Health Tips: ಆರೋಗ್ಯವಂತ ಮನುಷ್ಯನಿಗೆ 8 ಗಂಟೆ ನಿದ್ರೆ ಬೇಕು ಅಂತಾ ಹೇಳುತ್ತಾರೆ. ಆದರೆ 8 ಗಂಟೆ ಪೂರ್ತಿಯಾಗಿ ನಿದ್ರಿಸದಿದ್ದವರು ಕೂಡ, ಆರೋಗ್ಯವಾಗಿರುತ್ತಾರೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳಿದ್ದಾರೆ ನೀವೇ ಕೇಳಿ..
ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ನಿದ್ರೆಯಲ್ಲಿ ಎರಡು ವಿಧಗಳಿರುತ್ತದೆ. ಒಂದು ಕನಸು ಬೀಳುವ ನಿದ್ರೆ ಮತ್ತು ಎರಡನೇಯದ್ದು ಕನಸು ಬೀಳದ ನಿದ್ರೆ. ಕೆಲವೊಮ್ಮೆ ನಮಗೆ ಕನಸು ಬೀಳುತ್ತದೆ. ಕೆಲವೊಮ್ಮೆ ಕನಸ್ಸು ಬೀಳದೇ ಘಾಡವಾದ ನಿದ್ರೆ ಬರುತ್ತದೆ. ಪುಟ್ಟ ಮಕ್ಕಳು 22 ಗಂಟೆ ನಿದ್ರಿಸುತ್ತಾರೆ. ಹಾಗಂತ ದೊಡ್ಡವರು 8 ಗಂಟೆಯೇ ನಿದ್ರಿಸಬೇಕು ಅಂತಿಲ್ಲ ಅಂತಾರೆ ವೈದ್ಯರು.
ನಿಮಗೆ ಎಷ್ಟು ನಿದ್ರೆ ಬರುತ್ತದೆಯೋ ಅಷ್ಟೇ ನಿದ್ರಿಸಬೇಕು. ಅದನ್ನು ಬಿಟ್ಟು ಸುಮ್ಮನೆ ನಿದ್ರೆ ಬರಲಿಲ್ಲವೆಂದು ಟೆನ್ಶನ್ ತೆಗೆದುಕೊಳ್ಳುವುದು. ಮಾತ್ರೆ ತೆಗೆದುಕೊಳ್ಳುವುದೆಲ್ಲ ಮಾಡಬಾರದು ಅಂತಾರೆ ವೈದ್ಯರು. 4 ಗಂಟೆ ನಿದ್ರಿಸಿದರೆ, ನೀವು ಆರೋಗ್ಯವಾಗಿರುತ್ತೀರಿ. ಆದರೆ ನನಗೆ ನಿದ್ರೆಯೇ ಬಂದಿಲ್ಲ. ಅಥವಾ ನಿದ್ರೆ ಕಡಿಮೆಯಾಯ್ತು ಅನ್ನೋದನ್ನೇ ನೀವು ಯೋಚಿಸಿದರೆ, ಅದರಿಂದ ಪ್ರಯೋಜನವಾಗುವುದಿಲ್ಲ.
ಉತ್ತಮ ಆಹಾರ, ಮನೆಗೆಲಸ ಮಾಡಬೇಕು. ಮೊಬೈಲ್, ಟಿವಿ ನೊಡುವುದನ್ನು ಕೊಂಚ ಕಡಿಮೆ ಮಾಡಿದಾಗ, ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..




