International News: ಶುಕ್ರವಾರದಿಂದ ಇಸ್ರೇಲ್- ಹಮಾಸ್ ಯುದ್ಧದಲ್ಲಿ ಕದನ ವಿರಾಮವಾಗಿದ್ದು, ಹಮಾಸ್ 13 ಥೈಲ್ಯಾಂಡ್ ಒತ್ತೆಯಾಳುಗಳನ್ನು ಸೇರಿ, ಒಟ್ಟು 24 ಜನರನ್ನು ಬಿಡುಗಡೆ ಮಾಡಿದೆ.
ಥಾಯ್ಲ್ಯಾಂಡ್ ಪ್ರಧಾನಿ ಶ್ರೇತಾ ಥಾವಿಸಿನ್ ಈ ಬಗ್ಗೆ ಮಾತನಾಡಿದ್ದು, ಇಸ್ರೇಲ್ ಮೇಲೆ ದಾಳಿಯ ವೇಳೆ ಅಪಹರಣಕ್ಕೆ ಒಳಗಾಗಿದ್ದ, 12 ಥಾಯ್ಲ್ಯಾಂಡ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿವಾಲಯದ ವಕ್ತಾರರಾದ ಮಜೀದ್ ಅಲ್-ಅನ್ಸಾರಿ ಮಾತನಾಡಿದ್ದು, 12 ಥಾಯ್ಲ್ಯಾಂಡ್ ನಾಗಿಕರು ಮತ್ತು ಉಳಿದ ಇಸ್ರೇಲ್ ನಾಗರಿಕರು ಸೇರಿ ಒಟ್ಟು 24 ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರದ ಕದನ ವಿರಾಮದಲ್ಲಿ ಇಸ್ರೇಲ್ ಪ್ಯಾಲೇಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡಿತ್ತು. ಮಹಿಳಾ ಖೈದಿಗಳು, ಕಲ್ಲು ತೂರಾಟದಂಥ ಕೃತ್ಯಗಳಲ್ಲಿ ಜೈಲು ಪಾಲಾಗಿದ್ದ, ಅಪ್ರಾಪ್ತರ, ಕೊಲೆ ಯತ್ನದ ಆರೋಪಿಗಳನ್ನು ಬಿಡುಗಡೆ ಮಾಡಿದ ಬದಲಾಗಿ, ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
ಈ ಕದನ ವಿರಾಮದಿಂದ ಕಂಗಾಲಾಗಿದ್ದ ಗಾಜಾದ ಜನರಿಗೆ ಮರುಜೀವ ಬಂದಂತಾಗಿದೆ. ಸರಿಯಾಗಿ ಆಹಾರ ನೀರು ಇಲ್ಲದೇ, ಒದ್ದಾಡಿದ್ದ ಜನ, ಈಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಗಾಜಾದಲ್ಲಿ ಎಂಥ ಪರಿಸ್ಥಿತಿ ನಿರ್ಮಾಣವಾಗಿತ್ತೆಂದರೆ, ತಮ್ಮ ಸ್ವಂತ ಮನೆಗಳನ್ನ ತೊರೆದು ಜನ, ದೊಡ್ಡ ದೊಡ್ಡ ಕಟ್ಟಡದ ಕೆಳಭಾಗದಲ್ಲಿ ಹೋಗಿ, ಅವಿತು ಕುಳಿತು, ಪ್ರಾಣ ಉಳಿಸಿಕೊಳ್ಳಬೇಕಿತ್ತು. ಅಲ್ಲದೇ, ಎಷ್ಟೋ ಜನ ಸರಿಯಾಗಿ ಆಹಾರ, ನೀರು ಸಿಗದೇ ಪ್ರಾಣ ಬಿಟ್ಟಿದ್ದಾರೆ. ಮತ್ತೆ ಕೆಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಅಮಿತ್ ಶಾ ನಮ್ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು : ವಿ.ಸೋಮಣ್ಣ ಅಳಲು
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ: ಶ್ರೀರಾಮುಲು ಏನಂದ್ರು ಗೊತ್ತಾ?