International News: ರಷ್ಯಾ ರಾಜಧಾನಿ ಮಾಸ್ಕೋದ ಮಾಲ್‌ವೊಂದರಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾಂಬ್ ದಾಳಿಗೆ 60ರಿಂದ 70 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಸ್ಥಳದಲ್ಲಿ ಹತ್ತಾರು ಬಾಂಬ್‌ಗಳು ಸ್ಪೋಟಗೊಂಡಿದ್ದು, ಹಲವರು ಸಾವನ್ನಪ್ಪಿದ್ದಲ್ಲದೇ, ಹಲವರಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಏರುತ್ತ ಹೊರಟಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಲ್‌ನ ಇನ್ನೊಂದು ಭಾಗದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿ ನುಗ್ಗಿದ ಐವರು ಭಯೋತ್ಪಾದಕರು ಮನಸ್ಸೊ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಬಾಂಬ್ ದಾಳಿಗೆ ಮಾಲ್ ಹೊತ್ತಿ ಉರಿದಿದ್ದು, ಹಲವರ ರಕ್ಷಣೆ ಮಾಡಲಾಗಿದೆ. ಇನ್ನು ಕೂಡ ಕಾರ್ಯಾಚರಣೆ ಮುಂದುವರಿದಿದೆ. ಐವರು ಭಯೋತ್ಪಾದಕರಲ್ಲಿ ಓರ್ವ ಭಯೋತ್ಪಾದಕನನ್ನು ಬಂಧಿಸಲಾಗಿದೆ.
ಇನ್ನು ಈ ಕೃತ್ಯವೆಸಗಿದ್ದು ನಾವೇ ಎಂದು ಐಸಿಸ್ ಸಂಘಟನೆ ಒಪ್ಪಿಕೊಂಡಿದೆ. ಇನ್ನು ಮಾರ್ಚ್ 7ರಂದು ಅಮೆರಿಕಾ ಭಯೋತ್ಪಾದಕ ದಾಳಿ ಬಗ್ಗೆ ರಷ್ಯಾಗೆ ಎಚ್ಚರಿಕೆ ನೀಡಿತ್ತು.
ನಾನು ಬದುಕಿರುವವರೆಗೆ ಕನ್ನಡಿಗನೇ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದರಾಮಯ್ಯ
ಭೂತಾನ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ.. ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ
ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್