Saturday, July 27, 2024

Latest Posts

ಮಧ್ಯಾಹ್ನದ ಊಟದ ಬಳಿಕ ನಿದ್ದೆ ಮಾಡುವುದು ಸರಿಯೋ..? ತಪ್ಪೋ..?

- Advertisement -

Health Tips: ನಿದ್ರೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೆಲವರಿಗೆ ಪ್ರತಿದಿನ ಮಧ್ಯಾಹ್ನ, ಬೆಳಿಗ್ಗೆ , ರಾತ್ರಿ ಮೂರು ಹೊತ್ತು ನಿದ್ರಿಸಲು ಸಮಯ ಸಿಗುತ್ತದೆ. ಇನ್ನು ಕೆಲವರಿಗೆ ರವಿವಾರವೊಂದೆ ಮಧ್ಯಾಹ್ನ ರೆಸ್ಟ್ ಮಾಡಲು ಸಮಯ ಸಿಗುತ್ತದೆ. ಆದರೆ ಹೀಗೆ ಮಧ್ಯಾಹ್ನ ಊಟವಾದ ಬಳಿಕ, ನಿದ್ರಿಸುವುದು ಸರಿಯೋ , ತಪ್ಪೋ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ಮಾತನಾಡಿದ್ದು, ಮಧ್ಯಾಹ್ನ ಊಟವಾದ ಬಳಿಕ ನಿದ್ರಿಸುವುದು ತಪ್ಪಲ್ಲ. ಆದರೆ ಅರ್ಧ ಗಂಟೆಗೂ ಮೀರಿ ನಿದ್ರಿಸಬಾರದು ಅಷ್ಟೇ. ಇನ್ನು ಆಕಳಿಕೆ ಬರುವುದು ಯಾಕೆ ಅಂತಲೂ ವೈದ್ಯರು ವಿವರಿಸಿದ್ದಾರೆ. ಮೆದುಳಿಕೆ ಆಕ್ಸಿಜನ್ ಸಾಕಾಗದೇ ಇದ್ದಾಗ, ಆಕಳಿಕೆ ಬರುತ್ತದೆ. ಮತ್ತು ಮೆದುಳಿಗೆ ಆಕ್ಸಿಜನ್ ಏಕೆ ಸಾಕಾಗುವುದಿಲ್ಲವೆಂದರೆ, ನಾವು ತಿಂದ ಆಹಾರ ಹೆಚ್ಚಾದಾಗ, ಮೆದುಳಿಕೆ ಆಕ್ಸಿಜನ್ ಸಾಕಾಗುವುದಿಲ್ಲ.

ನಾವು ಆಹಾರ ಸೇವಿಸಿದಾಗ, ಅದು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ. ಈ ಕ್ರಿಯೆ ಸರಿಯಾಗಿ, ಬೇಗ ಆಗಬೇಕು ಅಂದ್ರೆ, ನಾವು ತಿನ್ನುವ ಆಹಾರವೂ ಮಿತವಾಗಬೇಕು. ಆದರೆ ನಾವು ಹೊಟ್ಟೆ ತುಂಬ ಉಂಡಾಗ, ಜೀರ್ಣಕ್ರಿಯೆಯೂ  ನಿಧಾನಗತಿಯಲ್ಲಿರುತ್ತದೆ. ಹಾಗಾಗಿ ಮೆದುಳಿಗೆ ಆಕ್ಸಿಜನ್ ಸಾಕಾಗದೇ ಆಕಳಿಕೆ ಬರುತ್ತದೆ. ಬಳಿಕ ನಿದ್ರೆ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss