Political News: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಈ ಹಿಂದಿನ ಕಳೆದ ಎರಡು ಅವಧಿಯಲ್ಲಿ ಹೇಳಿದ್ದ ಕೆಲವು ಕಾನೂನುಗಳನ್ನ ಜಾರಿಗೆ ತರ್ತಾಇದೆ. ಅದರಲ್ಲಿ 370 ಅಂದ್ರೆ ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ಮುಸ್ಲಿಂ ಮಹಿಳೆಯರಿಗಾಗಿ ತ್ರಿವಳಿತಲಾಖ್ ನಿಷೇಧ ಮಾಡಿದ್ದು ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಕಾನೂನುಗಳನ್ನ ದೇಶದಲ್ಲಿ ಜಾರಿಗೆ ತಂದಿದ್ದು, ಅದರ ಮುಂದಿನ ಭಾಗಿವಾಗಿಯೇ ಈಗ ಬಿಜೆಪಿ ಆಡಳಿತವಿರುವ ಉತ್ತರಖಂಡದಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ಇಂಪ್ಲೀಮೆಂಟ್ ಮಾಡುವ ಮೂಲಕ ಮುಂದೇ ದೇಶಾದ್ಯಂತ ಜಾರಿಯ ಮುನ್ಸೂಚನೆ ನೀಡಿದೆ..
ಯೂನಿಫಾರ್ಮ್ ಸಿವಿಲ್ ಕೋಡ್.. ನಮ್ ಕನ್ನಡದಲ್ಲಿ ಹೇಳ್ಬೇಕಾದ್ರೆ ಸಮಾನ ನಾಗರಿಕ ಕಾಯಿದೆ ಅಂತ, ಈಗಾಗ್ಲೇ ಗೋವಾ ಈ ಕಾಯಿದೆಗೆ ಒಳಪಟ್ಟಿದೆ, ಇದೀಗ ಎರಡನೇಯ ರಾಜ್ಯವಾಗಿ ಉತ್ತರಾಖಂಡ ಈ ಸಾಲಿಗೆ ಸೇರಿಕೊಳ್ತಿದೆ. ಇನ್ನೂ ನಮ್ಮ ರಾಜ್ಯದಲ್ಲೂ ಮೋದಿ ಸರ್ಕಾರದ ಕಾನೂನುಗಳನ್ನ ತಿರಸ್ಕರಿಸುವ ಸಿದ್ದರಾಮಯ್ಯ ಸರ್ಕಾರ ಈ ಹಿಂದೆ ಕೇಂದ್ರದ ಸಿಎಎ ಸೇರಿದಂತೆ ಹಲವು ಕಾನೂನುಗಳನ್ನಾ ವಿರೋಧಿಸುತ್ತಲೇ ಬಂದಿದೆ. ಆದರೆ ನಮ್ಮಲ್ಲೂ ಈ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ಬರಬಹುದಾ? ಅದನ್ನು ಈ ಸಿದ್ದರಾಮಯ್ಯ ಸರ್ಕಾರಾ ಇಂಪ್ಲೀಮೆಂಟ್ ಮಾಡ್ಕೋಬಹುದಾ? ಇದು ಜಾರಿಯಾದ್ರೆ ಏನೆಲ್ಲ ಬದಲಾವಣೆಗಳಾಗ್ತಾವೆ ಅನ್ನೋದನ್ನ ನೋಡೋದಾದ್ರೆ..
