Wednesday, April 16, 2025

Latest Posts

ರಾಜಸ್ಥಾನಕ್ಕಿಂದು  ಚೆನ್ನೈ ಕಿಂಗ್ಸ್  ಸವಾಲು:ಪ್ಲೇ ಆಫ್ ಕನಸಲ್ಲಿ  ಸ್ಯಾಮ್ಸನ್ ಪಡೆ   

- Advertisement -

ಮುಂಬೈ:ಐಪಿಎಲ್‍ನ  68ನೇ  ಪಂದ್ಯದಲ್ಲಿ  ರಾಜಸ್ಥಾನ ರಾಯಲ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯದಲ್ಲಿ  ರಾಜಸ್ಥಾನ ತಂಡ ಗೆಲ್ಲಲ್ಲೇಬೇಕಾದ  ಒತ್ತಡವನ್ನು ಎದುರಿಸುತ್ತಿದೆ.

ಈಗಾಗಲೇ  ಟೂರ್ನಿಯಿಂದ  ಹೊರ ಬಿದ್ದಿರುವ  ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರಿಗೆ ಅವಕಾಶ ಕೊಟ್ಟು ಬೆಂಚ್ ಪರೀಕ್ಷೆ ಮಾಡುತ್ತಿದೆ. ಇತ್ತ ರಾಜಸ್ಥಾನ ತಂಡ 13 ಪಂದ್ಯಗಳಿಂದ  16 ಅಂಕ ಪಡೆದು ಅಂಕಪಟ್ಟಿಯಲ್ಲಿ  3ನೇ ಸ್ಥಾನದಲ್ಲಿದೆ.  ಇನ್ನು ಒಂದು ಗೆಲುವು ರಾಜಸ್ಥಾನ ತಂಡಕ್ಕೆ  ಪ್ಲೇ ಆಫ್ ಪ್ರವೇಶ ಸಿಗಲಿದೆ.

ಟೂರ್ನಿಯಲ್ಲಿ  ಅದ್ಬುತ ಪ್ರರ್ದಶನ  ನೀಡಿರುವ ರಾಜಸ್ಥಾನ +0.304 ನೆಟ್ ರನ್ ರೇಟ್ ಹೊಂದಿದ್ದು  ಲಕ್ನೊ (+0.251 )ತಂಡಕ್ಕಿಂತ ಹೆಚ್ಚಿದೆ. ಟೂರ್ನಿಯಲ್ಲಿ ಕೊನೆಯ ಪಂದ್ಯವನ್ನಾಡುತ್ತಿರುವ  ಚೆನ್ನೈ ತಂಡ ಗೆಲುವಿನೊಂದಿಗೆ ಟೂರ್ನಿಗೆ  ವಿದಾಯ ಹೇಳಲು ಪಣ ತೊಟ್ಟಿದೆ. ಹೀಗಾಗಿ  ರಾಜಸ್ಥಾನ  ತಂಡ ಕಠಿಣ ಸವಾಲನ್ನು ಎದುರಿಸಲಿದೆ.

ಕಳೆದ ಕೆಲವು ಪಂದ್ಯಗಳಿಂದ ವಿಫಲರಾಗಿರುವ  ಜೋಸ್ ಬಟ್ಲರ್  ಈ ಪಂದ್ಯದ ಮೂಲಕ ಮತ್ತೆ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.  3 ಶತಕ 3 ಅರ್ಧ ಶತಕ ನೆರೆವಿನಿಂದ ಬಟ್ಲರ್ 627 ರನ್ ಕಲೆ ಹಾಕಿದ್ದಾರೆ.  ಬಟ್ಲರ್ ಉತ್ತಮ ಆರಂಭ ಕೊಟ್ಟಿದ್ದರಿಂದ ರಾಜಸ್ಥಾನ ತಂಡ ಯಶಸ್ಸು  ಕಂಡಿತು.

ಚೆನ್ನೈ ವೇಗಿಗಳಾದ  ಮುಖಶ್ ಚೌಧರಿ, ಸಿಮ್ರಾನ್‍ಜೀತ್ ಸಿಂಗ್, ಹಾಗೂ ಬೇಬಿ ಮಲಿಂಗಾ ಖ್ಯಾತಿಯ ಮತೀಶಾ ಪಾತಿರಾಣ ಅವರುಗಳಿಂದ ರಾಜಸ್ಥಾನ ಬ್ಯಾಟರ್‍ಗಳು ಕಠಿಣ ಸವಾಲು ಎದುರಿಸಲಿದ್ದಾರೆ.

