ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ. ಇದ್ಯಾವುದೂ ಇಲ್ಲದೇ, ಬರೀ ನಾಣ್ಯವಷ್ಟೇ ಇದ್ದರೆ, ಅದನ್ನ ತೆಗೆದುಕೊಳ್ಳಬಹುದು. ಯಾಕಂದ್ರೆ ಕೆಲವರ ಪ್ರಕಾರ, ಹೀಗೆ ರಸ್ತೆಯಲ್ಲಿ ಸಿಗುವ ನಾಣ್ಯ ಕೆಲವರ ಲಕ್ ಬದಲಾಯಿಸಿ ಬಿಡತ್ತೆ. ಒಂದು ರೂಪಾಯಿ ನಾಣ್ಯ ಸಿಕ್ಕರೂ, ನೀವು ಆ ಲಕ್ಕಿ ಕಾಯಿನ್‌ನಿಂದ ಒಂದು ಲಕ್ಷ ಹಣ ಪಡೆಯುವ ಸಾಧ್ಯತೆಯೂ ಇರುತ್ತದೆ. ಅಥವಾ ನೀವು ಯಾವುದಾರೂ ಉತ್ತಮ ಕೆಲಸಕ್ಕೆ ಹೋಗುತ್ತಿದ್ದಲ್ಲಿ, ಆ ಕೆಲಸ ಪೂರ್ಣವಾಗುವ ಎಲ್ಲ ಸಾಧ್ಯತೆ ಇದೆ ಎಂದು ಇದರ ಅರ್ಥ.
ಅಲ್ಲದೇ, ನೀವು ಉದ್ಯಮ ಆರಂಭಿಸಲು ಶುರು ಮಾಡುವುದಿದ್ದರೆ, ನಿಮಗೆ ರಸ್ತೆಯಲ್ಲಿ ನಾಣ್ಯ ಸಿಕ್ಕರೆ, ಅದು ಶುಭ ಸೂಚನೆ ಎಂದರ್ಥ. ಯಾಕಂದ್ರೆ ಹೀಗೆ ಸಿಗುವ ದುಡ್ಡನ್ನು ಪೂರ್ವಜರ ಆಶೀರ್ವಾದ ಎಂದು ನಂಬಲಾಗತ್ತೆ. ಹೀಗಾಗಿ ರಸ್ತೆಯಲ್ಲಿ ಸಿಗುವ ನಾಣ್ಯವನ್ನ ಮನೆಗೆ ತಂದು ಅರಿಷಿನ ನೀರಿನಲ್ಲಿ ತೊಳೆದು, ಅದನ್ನ ಜೋಪಾನವಾಗಿ ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ನೋಟು ಸಿಕ್ಕರೆ, ಅದಕ್ಕೆ ಕಲೆಯಾಗದಂತೆ ಕೊಂಚ ನೀರನ್ನು ಚುಮುಕಿಸಿ, ನಂತರ ನಿಮ್ಮ ಬಳಿ ಇರಿಸಿಕೊಳ್ಳಿ.
ಇನ್ನು ನಿಮಗೆ ನೋಟಿನ ಗಂಟು, ಅಥವಾ ಪರ್ಸ್ ಸಿಕ್ಕಲ್ಲಿ, ಅದು ಯಾರಿಗೆ ಸಂಬಂಧ ಪಟ್ಟಿದೆ ಎಂದು ಗುರುತಿಸಿ, ವಾಪಸ್ ನೀಡಿ. ಯಾಕಂದ್ರೆ ಅಷ್ಟೆಲ್ಲಾ ದುಡ್ಡು ಕಳೆದುಕೊಂಡವನು, ಅದನ್ನ ತೆಗೆದುಕೊಂಡವನಿಗೆ ಶಾಪ ಹಾಕದೇ ಬಿಡಲಾರ. ಹಾಗಾಗಿ ಕಂಡವರ ಶಾಪ ತಗಲುವ ಮೊದಲು, ಅವರ ಹಣವನ್ನು ಅವರಿಗೆ ತಲುಪಿಸುವುದು ಒಳ್ಳೆಯದು.