ಉತ್ತರಾಖಂಡ್ ಜಾರಿಗೆ ತಂದಿರೋ ಈ ಸಮಾನ ನಾಗರಿಕ ಕಾಯಿದೆ ಅಥವಾ ಏಕರೂಪ ನಾಗರಿಕ ಸಂಹಿತೆಯು ಹಲವು ಮಹತ್ವದ ಬದಲಾವಣೆಗಳನ್ನು ಒಳಗೊಂಡಿದೆ. ಅದರಲ್ಲಿ ಮುಖ್ಯವಾಗಿ ವೀಕ್ಷಕರೆ, ಬಹುಪತ್ನಿತ್ವ ಪದ್ದತಿಗೆ ಇದರಲ್ಲಿ ಮಾನ್ಯತೆ ನೀಡಲಾಗಿಲ್ಲ, ಅಂದ್ರೆ ಯಾವುದೇ ಒಬ್ಬ ಪುರುಷ ಅಥವಾ ಮಹಿಳೆ ಒಂದೇ ಮದುವೇ ಆಗ್ಬೇಕು.. ಇನ್ನೂ ಮದುವೆಯ ಮುಂಚೆ ಅವರು ಯಾವುದೇ ಥರದ ಸಂಬಂಧ ಹೊಂದಿರಬಾರದು. ಈ ಕಾಯಿದೆಯು ಕೇವಲ ಏಕ ಪತ್ನಿತ್ವವನ್ನು ಒತ್ತಿ ಹೇಳ್ತದೆ. ಇದಕ್ಕೆ ಸಂಬಂಧಿಸಿದಿ ಹೆಚ್ಚಿನ ವಿಚಾರಗಳನ್ನು ಕಾಯ್ದೆಯ ನಾಲ್ಕನೇ ಸೆಕ್ಷನ್‌ನಲ್ಲಿ ಹೇಳಲಾಗಿದೆ.
ಇನ್ನೂ ಈ ಕಾಯ್ದೆಯಲ್ಲಿ ಹೆಣ್ಣು ಹಾಗೂ ಗಂಡಿನ ಮದುವೆ ವಯಸ್ಸಲ್ಲಿ ಯಾವುದೇ ಚೇಂಜಸ್ ಮಾಡಿಲ್ಲ. ಮೊದಲಿನಂತೆ ಹೆಣ್ಣು 18 ಹಾಗೂ ಗಂಡು 21 ವರ್ಷಗಳಾದ್ಮೇಲೆ ಮದುವೆ ಮಾಡ್ಕೋಬಹುದಾಗಿದೆ. ಆದ್ರೆ ಇಲ್ಲಿ ಮದುವೆಯಾದ್ಮೇಲೆ ಎರಡು ತಿಂಗಳೊಳಗೆ ಸಮೀಪದ ವಿವಾಹ ನೋಂದಣಿ ಮಾಡುವ ಅಧಿಕಾರಿಗಳ ಕಚೇರಿಗೆ ಹೋಗಿ ರಿಜಿಸ್ಟರ್ ಮಾಡ್ಕೋಬೇಕು. ಒಂದ್ವೇಳೆ ತಪ್ಪಿದ್ದಲ್ಲಿ ದಂಪತಿಗಳ ಮದ್ವೆ ಮಾನ್ಯತೆ ಕಳೆದುಕೊಳ್ಳಲ್ಲ, ಆದ್ರೆ ಅವರಿಗೆ 10 ಸಾವಿರ ದಂಡ ವಿಧಿಸಲಾಗ್ತದೆ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ ನೀಡ್ಬಹುದಾಗಿದೆ. ಅಷ್ಟೇ ಅಲ್ದೇ ಹೆಚ್ಚಿನ ಸ್ಪಷ್ಟತೆ ಬಯಸೋ ಈ ಕಾಯ್ದೆಯಲ್ಲಿ ನೋಂದಣಿ ಮಾಡ್ಸೋವಾಗ ಬೇಕಾಗಿಯೇ ಗಂಡ ಹಾಗೂ ಹೆಂಡತಿ ಇಬ್ರೂ ಸಹ ತಪ್ಪು ಮಾಹಿತಿ ನೀಡಿದ್ದು ಗೊತ್ತಾದ್ರೆ 25 ಸಾವಿರ ದಂಡನೂ ಸಹ ಕಟ್ಬೇಕಾಗುತ್ತೆ. ಇನ್ನೂ ಈ ಕಾಯ್ದೆ ಬರೋ ಮುಂಚೆನೇ ಮದುವೆ ಆದವ್ರು ಯುಸಿಸಿ ಜಾರಿಗೆ ಬಂದ 6 ತಿಂಗಳೊಳ್ಗಾಗಿ ಅಲ್ಲಿನ ಸರ್ಕಾರಕ್ಕೆ ಘೋಷಣಾ ಪತ್ರ ನೀಡ್ಬೇಕು….
