ಸನರೈಸರ್ಸ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು 

ಮುಂಬೈ:ಋತುರಾಜ್ ಗಾಯಕ್ವಾಡ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ ಸನ್ ರೈಸರ್ಸ್ ವಿರುದ್ಧ 13 ರನ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಧೋನಿ ಪಡೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (99 ರನ್) ಹಾಗೂ ಡೆವೊನ್ ಕಾನ್ವೆ (85 ರನ್) ಭರ್ಜರಿ ಆರಂಭ ನೀಡಿದರು.

ಈ ಜೋಡಿ ಮೊದಲ ವಿಕೆಟ್ಗೆ ಬರೋಬ್ಬರಿ 182 ರನ್ ಸೇರಿಸಿತು.ಸ್ಫೋಟಕ ಬ್ಯಾಟಿಂಗ್ ಮಾಡಿದ ಋತುರಾಜ್ ಗಾಯಕ್ವಾಡ್ 33 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಡೆವೊನ್ ಕಾನ್ವೆ 39 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

99 ರನ್ ಗಳಿಸಿ ಮುನ್ನಗುತ್ತಿದ್ದ ಋತುರಾಜ್ ಗಾಯಕ್ವಾಡ್ ನಟರಾಜನ್ ಎಸೆತದಲ್ಲಿ  ಭುವನೇಶ್ವ್ ರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಜೊತೆಗೆ ಶತಕ ಸಿಡಿಸುವ ಅವಕಾಶದಿಂದ ವಂಚಿತರಾದರು.

ಧೋನಿ 8 ರನ್ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 1 ರನ್ ಗಳಿಸಿದರು. ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು.

203 ರನ್ಗಳ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ(39) ಕೇನ್ ವಿಲಿಯಮ್ಸನ್ (47) ಮೊದಲ ವಿಕೆಟ್ಗೆ 58 ರನ್ ಸೇರಿಸಿದರು.

ರಾಹುಲ್ ತ್ರಿಪಾಠಿ 0, ಏಡಿನ್ ಮಾರ್ಕರಾಮ್ 17, ನಿಕೊಲೊಸ್ ಪೂರಾನ್ 64, ಶಶಾಂಕ್ ಸಿಂಗ್ 15, ವಾಷಿಂಗ್ಟನ್ ಸುಂದರ್ 2 ರನ್ ಗಳಿಸಿದರು.

ಸನ್ ರೈಸರ್ಸ್ ನಿಗದಿತ 20 ಓವರ್ಗಳಲ್ಲಿ  6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಚೆನ್ನೈ ಪರ ಮುಖೇಶ್ ಚೌಧರಿ 4 ವಿಕೆಟ್ ಪಡೆದು ಮಿಂಚಿದರು. 99 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

About The Author