Cricket News: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಕ್ರಿಕೇಟಿಗ ಎಂ.ಎಸ್.ಧೋನಿಗೆ ಆಹ್ವಾಾನ ಬಂದಿದೆ. ಸೋಮವಾರದ ದಿನ ರಾಂಚಿಯಲ್ಲಿರುವ ಧೋನಿ ನಿವಾಸಕ್ಕೆ ಭೇಟಿ ನೀಡಿರುವ ಆರ್ಎಸ್ಎಸ್ ಕಾರ್ಯದರ್ಶಿ ಧನಂಜಯ್ ಸಿಂಗ್, ಸಕುಟುಂಬ ಸಮೇತರಾಗಿ, ಕಾರ್ಯಕ್ರಮಕ್ಕೆ ಬರಬೇಕೆಂದು ವಿನಂತಿಸಿದ್ದಾರೆ. ಧೋನಿ ಕೂಡ ಆಹ್ವಾನವನ್ನೂ ಪ್ರೀತಿಪೂರ್ವಕವಾಗಿ ಸ್ವೀಕರಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ದೇಶದ 6 ಸಾವಿರಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಗಾಯಕಿಯಾದ ಆಶಾ ಭೋಸ್ಲೆ, ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರಜನಿಕಾಂತ್, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿ ಹಲವು ಗಣ್ಯರಿಗೆ, ಅಯೋಧ್ಯಾ ರಾಮಮಂದಿರ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.
ಜನವರಿ 22ರಂದು ನಡೆಯುವ ಕಾರ್ಯಕ್ರಮಕ್ಕೆ, ಇಂದಿನಿಂದಲೇ ತಯಾರಿ ನಡೆದಿದೆ. ಇಂದಿನಿಂದಲೇ ಹಲವು ಪೂಜೆಗಳು ನಡೆಯಲು ಶುರುವಾಗಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ರಾಮಭಕ್ತರು ಕಾತುರರಾಗಿದ್ದಾರೆ.
ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಆಟಗಾರರು..
ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