ಅಲ್ದೆ ಧಾರ್ಮಿಕ ಹಕ್ಕುಗಳನ್ನು ರಕ್ಷಣೆ ಮಾಡೋದರ ಬಗ್ಗೆ ಒತ್ತು ನೀಡಿರೋ ಕಾಯ್ದೆಯೂ ಎಲ್ಲ ಸಮುದಾಯ ಹಾಗೂ ಧರ್ಮದವ್ರೂ ಸಹ ತಮ್ಮ ಸಂಪ್ರದಾಯಗಳ ಪ್ರಕಾರ ಮದುವೆ ಮಾಡ್ಕೋಳ್ಳೊಕೆ ಇಲ್ಲಿ ಅವಕಾಶ ನೀಡ್ಲಾಗ್ತಿದೆ. ಇನ್ನೂ ಸುಗಮ ದಾಂಪತ್ಯಕ್ಕೆ ಒತ್ತು ನೀಡಿರೋ ಯುಸಿಸಿಯು ಅದು ಜಾರಿಗೆ ಬಂದಿರೋ ಬಳಿಕ ಏನಾದ್ರೂ ವಿವಾಹ ವಿಚ್ಚೇದನಗಳೂ ಆಗಿದ್ರೂ ಸಹ ಅದನ್ನು ಸಂಬಂಧಪಟ್ವವ್ರು ಸರ್ಕಾರದ ಗಮನಕ್ಕೆ ತರ್ಬೇಕಾಗ್ತದೆ.
ಈ ಏಕರೂಪ ನಾಗರಿಕ ಸಂಹಿತೆಯು ಲಿವ್ ಇನ್ ರಿಲೇಷ್‌ಶಿಫ್ ಅಂದ್ರೆ ಗಂಡು ಅಥವಾ ಹೆಣ್ಣು ಸಹ ಜೀವ್ನಾ ನಡೆಸೋದು ಎಂದರ್ಥ.. ಎಸ್ ಯುಸಿಸಿಯು ಲಿವ್ ಇನ್ ರಿಲೇಷನ್‌ಶಿಫ್ ಬಗ್ಗೆಯೂ ಪ್ರಸ್ತಾಪಿಸಲಾಗಿದ್ದು, ಅದು ಉತ್ತರಾಖಂಡದವ್ರೇ ಆಗ್ಲಿ ಅಥವಾ ಬೇರೆ ರಾಜ್ಯದವ್ರೇ ಆಗ್ಲಿ ಅವ್ರು ತಮ್ಮ ಸಹ ಜೀವನ ಆರಂಭಿಸಿದ 1 ತಿಂಗ್ಳಲ್ಲಿ ಅದನ್ನೂ ಕೂಡ ರಿಜಿಸ್ಟರ್ ಮಾಡ್ಸ್ ಬೇಕಾಗುತ್ತೆ. ನೂತನ ಕಾನೂನಿನ ಸೆಕ್ಷನ್ 378 ನಲ್ಲಿ ಬರೋ 381 ಅಂದ್ರೆ ಈ ಸೆಕ್ಷನ್ ಅಡಿಯಲ್ಲಿ ಇಬ್ರೂ ಅವ್ರ ಹೇಳಿಕೆಯನ್ನು ನೋಂದಣಿ ಅಧಿಕಾರಿಗಳ ಬಳಿ ದಾಖಲು ಮಾಡ್ಬೇಕಾಗುತ್ತೆ. ಇನ್ನೂ ಉತ್ತರಾಖಂಡ್‌ಗೆ ಸಂಬಂಧಿಸಿದ ಯಾರೇ ಆಗ್ಲಿ ಬೇರೆ ರಾಜ್ಯದಲ್ಲಿ ನೆಲೆಸಿದ್ರೂ ಸಹ ಈ ರೀತಿಯ ರಿಲೇಷನ್‌ನಲ್ಲಿ ಇದ್ರೆ ಅವ್ರೂ ಕೂಡ ತಮ್ಮ ಸಂಬಂಧದ ಬಗ್ಗೆ ಹತ್ತಿರದ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲು