ತರು ಅಮೃತ ಸ್ನಾನಕ್ಕಾಗಿ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರೆ, ಪುಣ್ಯ ಸಿಗುತ್ತದೆ ಅನ್ನೋ ನಂಬಿಕೆ ಇದೆ.
ಈ ಕುಂಭಮೇಳದ ಅಮೃತ ಸ್ನಾನದಲ್ಲಿ ಸಮಾಜವಾಾದಿ ಪಕ್ಷದ ನಾಯಕ ಅಖಿಲೇಶ್ ಯಾಾದವ್ ಮಿಂದೆದಿದ್ದಾರೆ ಅನ್ನೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ, ಈ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ.
ಹಾಗಾದ್ರೆ ಸತ್ಯವೇನು..?
ರಾತ್ರಿ ಹೊತ್ತಿನಲ್ಲಿ ಅಖಿಲೇಶ್ ಯಾದವ್ ಒಬ್ಬರೇ ನದಿಯೊಂದರಲ್ಲಿ ಮುಳುಗಿ ಏಳುವ ಫೋಟೋ ಇದಾಗಿದ್ದು, ಕೆಲವರು ಈ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿ, ಬೇರೆ ಧರ್ಮದವರು ಸಿಟ್ಟಾಗುತ್ತಾರೆ ಎಂದು ರಾತ್ರಿ ಹೊತ್ತಿನಲ್ಲಿ ಕುಂಭ ಮೇಳದಲ್ಲಿ ನದಿಯಲ್ಲಿ ಅಖಿಲೇಶ್ ಮಿಂದೆದ್ದರು ಎಂದು ಟ್ರೋಲ್ ಮಾಡಿದ್ದಾರೆ.
ಆದರೆ ಅಖಿಲೇಶ್ ಯಾದವ್ ಹರಿದ್ವಾರದ ಉತ್ತರಾಖಂಡದಲ್ಲಿ ಇದೇ ವರ್ಷ ಸಂಕ್ರಾಂತಿ ಹಬ್ಬದಂದು, ಗಂಗಾ ಸ್ನಾಾನ ಮಾಡಿದ್ದಾರೆ. ಈ ಫೋಟೋವನ್ನು ಕುಂಭಮೇಳದ ಫೋಟೋ ಎಂದು ಟ್ರೋಲ್ ಮಾಡಲಾಗುತ್ತಿದೆ.
मकर संक्रांति के पावन पर्व पर लिया माँ गंगा का आशीर्वाद। pic.twitter.com/Rx1ZRHsH7m
— Akhilesh Yadav (@yadavakhilesh) January 14, 2025