MIGRAINE ತಲೆನೋವಿಗೆ ಮುಕ್ತಿ ಇಲ್ವಾ? ಇದನ್ನು ಕಂಟ್ರೋಲ್ ಮಾಡೋದು ಹೇಗೆ..?

Health Tips: ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಕಂಪ್ಯೂಟರ್‌ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಸರಿಯಾದ ಸಮಯಕ್ಕೆ ಊಟ, ಆಹಾರ ಸೇವಿಸದೇ, ಹಸಿವಿನಿಂದ ಕೆಲಸ ಮಾಡುವವರೇ ಹೆಚ್ಚು. ಈ ಕಾರಣದಿಂದಲೇ ಹಲವರಿಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಒಮ್ಮೆ ಮೈಗ್ರೇನ್ ಸಮಸ್ಯೆ ಬಂದ್ರೆ, ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವಾಾ..? ಅದನ್ನು ಕಂಟ್ರೋಲ್ ಮಾಡೋದಾದ್ರೂ ಹೇಗೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

ಮೈಗ್ರೇನ್ ಇರುವವರಿಗೆ ಬಿಸಿಲಿಗೆ ಹೋದಾಗ, ತಲೆ ನೋವು ಇನ್ನಷ್ಟು ಹೆಚ್ಚಾಗುತ್ತದೆ. ಅಲ್ಲದೇ, ಕಣ್ಣು ಬಿಡಲು ಕೂಡ ಸಾಧ್ಯವಾಗೋದಿಲ್ಲ. ವಾಂತಿ ಬರುವ ಸಾಧ್ಯತೆ ಕೂಡ ಇದೆ. ಈ ಮೈಗ್ರೇನ್ ಸಮಸ್ಯೆಯನ್ನು ಸಂಂಪೂರ್ಣವಾಗಿ ಕೊನೆಗೊಳಿಸಲು ಸಾಧ್ಯವಿಲ್ಲ. ಆದರೆ ಇದನ್ನು ಕಂಟ್ರೋಲ್ ಮಾಡಬಹುದು ಅಂತಾರೆ ವೈದ್ಯರು.

ಯಾರಿಗಾದರೂ ಕಂಟಿನ್ಯೂ ಆಗಿ ತಲೆನೋವು ಬರುತ್ತಿದ್ದರೆ ಅಂಥವರು ಮೊದಲು ಸ್ಕ್ಯಾನಿಂಗ್ ಮಾಡಿಸಿ, ತಲೆಯಲ್ಲಿ ಗಡ್ಡೆ ಇದೆಯಾ, ಅಥವಾ ಬರೀ ತಲೆನೋವಿನ ಸಮಸ್ಯೆ ಅಷ್ಟೇನಾ ಅಂತಾ ತಿಳಿದುಕೊಳ್ಳಬೇಕು. ಬಳಿಕ ಮೈಗ್ರೇನ್ ಸಮಸ್ಯೆಯೇ ಎಂದು ಕನ್ಫರ್ಮ್ ಆದ ಬಳಿಕ, ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

About The Author