ಮಾಡ್ಬೇಕಾಗುತ್ತೆ. ಇಷ್ಟೇ ಅಲ್ದೆ ಒಂದ್ವೇಳೆ ಈ ಸಂಬಂಧ ಕೂಡ ಮುರಿದೋದ್ರೆ ರಿಜಿಸ್ಟರ್ ಆಫೀಸಿನ ಅಧಿಕಾರಿಗಳ ಗಮನಕ್ಕೆ ತರ್ಬೇಕಾಗುತ್ತೆ. ಈ ರೀತಿಯ ಸಂಬಂಧಗಳಲ್ಲಿ ಅಪ್ರಾಪ್ತರು ಕಂಡು ಬಂದ್ರೆ ಕೂಡ್ಲೇ ಅಧಿಕಾರಿಗಳು ಸಂಬಂಧಿಸಿದವ್ರ ಪೋಷಕರಿಗೆ ತಿಳಿಸಬೇಕಾಗುತ್ತೆ.
ಅಲ್ದೆ ಇದೇ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಂಡಿರೋ ಕಾಯ್ದೆಯು ಅಪ್ರಾಪ್ತರು ಮದುವೆಯಾಗಿದ್ದಾರಾ? ಅಥ್ವಾ ಮತ್ತಾವುದೋ ರಿಲೇಷನ್‌ನಲ್ಲಿ ಇದ್ದಾರಾ ಅನ್ನೊದನ್ನ 30 ದಿನಗಳಲ್ಲಿ ಎನ್ಕ್‌ವರಿ ಮಾಡ್ತಾರೆ. ಇದಾದ ಬಳಿಕ ಲಿವ್‌ಇನ್ ರಿಲೇಷನ್‌ನಲ್ಲಿ ಪಾಲಿಸ್ಬೇಕಾಗಿದ್ದ ರೂಲ್ಸ್ ಬ್ರೇಕ್ ಮಾಡಿದ್ರೆ ಅಂತವರ ನೋಂದಣಿಯನ್ನಾ ಕ್ಯಾನ್ಸಲ್ ಮಾಡಲಾಗತ್ತೆ. ಒಂದ್ವೇಳೆ ಈ ರೀತಿಯ ಸಂಬಂಧದಲ್ಲಿ ಗಂಡು ಹೆಣ್ಣಿನ ಕೈ ಬಿಟ್ರೆ ಆಗ ಆ ಹೆಣ್ಣಿಗೆ ಪರಿಹಾರವನ್ನು ಕೇಳುವ ಅಧಿಕಾರಾನೂ ಈ ಕಾಯ್ದೆ ನೀಡಿದೆ. ಇನ್ನೂ ಮದುವೇನಾ ಯಾವ ತರ ರಿಜಿಸ್ಟರ್ ಮಾಡ್ಬೇಕಾಗುತ್ತಲ್ಲಾ ಅದೇ ರೀತಿ ಈ ಲಿವ್‌ಇನ್ ರಿಲೇಷನ್ ಅನ್ನೂ ಸಹ ನೋಂದಣಿ ಮಾಡಿಸಬೇಕು, ತಪ್ಪಿದ್ರೆ ಇಲ್ಲೂ ಸಹ ಜೋಡಿಗೆ ಅಂದ್ರೆ ಗರಿಷ್ಠವಾಗಿ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗ್ತದೆ. ಅಲ್ದೆ 10 ಸಾವಿರ ದಂಡಾನೂ ಕಟ್ಬೇಕಾಗುತ್ತೆ, ಒಂದ್ವೇಳೆ ಎರಡನ್ನೂ ವಿಧಿಸುವ ಅಧಿಕಾರದ ಬಗ್ಗೆನೂ ಕಾಯ್ದೆಯಲ್ಲಿ ಉಲ್ಲೇಖಿಲಾಗಿದೆ. ಇಲ್ಲಿ ಏನೂ ಈ ಸಹ ಜೀವನದ ಬಗ್ಗೆ ನೋಂದಣಿ ಮಾಡುವ ವೇಳೆಯಲ್ಲಿ ಇಬ್ರೂ ಕೂಡ ಸುಳ್ಳು ಮಾಹಿತಿ ನೀಡಿರೋದು ಕಂಡುಬಂದ್ರೆ ಮೂರು ತಿಂಗಳು ಜೈಲು ಶಿಕ್ಷೆ ಅಥ್ವಾ 25 ಸಾವಿರ ದಂಡಾನೂ ವಿಧಿಸಬಹುದು, ಅದೃಷ್ಟ ಕೈ ಕೊಟ್ಟಿದ್ರೆ ಈ ಎರಡನ್ನೂ ಅನುಭವಿಸ್ಬೇಕಾಗುತ್ತೆ. ಅಲ್ದೆ ನೋಂದಣಾಧಿಕಾರಿ ನೋಟಿಸ್ ಕೊಟ್ರೂ ಅದನ್ನ ನಿರ್ಲಕ್ಷ್ಯ ಮಾಡಿ ಹಾಗೇ ಬಿಟ್ರೆ ಆಗ್ಲೂ ಈ ಹಿಂದೆ ಹೇಳಿದ ಎರಡೂ ಶಿಕ್ಷೆಗಳನ್ನು ವಿಧಿಸಲು ಯುಸಿಸಿಯಲ್ಲಿ ಅವಕಾಶವಿದೆ.
ಇಷ್ಟೇ ಅಲ್ದೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ಪ್ರತಿಪಾದಿಸೋ ಈ ಕಾಯ್ದೆಯು ಪತಿ, ಪತ್ನಿ, ಮಕ್ಖಳು ಸೇರಿದಂತೆ ಪೋಷಕರಿಗೂ ಆಸ್ತಿಯಲ್ಲಿ ಒಂದೇ ರೀತಿಯ ಸಮನಾದ ಹಕ್ಕನ್ನು ನೀಡ್ಲಾಗಿದೆ. ಒಂದ್ವೇಳೆ ಆಸ್ತಿ ಮಾಲೀಕರಾದವ್ರು ಮರಣ ಹೊಂದಿದ್ರೆ, ಅವರಿಗೆ ವಾರಸುದಾರರು ಇಲ್ದೆ ಇದ್ರೆ ಆ ಆಸ್ತಿಗೆ ಸಂಬಂಧಪಟ್ಟವ್ರ ಅಂದ್ರೆ ಹತ್ತಿರದ ಬಂಧುಗಳು ಅದನ್ನು ಸಮಾನವಾಗಿ ಹಂಚಿಕೊಳ್ಳೊಕೆ ಇದು ಅವಕಾಶ ಮಾಡಿಕೊಡ್ತದೆ.
ಕೆಲವೊಂದು ಸಮಯದಲ್ಲಿ ವಿವಾಹದ ಮಾನ್ಯತೆ ರದ್ದತಿಗಾಗಿ ಕೋರಿ ಕೋರ್ಟ್‌ನಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ ತೀರ್ಪು ಬರೋವರೆಗೂ ಈ ವೇಳೆಯಲ್ಲಿ ಮದುವೆಯಿಂದ ಅಥ್ವಾ ಲಿವ್‌ಇನ್ ರಿಲೇಷನ್‌ಶಿಫ್‌ನಿಂದ ಜನಿಸಿದ ಮಕ್ಕಳಿಗೆ ಕಾನೂನಿನ ಮಾನ್ಯತೆಯನ್ನ ಈ ಕಾಯ್ದೆಯಲ್ಲಿ ನೀಡಲಾಗ್ತಿದೆ.
