ಬೆಂಗಳೂರು: ವಿಕೆಟ್ ಕೀಪರ್ ಲುವಿನಿತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದರಿಂದ ಆರ್‍ಸಿಬಿ ಫ್ರಾಂಚೈಸಿ ದೇಸಿ ಆಟಗಾರ ರಜತ್ ಪಟಿದಾರ್‍ಗೆ ಮಣೆ ಹಾಕಿದೆ.
ಮಧ್ಯಪ್ರದೇಶದ ರಜತ್ ಪಟಿದಾರ್ 31 ಟಿ20 ಪಂದ್ಯ ಆಡಿದ್ದು 7 ಅ`ರ್À ಶತಕ ಸಿಡಿಸಿದ್ದು 861 ರನ್ ಕಲೆ ಹಾಕಿದ್ದಾರೆ. ಈಗಾಗಲೇ ರಜತ್ ಈ ಹಿಂದೆ ನಾಲ್ಕು ಬಾರಿ ಆರ್‍ಸಿಬಿ ಪರ ಆಡಿದ್ದು ಈ ಬಾರಿ 20 ಲಕ್ಷ ರೂ.ಗೆ ಆಡಲಿದ್ದಾರೆ. ಹರಾಜಿನಲ್ಲಿ 20 ಲಕ್ಷ ರೂ.ಗೆ ಖರೀದಿಯಾಗಿದ್ದ ಕನ್ನಡಿಗ ಲುವಿನಿತ್ ಸಿಸೋಡಿಯಾ ಚೊಚ್ಚಲ ಪಂದ್ಯ ಆಡಬೇಕಿತ್ತು.
ರಜತ್ ಪಟಿದಾರ್ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ್ದಾರೆ. 39 ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 40.43 ಸರಾಸರಿಯಲ್ಲಿ ಏಳು ಶತಕ ಮತ್ತು 14 ಅರ್ಧಶತಕ ಸಿಡಿಸಿ ಒಟ್ಟು 2588 ರನ್ ಕಲೆ ಹಾಕಿದ್ದಾರೆ.
ರಜತ್ ಪಟಿದಾರ್ ಕಳೆದ ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಆಡಿದ್ದರು. ಟಾಪ್ ಆರ್ಡರ್‍ನಲ್ಲಿ ರನ್ ಮಳೆ ಸುರಿಸಿದ್ದರು. ಆದರೆ ಇತ್ತಿಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಅನ್‍ಸೋಲ್ಡ್ ಆಗಿದ್ದರು. ರಜತ್ ಪಟೇದಾರ್ ಮತ್ತೆ ಆರ್‍ಸಿಬಿ ಪರ ಆಡುತ್ತಿದ್ದು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೆಕಿದೆ.