Dharwad News: ಧಾರವಾಡದಲ್ಲಿ HODEK ವೆಬ್ರೇಷನ್ ಘಟಕ ಉದ್ಘಾಟನೆಯಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾ”ಿಸಿದ್ದಾರೆ. ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಈ ನೂತನ ಘಟಕವಿದ್ದು, ಉದ್ಘಾ”ನೆ ಬಳಿಕ ಕೇಂದ್ರ ಸಚಿವ ಜೋಶಿ ಮಾತನಾಡಿದ್ದಾರೆ.
ಹಿಡಕಲ ಡ್ಯಾಮ್‌ನಲ್ಲಿ ಕೈಗಾರಿಕೆಗಳಿಗೆ ಇಂತಿಷ್ಟು ನೀರು ಮೀಸಲು ಇದೆ. ನೀರಾವರಿಯಿಂದ ಯಾವುದನ್ನೂ ತಗೊತಾ ಇರುವುದಿಲ್ಲ. ಕೃಷಿಗೆ ನೀರು ಬಳಿಸಿ, ಅದರಲ್ಲಿ ಉಳಿದರೆ ಅದನ್ನು ಉಳಿದಿದ್ದನ್ನು ಕೈಗಾರಿಕೆಗಳಿಗೆ ತಗೋತೇವಿ. ನಮ್ಮ ದೇಶದ ಆರ್ಥಿಕತೆ ಬೆಳೆಯಲು ಉದ್ಯಮಗಳು ಬೆಳೆಯಬೇಕು. ಹೀಗಾಗಿ ಹಿಡಕಲ್ ಡ್ಯಾಮ್ ನೀರು ಕೊಡಲೇಬೇಕಾಗುತ್ತದೆ. ಅಲ್ಲಿ ಕೃಷಿಗೆ ಬಳಸಿ ಉಳಿದ ನೀರು ಕೊಡಲೇಬೇಕು. ನಮ್ಮಲ್ಲಿ ಕೈಗಾರಿಕೆಗಳು ಬೆಳಯಬೇಕಲ್ವಾ?
ಅದಕ್ಕೆ ನೀರು ಕೊಡಲೇಬೇಕು. ಸೆಮಿಕಂಡಕ್ಟರ್ ಗಳಿಗೆ ನೀರು ಬೇಕೇ ಬೇಕು. ನೀರು ಇಲ್ಲದಿದ್ರೆ ಬೆಳಗಾವಿ, ಧಾರವಾಡಕ್ಕೆ ದೊಡ್ಡ ಉದ್ಯಮ ಬರೋದಿಲ್ಲ. ಈಗಾಗಲೇ ಎಂ.ಬಿ. ಪಾಟೀಲ ಈ ಬಗ್ಗೆ ಹೆಳಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ಕೊಡಲೇಬೇಕು ಎಂದು ಜೋಶಿ ಹೇಳಿದ್ದಾರೆ.
ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಪ್ರಹ್ಲಾದ್ ಜೋಶಿ ಉದ್ಘಾ”ಿಸಿದ್ದಾರೆ. HODEK ವೈಬ್ರೇಷನ್ ಕಂಪನಿ ಆವರಣದಲ್ಲಿ ಈ ಮಂದಿರ ನಿರ್ಮಾಣವಾಗಿದ್ದು, ಇಲ್ಲಿ ರಾಮ-ಸೀತಾ, ಲಕ್ಷ್ಮಣ, ಹನುಮಂತ ದೇವರ ಮೂರ್ತಿ ಇದೆ. ಈ ಕಾಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ, ಮಾಜಿ ಶಾಸಕ ಅಮೃತ ದೇಸಾಯಿ, ಕೈಗಾರಿಕೋದ್ಯಮಿಗಳು, ಕಾರ್ಮಿಕರು ಭಾಗಿಯಾಗಿದ್ದರು.