ವೀಕ್ಷಕರೇ ಈ ಯೂನಿಫಾರ್ಮ್ ಸಿವಿಲ್ ಕೋಡ್‌ನಲ್ಲಿಏನಿದ ಯಾವೆಲ್ಲ ಅಂಶಗಳಿವೆ ಅನ್ನೋದನ್ನ ನೋಡಿದ್ವಿ. ಇನ್ನೂ ಉತ್ತರಾಖಂಡ ಸೇರಿದಂತಡ ಹಲವು ರಾಜ್ಯಗಳಲ್ಲಿ ಇದರ ಜಾರಿಯ ಕುರಿತು ವಿರೋಧಗಳು ವ್ಯಕ್ತವಾಗ್ತಿವೆ. ಈ ಕಾಯ್ದೆಯಲ್ಲಿನ ಅಂಶಗಳನ್ನ ನೋಡ್ದಾಗಾ, ಪುರುಷ ಹಾಗೂ ಮಹಿಳೆಯ ವೈಯಕ್ತಿಕ ಜೀವ್ನಕ್ಕೆ ಧಕ್ಕೆಯಾಗ್ತದೆ, ಸಹ ಜೀವನ ನೋಂದಣಿ ಮಾಡ್ಸೋ ವಿಚಾರದಲ್ಲೂ ಆಕ್ಷೇಪಗಳೂ ವ್ಯಕ್ತವಾಗ್ತಿವೆ. ವಿವಿಧತೆಯಲ್ಲಿ ಏಕತೆಯ ಜೊತೆಗೆ ಬಹು ಸಂಸ್ಕೃತಿಯ ದೇಶದಲ್ಲಿ ಇದರ ಜಾರಿ ಸಮಂಜಸವಲ್ಲ ಅನ್ನೋ ಅನೇಕ ಅಭಿಪ್ರಾಯಗಳು ಸಹ ಇದ್ರ ವಿರುದ್ಧ ಕೇಳಿ ಬರ್ತಿವೆ. ವೀಕ್ಷಕರೇ ನಾವಿಲ್ಲಿ ಮುಖ್ಯವಾಗಿ ಗಮನಿಸ್ಲೇಬೇಕಾದ ವಿಚಾರವೆಂದ್ರೆ ಈ ಕಾಯ್ದೆ ಜಾರಿಯಾದ್ರೆ ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ವೈಯಕ್ತಿಕ ಸಂಪ್ರದಾಯಗಳಿಗೂ ಬ್ರೇಕ್ ಬೀಳಲಿದೆ. ಪ್ರಸ್ತುತ ಇಸ್ಲಾಂ ಧರ್ಮದಲ್ಲಿರುವ ನಿಖಾ,ಹಲಾಲ್ ಹಾಗೂ ಇದ್ದತ್ ಇವುಗಳ ಆಚರಣೆಗೆ ಇದು ಇತಿಶ್ರೀ ಹಾಡಲಿದೆ. ಯುಸಿಸಿಗೆ ಮುಸಲ್ಮಾನರ ವಿರೋಧ ಹಿನ್ನೆಲೆ, ಮುಸ್ಲಿಂ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿದೆ. ಅದರಲ್ಲೂ ಬಿಜೆಪಿ ವಿರುದ್ಧದ ಕ್ಷೇತ್ರಗಳಲ್ಲಿ ಶೇ 98 ರಷ್ಟು ಮತಗಳು ಕಾಂಗ್ರೆಸ್ ಪರವಾಗಿವೆ. ರಾಜಕೀಯ ಲಾಭದ ಲೆಕ್ಕಾಚಾರ ಹಿನ್ನೆಲೆ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಪರ ನಿಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಯುಸಿಸಿ ಜಾರಿಗೆ ವಿರೋಧಿಸುತ್ತಿದ್ದಾರೆ.