ಇನ್ನು ಬೌಲಿಂಗ್ ವಿಭಾಗ  ಟೂರ್ನಿಯಲ್ಲಿ  ಅತ್ಯುತ್ತಮ ಬೌಲಿಂಗ್ ವಿಭಗಗಳಲ್ಲಿ ಒಂದಾಗಿದೆ. ಅಶ್ವಿನ್  (10 ವಿಕೆಟ್) ಹಾಗೂ ಚಹಾಲ್ ಈ ಇಬ್ಬರು ಅತ್ಯುತ್ತಮ ಸ್ಪಿನ್ನರ್‍ಗಳಾಗಿದ್ದಾರೆ.  ಯಜ್ವಿಂದರ್ ಚಹಲ್ 24 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

ಪ್ರಸಿದ್ಧ ಕೃಷ್ಣ  (15 ವಿಕೆಟ್) ಟ್ರೆಂಟ್ ಬೌಲ್ಟ್  (12 ವಿಕೆಟ್) ಅಗ್ರ ಬ್ಯಾಟರ್‍ಗಳನ್ನು ಕಟ್ಟಿ ಹಾಕುವ ತಾಕತ್ತು ಹೊಂದಿದ್ದಾರೆ.

ಚೆನ್ನೈ ಕಳಪೆ ಆಟಕ್ಕೆ ಬ್ಯಾಟಿಂಗ್ ಕಾರಣ

ಚೆನ್ನೈ  ತಂಡ  ಟೂರ್ನಿಯಲ್ಲಿ  ಕಳಪೆ ಪ್ರದರ್ಶನ ನೀಡಲು ಕಾರಣವಾಗಿದ್ದು  ಬ್ಯಾಟಿಂಗ್  ವೈಫಲ್ಯ. ಋತುರಾಜ್ ಗಾಯಕ್ವಡ್ ಆರಂಭದಲ್ಲಿ  ವೈಫಲ್ಯ ಅನುಭವಿಸಿ ನಂತರ  ಒಳ್ಳೆಯ ಪ್ರದರ್ಶನ ನೀಡಿ  366 ರನ್ ಗಳಿಸಿದ್ದಾರೆ.  ಡೆವೊನ್ ಕಾನ್ವೆ 236 ರನ್ ಗಳಿಸಿದ್ದಾರೆ. ಧೋನಿ 206, ಅಂಬಾಟಿ ರಾಯ್ಡು 271, ರಾಬಿನ್ ಉತ್ತಪ್ಪ 230 ರನ್ ಕಲೆ ಹಾಕಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ  ಮುಖೇಶ್ (16 ವಿಕೆಟ್), ಸಿಮರ್ (3 ವಿಕೆಟ್), ಸ್ಪಿನ್ನರ್ ಮಹೇಶ್ ತೀಕ್ಷ್ಣ (12 ವಿಕೆಟ್) ಮ್ಯಾಚ್ ವಿನ್ನರ್‍ಗಳಾಗಿಲ್ಲ.

ಒಟ್ಟಿನಲ್ಲಿ  ರಾಜಸ್ಥಾನ ರಾಯಲ್ಸ್  ಚೆನ್ನೈ ತಂಡದ ಯುವ ಆಟಗಾರರಿಂದ ಕಠಿಣ ಸವಾಲು ಎದುರಿಸುವುದು ನಿಶ್ಚಿತವಾಗಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್ 

ರಾಜಸ್ಥಾನ ರಾಯಲ್ಸ್‍:  ಯಶಸ್ವಿ ಜೈಸ್ವಾಲ್,  ಜೋಸ್ ಬಟ್ಲರ್,  ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್‍ಕೀಪರ್), ದೇವದತ್ ಪಡಿಕಲ್, ರಿಯಾನ್ ಪರಾಗ್, ಜೇಮ್ಸ್ ನಿಶಾಮ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್‍, ಪ್ರಸಿದ್ಧ ಕೃಷ್ಣ, ಯಜ್ವಿಂದರ್ ಚಾಹಲ್, ಒಬೆಡ್ ಮೆಕ್‍ ಕೊಯೆ. 

ಚೆನ್ನೈ ತಂಡ:  ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಮೊಯಿನ್ ಅಲಿ, ನಾರಾಯಣ ಜಗದೀಶನ್, ಶಿವಂ ದುಬೆ, ಎಂ.ಎಸ್.` ಧೋನಿ, ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್‍ಜೀತ್ ಸಿಂಗ್, ಮತೀಶಾ ಪತಿರಣ, ಮುಕೇಶ್ ಚೌಧರಿ. 

 

 

 

- Advertisement -

Latest Posts

Don't Miss