ಮತ್ತೊಂದೆಡೆ.. ಯಾವಾಗ 2019ರಲ್ಲಿ ಕೇಂದ್ರ ಸರ್ಕಾರ ಇದರ ಬಗ್ಗೆ ಘೋಷಿಸಿತೋ ಆಗಿನಿಂದ್ಲೂ ಸಹ ಇದಕ್ಕೆ ದೇಶಾದ್ಯಂತ ಪರ-ವಿರೋಧದ ಮಾತುಗಳು ಜೋರಾಗಿದ್ದವು. ಕಾಯ್ದೆ ವಿರೋಧಿಸುವವರು ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತೆ, ಭಾರತದಂತಹ ದೇಶದಲ್ಲಿ ಇದರ ಜಾರಿಗೆ ಅವಕಾಶ ನೀಡೊಲ್ಲ ಎಂದು ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಇದನ್ನು ವಿರೋಧಿಸಿದ್ದವು. ಅಷ್ಟೇ ಅಲ್ದೆ ನಮ್ಮ ಕರ್ನಾಟಕ ರಾಜ್ದಲ್ಲೂ ಈ ಹಿಂದೆ ಮೋದಿ ಸರ್ಕಾರದ ನಿರ್ಧಾರಗಳನ್ನ ಕಟುವಾಗಿ ಟೀಕಿಸುತ್ತಾ, ಕೇಂದ್ರದ ನೀತಿಗಳನ್ನು ವಿರೋಧಿಸುತ್ತಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನು ಸುತಾರಾಂ ಒಪ್ಪೋ ಮಾತೇ ಇಲ್ಲ. ಯಾಕಂದ್ರೆ ಈ ಮೊದಲಿನಿಂದ್ಲೂ ನಾವು ರಾಜ್ಯ ಕಾಂಗ್ರೆಸ್ ಪಕ್ಷವನ್ನಾ ಅಥ್ವಾ ಸರ್ಕಾರಾನಾ ಗಮನಿಸಿದಾಗ, ಬಹುತೇಕ ಮೋದಿ ಸರ್ಕಾರದ ನಿಲುವುಗಳಿಗೆ ಆಗ್ಲೇ ಗೇಟ್ ಪಾಸ್ ನೀಡೀರೋ ಉದಾಹರಣೆಗಳಿವೆ. ಅದ್ರಲ್ಲಿ ಸಿಎಎ ವಿರುದ್ದಧ ಹೋರಾಟ ಹಾಗೂ ಇತ್ತಿಚೆಗೆ ರದ್ದುಗೊಳಿಸಿರೋ ರಾಷ್ಟ್ರೀಯ ಶಿಕ್ಷಣ ನೀತಿ ಹೀಗೆ ಸಿದ್ದರಾಮಯ್ಯ ಸರ್ಕಾರ ತನ್ನದೇ ಆದ ಹಾದಿಯಲ್ಲಿ ಸಾಗ್ತಿದೆ. ಇನ್ನೂ ಈ ವಿಚಾರದಲ್ಲೂ ಸಹ ರಾಜ್ಯ ಸರ್ಕಾರ ಅದೇ ಗಟ್ಟಿ ನಿಲುವನ್ನ ಹೊಂದಿದ್ದು, ಈ ಯುಸಿಸಿಯನ್ನು ಕರುನಾಡಲ್ಲಿ ಅಳವಡಿಕೆಗೆ ಸಿಎಂ ಸಿದ್ದರಾಮಯ್ಯ ಮುಂದೆ ಬರಲು ಸಾಧ್ಯವಿಲ್ಲ ಅಂತಲೇ ಹೇಳ್ಬೇಕಾಗುತ್ತೆ.. ಬಿಜೆಪಿ ಹಾಗೂ ಮೋದಿ ವಿರುದ್ಧದ ನಿಲುವಿರುವ ಕಾಂಗ್ರೆಸ್ ಸೇರಿದಂತೆ ಡಿಎಂಕೆ ಎಡಪಕ್ಷಗಳು ಒಳಗೊಂಡ ಐಎನ್‌ಡಿಎ ಮೈತ್ರಿಕೂಟ ಯುಸಿಸಿಯನ್ನ ಜಾರಿ ಮಾಡಲು ಬಿಡುವುದಿಲ್ಲ.
ಇನ್ನೂ ಯುಸಿಸಿ ಪರವಾಗಿ ಬಹುತೇಕ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ರಾಜ್ಯಗಳು ಇದನ್ನು ಜಾರಿ ಮಾಡಲು ಯಾವುದೇ ವಿರೋಧಗಳಿಲ್ಲ. ಅಲ್ದೆ ಈಗಾಗ್ಲೇ ಚಿಕ್ಕ ರಾಜ್ಯ ಗೋವಾದಲ್ಲಿ ಯುಸಿಸಿಯ ಮಾದರಿಯಲ್ಲೇ ರೂಲ್ಸ್ ಚಾಲ್ತಿಯಲ್ಲಿವೆ. ಇದೀಗ ಎರಡನೇ ರಾಜ್ಯವಾಗಿ ಉತ್ತರಾಖಂಡ ಇದರ ಅಳವಡಿಸಿಕೊಳ್ಳುವ ಮೂಲಕ ಮೋದಿ ಸರ್ಕಾರದ ಕಾಯ್ದೆಗೆ ಬಹು ಪರಾಕ್ ಹೇಳಿದೆ. ಇದಾದ ಬಳಿಕ ಮೂರನೇಯ ರಾಜ್ಯದ ಸಾಲಿಗೆ ಗುಜರಾತ ಹಾಗೂ ನಾಲ್ಕನೇ ರಾಜ್ಯವಾಗಿ ಅಸ್ಸಾಂ ರಾಜ್ಯಗಳು ಈ ಯೂನಿಫಾರ್ಮ ಸಿವಿಲ್ ಕೋಡ್ ಅಳವಡಿಸಿಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿದೆ.
ಫೈನಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಬಹುತೇಕ ಕಾಯ್ದೆಗಳನ್ನೆಲ್ಲ ಬಿಜೆಪಿ ಆಡಳಿತವಿರೋ ರಾಜ್ಯಗಳೇ ಜಾರಿಗೆ ತಂದಿರೋದು ಗಮನಾರ್ಹವಾಗ್ತದೆ. ಈ ಮೊದ್ಲು ಹೇಳಿದಂತೆಯೇ ಕಾಂಗ್ರೆಸ್ ಮೋದಿ ಸರ್ಕಾರ ಜಾರಿಗೆ ತರುತ್ತಿರುವ ಬಹುತೇಕ ಕಾಯ್ದೆಗಳನ್ನಾ ವಿರೋಧಿಸುತ್ಲೇ ಬರ್ತಿದೆ. ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆಯನ್ನು ಖಂಡಿಸಿರುವುದಲ್ದೆ ಏಕರೂಪ ನಾಗರಿಕ ಸಂಹಿತೆಯನ್ನೂ ಸಹ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇರದೇ ಇರುವುದು ಕಂಡು ಬರ್ತಿದೆ. ಯಾಕೆಂದ್ರೆ ಎನ್‌ಇಪಿ ಸೇರಿದಂತೆ ಎಲ್ಲ ಕಾನೂನುಗಳನ್ನು ಜಾರಿಗೆ ತರಲು ಅಡ್ಡಿಪಡಿಸಿದ್ದ ಕಾಂಗ್ರೆಸ್ ಇದು ಸಂವಿಧಾನ ಮೇಲೆ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ನಡೆಸುತ್ತಿರುವ ದಾಳಿ ಅಂತಲೇ ಬಣ್ಣಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಮೋದಿ ಸರ್ಕಾರ ಹಂತ ಹಂತವಾಗಿ ಜಾರಿಗೆ ತರಲು ಮುಂದಾಗಿದೆ.